ಹಾಸನ: ಹಾಸನದಲ್ಲಿ ಮಾಜಿ ಶಾಸಕ ಪ್ರೀತಂಗೌಡ ಮಾತನಾಡಿದ್ದು, ಚುನಾವಣಾ ಸಮಯದಲ್ಲಿ ತನಗೆ 77,300 ಮತ ನೀಡಿದ ಮತದಾರರಿಗೆ ಧನ್ಯವಾದ ಹೇಳಿದ್ದಾರೆ.
ಕಳೆದ ಬಾರಿಗಿಂತ 14 ಸಾವಿರ ಮತ ಹೆಚ್ಚಾಗಿ ನೀಡಿ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ನಾನು ಮಾಡಿದ ಕೆಲಸಕ್ಕೆ ಆಶೀರ್ವಾದ ಮಾಡಿದಾರೆ. ನನ್ನ ಅಭಿವೃದ್ಧಿ ಕೆಲಸ ನೋಡಿ, ಸೇವೆ ಗುರುತಿಸಿ ಆಶೀರ್ವಾದ ಮಾಡಿದಾರೆ. ಚುನಾವಣಾ ಫಲಿತಾಂಶ ವಿರುದ್ದವಾಗಿ ಇರಬಹುದು. ಆದರೆ ಜನರ ಆಶೀರ್ವಾದ ನನ್ನ ಮೇಲೆ ಇದೆ ಎನ್ನೊದಕ್ಕೆ, ಕಳೆದ ಬಾರಿ ಗಿಂತ ಶೇಕಡಾ 25 ಜನ ಆಶೀರ್ವಾದ ಮಾಡಿರೋದೆ ಸಾಕ್ಷಿ ನನಗೆ ಶಕ್ತಿ ತುಂಬಿದ ಎಲ್ಲರುಗು ಧನ್ಯವಾದ ಹೇಳುತ್ತೇನೆ ಎಂದು ಪ್ರೀತಂಗೌಡ ಹೇಳಿದ್ದಾರೆ..
ಕಳೆದ ಬಾರಿ 13 ಸಾವಿರದಲ್ಲಿ ಗೆದ್ದಿದ್ದೆ, ಆದರೆ ಅದರ ಅರ್ಧದ ಮತಗಳಿಂದ ಹಿನ್ನೆಡೆ ಆಗಿದೆ. ಸ್ವಾತಂತ್ರ್ಯ ಬಂದಾಗಿಂದ ಇಲ್ಲಿಯತನಕ ಕಾಂಗ್ರೆಸ್ ಗೆ ಶೇಕಡಾ 15 ಪರ್ಸೆಂಟ್ ಮತ ಕಡಿಮೆ ಪಡೆದಿರಲಿಲ್ಲ. ಇಡಿ ರಾಜ್ಯದಲ್ಲಿ ಅತೀ ಕಡಿಮೆ ಮತ ಪಡೆದ ಕ್ಷೇತ್ರ ಕಾಂಗ್ರೆಸ್ ನಲ್ಲಿ ಅದು ಹಾಸನ ಕ್ಷೇತ್ರ. ಚುನಾವಣೆ ಹೇಗೆ ನಡೆದಿದೆ ಎನ್ನೋದು ಎಲ್ಲರಿಗು ಗೊತ್ತಿರೊ ವಿಚಾರ. ಬಹಳ ಸ್ಪೂರ್ತಿದಾಯಕ ವಾಗಿ ಈ ಫಲಿತಾಂಶ ವನ್ನು ತೆಗೆದುಕೊಂಡಿದ್ದೇನೆ. ಮುಂದಿನ ಐದು ವರ್ಷಗಳಲ್ಲಿ ನಾನು ಮಾಡಿದ ಕೆಲಸವನ್ನು ಮುಂದುವರೆಸಿಕೊಂಡು ಹೋಗಲಿ. ಸ್ವರೂಪ್ ಗೌಡಗೆ ಒಂದು ಐಡಿಯಾ ಇದ್ದರೆ ಅವರೂ ವಿದ್ಯಾವಂತರಿದಾರೆ. ಅವರೂ ಯುವಕರಿದಾರೆ, ಅವರೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲಸ ಮಾಡಲಿ ಎಂದು ಆಶೀಸುತ್ತೇನೆ ಎಂದು ಪ್ರೀತಂಗೌಡ ಹೇಳಿದ್ದಾರೆ.
ಅಷ್ಟೇ ಅಲ್ಲದೇ, ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗೊ ಕೆಲಸವನ್ನು ನೂತನ ಶಾಸಕರು ಮಾಡಲಿ ಎಂದು ಹಾರೈಸುತ್ತೇನೆ. ತಾಂತ್ರಿಕ ಸೋಲು ಗೆಲುವಿಗೆ ಬದಲಾಗಿ ಮಾರಲ್ ಗೆಲುವು ಎಲ್ಲಿದೆ ಎನ್ಮೋ ಚರ್ಚೆ ನಡೆಯುತ್ತಿದೆ. ಮುಸ್ಲಿಂ ಬಂಧುಗಳನ್ನು ಅತ್ಯಂತ ಹೆಚ್ಚು ಪ್ರೀತಿಸೊ ವ್ಯಕ್ತಿ ಪ್ರೀತಂಗೌಡ. ಕೋವಿಡ್ ಕಾಲದಲ್ಲಿ ಯಾರು ನೂರು ಗ್ರಾಂ ಅಕ್ಕಿ ಕೊಟ್ಟಿರಲಿಲ್ಲ. ಆದರೆ ಎಲ್ಲರಿಗು ಎರಡು ಕೋವಿಡ್ ಕಾಲದಲ್ಲಿ ಅವರಿಗೆ ನೆರವಾಗಿರೋದು ನಾನು. ಅವರನ್ನ ಭಯಪಡಿಸೊ, ಆತಂಕ ಸೃಷ್ಟಿಸೊ ಅವಶ್ಯಕತೆ ಇಲ್ಲ. ಚುನಾವಣೆ ವಿಶ್ಲೇಷಣೆ ಮಾಡುವಾಗ ಮಾತಾಡೊ ಹಕ್ಕು ಎಲ್ಲರಿಗೂ ಇದೆ ಎಂದು ಪ್ರೀತಂಗೌಡ ಹೇಳಿದ್ದಾರೆ.
‘ಇಬ್ಬರಿಗೂ ಎರಡೆರಡು ವರ್ಷ ಸಿಎಂ ಸ್ಥಾನ ನೀಡಲಿ. ಉಳಿದ ಒಂದು ವರ್ಷ ದಲಿತರಿಗೆ ಸಿಎಂ ಸ್ಥಾನ ನೀಡಲಿ’
ಎಸ್.ಎನ್.ನಾರಾಯಣಸ್ವಾಮಿ ಸಚಿವರಾಗಬೇಕು ಎಂದು ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳು..