Friday, April 19, 2024

Latest Posts

ನಿಮ್ಮ ಮನಸ್ಸಿಗೆ ಯಾರಾದರೂ ನೋವುಂಟು ಮಾಡಿದ್ದಲ್ಲಿ, ಹೀಗೆ ಮಾಡಿ..

- Advertisement -

ಮನುಷ್ಯ ಎಂದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ನೋವು ತಿನ್ನಲೇಬೇಕಾಗುತ್ತದೆ. ಕೆಲವರು ಕೆಲ ಕೆಲಸಗಳಿಂದ, ಕೆಲವರು ತಮ್ಮ ಮಾತುಗಳಿಂದ, ಇನ್ನು ಕೆಲವರು ತಮ್ಮ ಮೌನದಿಂದಲೇ, ಇನ್ನೊಬ್ಬರ ಮನಸ್ಸನ್ನ ಘಾಸಿಗೊಳಿಸುತ್ತಾರೆ. ಆದರೆ ಚಾಣಕ್ಯರ ಪ್ರಕಾರ, ಯಾರಾದರೂ ನಮ್ಮ ಮನಸ್ಸಿಗೆ ನೋವು ಮಾಡಿದರೆ, ನಾವು ಕೂಡ ಅದೇ ರೀತಿ ಪ್ರತಿಕ್ರಿಯಿಸಬೇಕಂತೆ. ಹಾಗಾದ್ರೆ ಯಾವ ರೀತಿ ಪ್ರತಿಕ್ರಿಯಿಸಬೇಕು ಅಂತಾ ತಿಳಿಯೋಣ ಬನ್ನಿ..

ಇಂದಿನ ಕಾಲದಲ್ಲಿ ಮನುಷ್ಯನನ ಬೇಸರಕ್ಕೆ ಪ್ರಮುಖ ಕಾರಣವೇ ಹಣ. ಹಣದಿಂದ ನೆಮ್ಮದಿಯನ್ನು ಕೊಂಡುಕೊಳ್ಳುವುದಕ್ಕೆ ಆಗದಿದ್ದರೂ ಸಹ, ಮನುಷ್ಯನ ನೆಮ್ಮದಿ ಹಾಳು ಮಾಡುವುದು ಹಣದ ಕೊರತೆಯೇ. ಯಾವುದಾದರೂ ಜಗಳವಾದರೆ, ಅದರ ಮೂಲ ನೋಡಿದರೆ, ಹಣವೇ ಕಾರಣವಾಗಿರುತ್ತದೆ. ಹಾಗಾಗಿ ನೀವು ಹಣ ಕೂಡಿಡುವುದನ್ನ ಕಲಿಯಿರಿ ಎನ್ನುತ್ತಾರೆ ಚಾಣಕ್ಯರು. ನೀವು ದುಡಿಯುವ ಹಣದಲ್ಲಿ, ಕೊಂಚ ನಿಮ್ಮ ಅವಶ್ಯಕವಾದ ಖರ್ಚಿಗೆ ಮಾತ್ರ ತೆಗೆದಿಟ್ಟುಕೊಂಡು, ಉಳಿದ ದೊಡ್ಡ ಮೊತ್ತದ ಹಣವನ್ನ ನೀವು ಕೂಡಿಡಬೇಕು. ಇಂದಿನವರ ರೀತಿ ಹೇಳುವುದಿದ್ದರೆ, ಇನ್ವೆಸ್ಟ್ ಮಾಡಬೇಕು. ಬ್ಯಾಂಕ್‌ನಲ್ಲಿ ಇರಿಸಿದರೆ,  ಬಡ್ಡಿ ಬರುತ್ತದೆ. ಇದೇ ರೀತಿ ದುಡ್ಡಿನ ಸದುಪಯೋಗ ಪಡಿಯಬೇಕು.

ಎರಡನೇಯ ಕೆಲಸವೆಂದರೆ, ಯಾವ ಕಾರಣದಿಂದ ನಿಮ್ಮ ಮನಸ್ಸಿಗೆ ನೋವುಂಟಾಗಿದೆ. ನೀವು ಹೆಚ್ಚು ಮಾತನಾಡಿದ್ದಕ್ಕಾಗಿ, ಅಥವಾ ಸಲುಗೆಯಿಂದ ಇದ್ದುದ್ದಕ್ಕಾಗಿ, ಅಥವಾ, ಬೇರೆಯವರ ವಸ್ತುವನ್ನ ಕೇಳದೇ, ಬಳಸಿದ್ದಕ್ಕಾಗಿ, ಹೀಗೆ ಹಲವಾರು ಕಾರಣಗಳಿರುತ್ತದೆ. ಆ ಕಾರಣಕ್ಕಾಗಿ ಬೇರೆಯವರು ನಿಮ್ಮ ಮನಸ್ಸಿಗೆ ನೋವುಂಟು ಮಾಡಿರುತ್ತಾರೆ. ಆದರೆ ಇನ್ನೊಮ್ಮೆ ನಿಮ್ಮ ಕೈಯಿಂದ ಅಂಥ ತಪ್ಪು ನಡೆಯದಂತೆ ನೀವು ಎಚ್ಚರವಹಿಸಬೇಕು. ನಿಮ್ಮ ಮಿತಿಯಲ್ಲಿ ನೀವಿರಲು ಕಲಿಯಬೇಕು. ಆಗ ಯಾರೂ ನಿಮ್ಮ ಮನಸ್ಸನ್ನು ನೋಯಿಸಲು ಸಾಧ್ಯವಾಗುವುದಿಲ್ಲ.

ಮೂರನೇಯ ಕೆಲಸ, ಯಾವುದೇ ಕಾರಣಕ್ಕೂ, ನಿಮ್ಮ ಯಶಸ್ಸಿಗಾಗಿ, ಅಥವಾ ಯಾರನ್ನಾದರೂ, ಯಾವುದನ್ನಾದರೂ ಪಡೆಯುವುದಕ್ಕಾಗಿ, ಸುಳ್ಳು ಮತ್ತು ಮೋಸದ ಸಹಾಯ ಎಂದಿಗೂ ತೆಗೆದುಕೊಳ್ಳಬೇಡಿ. ಯಾರು ಸುಳ್ಳು ಮತ್ತು ಮೋಸದ ಸಹಾಯ ತೆಗೆದುಕೊಂಡು, ಏನಾದರೂ ಪಡೆದುಕೊಳ್ಳುತ್ತಾರೋ, ಅಂಥವರ ಮೇಲೆ ಯಾರೂ ಎಂದಿಗೂ ನಂಬಿಕೆ ಇಡುವುದಿಲ್ಲ. ಆಗ ನಿಮ್ಮ ಮನಸ್ಸಿಗೆ ಶಾಶ್ವತವಾಗಿ ನೋವುಂಟಾಗುತ್ತದೆ. ಹಾಗಾಗಿ ಸುಳ್ಳು, ಮೋಸದಿಂದ ದೂರವಿರಿ.

ನಾಲ್ಕನೇಯ ಕೆಲಸ, ನೀವು ನಿಮ್ಮ ಲಿಮಿಟ್‌ನಲ್ಲಿದ್ದರೂ, ಯಾರನ್ನೂ ನಿರ್ಲಕ್ಷಿಸಬೇಡಿ. ಎಲ್ಲರಿಗೂ ಬೆಲೆ ಕೊಡಿ. ಕೆಲವರು ಬಡವರ ಮಾತಿಗೆ, ಸ್ನೇಹಕ್ಕೆ ಬೆಲೆ ಕೊಡುವುದಿಲ್ಲ. ಕೆಲವರು ಸುಂದರವಿಲ್ಲದವರ ಮಾತಿಗೆ, ಸ್ನೇಹಕ್ಕೆ ಬೆಲೆ ಕೊಡುವುದಿಲ್ಲ. ಶ್ರೀಮಂತರ ಬಳಿ, ಚೆಂದವಿರುವವರ ಬಳಿ ಬೇಗ ಅಟ್ರ್ಯಾಕ್ಟ್ ಆಗುತ್ತಾರೆ. ಆದರೆ, ನೀವು ಅದೆಲ್ಲಕ್ಕಿಂತ ಹೆಚ್‌ಚಾಗಿ, ಗಮನಿಸಬೇಕಾದ್ದು, ಅವರ ಗುಣಗಳನ್ನ. ನಿಮ್ಮನ್ನು ಮಾತನಾಡಿಸುವವರ, ಸ್ನೇಹ ಬೆಳೆಸಲು ಇಚ್ಛಿಸುವವರ ಗುಣ ಉತ್ತಮವಾಗಿದ್ದಲ್ಲಿ, ಅವರನ್ನೆಂದಿಗೂ ನಿರ್ಲಕ್ಷಿಸಬೇಡಿ. ಇಲ್ಲವಾದಲ್ಲಿ, ಪಶ್ಚಾತಾಪದ ಮೂಲಕ, ನಿಮ್ಮ ಮನಸ್ಸಿಗೆ ನೋವಾಗಬಹುದು.

ಬ್ರಾಹ್ಮಿ ಮುಹೂರ್ತದಲ್ಲಿ ಇಂಥ ತಪ್ಪನ್ನ ಎಂದಿಗೂ ಮಾಡಬೇಡಿ..

ಇಂಥ ಜನರನ್ನು ಎಂದಿಗೂ ಮನೆಗೆ ಬರಮಾಡಿಕೊಳ್ಳಬೇಡಿ..

ನಿಮ್ಮ ಹಣೆಬರದಲ್ಲಿರುವ ಈ 5 ವಿಚಾರವನ್ನು ಯಾರೂ ಬದಲಾಯಿಸಲಾಗುವುದಿಲ್ಲ..

- Advertisement -

Latest Posts

Don't Miss