Sunday, September 8, 2024

Latest Posts

ದಸರೆಗೆ ಮೈಸೂರು ಸಜ್ಜು- ಮದುವಣಗಿತ್ತಿಯಂತೆ ಸಿಂಗಾಗೊಳ್ಳುತ್ತಿದೆ ಅರಮನೆ

- Advertisement -

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದ್ದು, ಅಂಬಾವಿಲಾಸ ಅರಮನೆಗೆ ಬಣ್ಣ ಬಳಿಯುವ ಕೆಲಸ ಬರದಿಂದ ಸಾಗುತ್ತಿದೆ.

ಅರಮನೆಗೆ ಆಗಮಿಸಿರೋ ಗಜಪಡೆ ಜಂಬೂಸವಾರಿಯ ತಾಲೀಮಿಗೆ ಸಿದ್ಧವಾಗ್ತಿವೆ. ಅರಮನೆಯ ಒಳ ಹೊರಗೂ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಸಣ್ಣ-ಪುಟ್ಟ ದುರಸ್ತಿಕಾರ್ಯ ಕೂಡ ನಡೆಯುತ್ತಿದೆ. ಅರಮನೆಯ ಜಯರಾಮ, ಜಯಮಾರ್ತಾಂಡ ದ್ವಾರ, ಸೇರಿದಂತೆ ಎಲ್ಲೆಡೆ ಬಣ್ಣ ಬಳಿಯೋ ಕಾರ್ಯ ಬರದಿಂದ ಸಾಗುತ್ತಿದೆ. ಇನ್ನು ದಸರಾದ ಕೇಂದ್ರಬಿಂದುವಾದ ಕುಸ್ತಿ ಅಖಾಡ ಕೂಡ ಹದ ಮಾಡಲಾಗ್ತಿದೆ.


ಇನ್ನು ಈ ಮಧ್ಯೆ ಅರಮನೆಗೆ ಆಗಮಿಸೋ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಕೊರೋನಾ ಸೋಂಕು ಕೊಂಚ ತಗ್ಗಿರೋ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳೋದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಇದಕ್ಕೆ ಅರಮನೆ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆಯನ್ನ ಈಗಿನಿಂದಲೇ ಕೈಗೊಳ್ಳುತ್ತಿದೆ.

- Advertisement -

Latest Posts

Don't Miss