ಪತ್ರ ಬರೆಯುವ ಮೂಲಕ ಅವಿವಾ ಮತ್ತು ಅಭಿಷೇಕ್‌ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ

 Movie news: ಅಭಿಷೇಕ್ ಅಂಬರೀಷ್ ಮತ್ತು ಅವಿವಾ ವಿವಾಹವಾಗಿದ್ದು, ಪ್ರಧಾನಿ ಮೋದಿ ಪತ್ರ ಕಳಿಸುವ ಮೂಲಕ ಶುಭ ಕೋರಿದ್ದಾರೆ. ಸುಮಲತಾ ಅಂಬರೀಷ್, ಪ್ರಧಾನಿ ಮೋದಿಗೆ ವಿವಾಹಕ್ಕೆ ಆಗಮಿಸುವಂತೆ ಆಮಂತ್ರಣ ಪತ್ರಿಕೆ ನೀಡಿದ್ದರು. ಆದರೆ ವಿವಾಹಕ್ಕೆ ಬರಲಾಗದ ಕಾರಣ, ಮೋದಿ, ಅಭಿಷೇಕ್ ಮತ್ತು ಅವಿವಾಗೆ ಶುಭಕೋರಿ ಪತ್ರ ಬರೆದಿದ್ದಾರೆ.

ಅಭಿಷೇಕ್-ಅವಿವಾ ವಿವಾಹದ ಬಗ್ಗೆ ಕೇಳಿ ಸಂತೋಷವಾಯಿತು. ನನ್ನನ್ನು ಈ ಶುಭ ಕಾರ್ಯಕ್ರಮಕ್ಕೆ ಆಮಂತ್ರಿಸಿದ್ದಕ್ಕೆ, ಧನ್ಯವಾದಗಳು. ಇವರು ಜೀವನದ ಹೊಸ ಹಂತಕ್ಕೆ ಕಾಲಿರಿಸುತ್ತಿದ್ದು, ಈ ಪಯಣ ಸಂತೋಷ ಮತ್ತು ಸಮೃದ್ಧಿಯಿಂದ ತುಂಬಿರಲಿ. ಈ ಆಶೀರ್ವಾದದೊಂದಿಗೆ ನಾನು ಈ ಜೋಡಿಗೆ ಶುಭಹಾರೈಸುತ್ತೇನೆ. ಬಂಧು ಬಾಂಧವರಿಗೂ ಶುಭಾಶಯಗಳು ಎಂದು ಪ್ರಧಾನಿ ಪತ್ರ ಬರೆದಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಅವಿವಾ ಮತ್ತು ಅಭಿಷೇಕ್, ಗುರು ಹಿರಿಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಐಷಾರಾಮಿ ಹೊಟೇಲ್‌ನಲ್ಲಿ, ರಿಸೆಪ್ಕ್ಷನ್ ಕೂಡ ನಡೆದಿತ್ತು. ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ ಗಣ್ಯರು ಸೇರಿ ಹಲವರು ಭಾಗವಹಿಸಿದ್ದರು.

ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್ ನಲ್ಲಿ ಸ್ಟೇಜ್ ನಿರ್ಮಾಣವಾಗಿದ್ದು, 300 ಶಾಗ್ಲೀಯರ್ಸ್.. ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್ ಡಿಸೈನ್ ಸ್ಟೇಜ್ ನಿರ್ಮಿಸಲಾಗಿತ್ತು. ಭಾರತದಲ್ಲೇ ಪ್ರಥಮ ಬಾರಿಗೆ ಈ ರೀತಿ ಸ್ಟೇಜ್ ನಿರ್ಮಿಸಲಾಗಿದ್ದು, ದೆಹಲಿಯ ಮೊರಾದಾಬಾದ್‌ನಿಂದ ಇವನ್ನೆಲ್ಲ ತರಿಸಲಾಗಿತ್ತು.

ಅಂಬಿ ಸಮಾಧಿಯ ಮೇಲೆ ಮಗನ ಮದುವೆಯ ಆಮಂತ್ರಣ ಪತ್ರಿಕೆ ಇಟ್ಟು ಪೂಜೆ ಸಲ್ಲಿಸಿದ ಸುಮಲತಾ..

ಅಭಿಷೇಕ್ ಅಂಬರೀಶ್- ಅವಿವಾ ಬಿದ್ದಪ್ಪ ರಿಸೆಪ್ಶನ್: Photos

ಅಭಿಷೇಕ್ ಅಂಬರೀಷ್- ಅವಿವಾ ಆರತಕ್ಷತೆ: ಭಾರತದಲ್ಲೇ ಮೊದಲ ಬಾರಿ ಶಾಗ್ಲಿಯರ್‌ ಡಿಸೈನ್ ಸ್ಟೇಜ್ ನಿರ್ಮಾಣ

About The Author