Movie News: ಒಂದಲ್ಲ ಒಂದು ಹೈಡ್ರಾಮಾ ಮಾಡುತ್ತ ಸುದ್ದಿಯಾಗುವ ನಟಿ ರಾಖಿ ಸಾವಂತ್, ಇದೀಗ ತಾವು ಮಾಡಿದ ತಪ್ಪಿನಿಂದಲೇ ಪೇಚಿಗೆ ಸಿಲುಕಿದ್ದಾರೆ. ಕೆಲ ತಿಂಗಳ ಹಿಂದೆ ಮೈಸೂರಿನ ಆದಿಲ್‌ನನ್ನು ಪ್ರೀತಿಸಿ, ಬಳಿಕ ಆತ ತನಗೆ ಮೋಸ ಮಾಡಿದ ಎಂದು, ಅವನ ವಿರುದ್ಧ ದೂರು ನೀಡಿ, ಮಾಧ್ಯಮದವರ ಮುಂದೆಯೂ ಅಳಲು ತೋಡಿಕೊಂಡಿದ್ದರು.
ರಾಖಿ ಆರೋಪದಿಂದ ಆದಿಲ್ ಕೆಲ ಕಾಲ ಜೈಲಿಗೂ ಹೋಗಿ ಬರಬೇಕಾಯಿತು. ಇದೀಗ ಆದಿಲ್ ರಾಖಿ ವಿರುದ್ಧ, ಖಾಸಗಿ ವೀಡಿಯೋ ಲೀಕ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರು ನೀಡಿದ್ದಾರೆ. ಅದಕ್ಕಾಗಿ ತನಗೆ ಜೈಲು ಶಿಕ್ಷೆಯಾಗಬಾರದು ಎಂದು, ರಾಖಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಆಕೆಯ ಜಾಮೀನು ಅರ್ಜಿ ರದ್ದಾಗಿದ್ದು, ಕೆಲ ದಿನಗಳಲ್ಲೇ ಆಕೆಯೂ ಕೃಷ್ಣನ ಜನ್ಮಸ್ಥಳಕ್ಕೆ ಹೋಗಲಿದ್ದಾರೆ ಎಂಬ ಸುದ್ದಿ ಇದೆ.
ಕೆಲ ದಿನಗಳ ಹಿಂದೆ ರಾಖಿ ಸಾವಂತ್, ಮಾಧ್ಯಮದವರಿಗೆ ಮತ್ತು ಕೆಲವು ವಾಟ್ಸಪ್ ಗ್ರೂಪ್‌ಗಳಲ್ಲಿ ತಮ್ಮ ಮತ್ತು ಆದಿಲ್‌ನ ಕೆಲವು ಖಾಸಗಿ ಫೋಟೋ ಮತ್ತು ವೀಡಿಯೋವನ್ನು ಶೇರ್ ಮಾಡಿದ್ದರು. ಈ ವಿರುದ್ಧ ಆದಿಲ್ ದೂರು ದಾಖಲಿಸಿದ್ದು, ಅದರ ವಿಚಾರಣೆ ನಡೆಯುತ್ತಿರುವಾಗಲೇ, ರಾಖಿ ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಆದರೆ ಇದೀಗ ಅರ್ಜಿ ವಜಾ ಆಗಿದ್ದು, ರಾಖಿಗೆ ಬಂಧನದದ ಭೀತಿ ಉಂಟಾಗಿದೆ.
ಫೆಬ್ರವರಿಯಲ್ಲಿ ತೆರೆಗೆ “ಪುರುಷೋತ್ತಮನ ಪ್ರಸಂಗ”: ದೇವದಾಸ್ ಕಾಪಿಕಾಡ್ ನಿರ್ದೇಶನದ ಮೊದಲ ಕನ್ನಡ ಚಿತ್ರ
ಚಿತ್ರಸಂತೆಯಲ್ಲಿ 31 DAYS ಸಿನಿಮಾ ಫಸ್ಟ್ ಲುಕ್ ರಿಲೀಸ್: ಇದು ನಿರಂಜನ್ ಶೆಟ್ಟಿ ನಟನೆಯ ಚಿತ್ರ