Movie News: ಗಿಚ್ಚಿಗಿಲಿ ಗಿಲಿ, ಮಜಾಭಾರತ ಖ್ಯಾತಿಯ ನಟಿ ಪ್ರಿಯಾಂಕಾ ಕಾಮತ್, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರು ಮೂಲದ ಪ್ರಿಯಾಂಕಾ, ಕುಂದಾಪುರ ಮೂಲದ ಅಮಿತ್ ಅವರನ್ನು ವಿವಾಹವಾಗಿದ್ದಾರೆ.
ಕಳೆದೆರಡು ದಿನಗಳಿಂದ ಮೆಹಂದಿ ಶಾಸ್ತ್ರ, ಹಳದಿ ಶಾಸ್ತ್ರ ಸೇರಿ ಹಲವು ಕಾರ್ಯಕ್ರಮಗಳು ನಡೆದಿತ್ತು. ಜೊತೆಗೆ ದೇವಸ್ಥಾನದಲ್ಲಿ ಈ ಜೋಡಿ ಫೋಟೋಶೂಟ್ ಕೂಡ ಮಾಡಿಸಿತ್ತು. ಇಂದು ಮದುವೆ ಕಾರ್ಯಕ್ರಮವಿದ್ದು, ಹಲವು ಕಿರುತೆರೆ ನಟ-ನಟಿಯರು ಬಂದು, ಮಧುಮಕ್ಕಳಿಗೆ ಹಾರೈಸಿದ್ದಾರೆ.
ಜನವರಿಯಲ್ಲಿ ಈ ಜೋಡಿಯ ಎಂಗೇಜ್‌ಮೆಂಟ್ ಆಗಿತ್ತು. ಆದರೆ ಪ್ರಿಯಾಂಕಾಗೆ ಅನಾರೋಗ್ಯವಿದ್ದ ಕಾರಣ, ಅವರಿಗೆ 2 ಬಾರಿ ಸರ್ಜರಿಯಾಗಿತ್ತು. ಆಗ ಅವರು ಅಮಿತ್‌ಗೆ ನೀನು ಬೇರೆ ಹುಡುಗಿಯನ್ನು ವಿವಾಹವಾಗು ಎಂದಿದ್ದರು. ಆದರೂ ಕೂಡ ಅಮಿತ್ ಪ್ರಿಯಾಂಕಾರ ಕೈ ಬಿಡದೇ, ಆಕೆಯ ಜೊತೆಗಿದ್ದು, ಆಕೆಯ ಆರೈಕೆ ಮಾಡಿದ್ದರು.
ಬಳಿಕ ಅಮಿತ್ ಕುಟುಂಬ ಮತ್ತು ಪ್ರಿಯಾಂಕಾ ಮಲೇಶಿಯಾ ಪ್ರವಾಸಕ್ಕೆ ಹೋಗಿತ್ತು. ಜೊತೆಗೆ ಈ ಜೋಡಿ ಬೇರೆ ದೇಶಗಳಿಗೂ ಟ್ರಿಪ್ ಹೋಗಿದ್ದು, ಇಂದು ಇವರು ಹಸೆಮಣೆ ಏರಿದ್ದಾರೆ.
‘ಕನ್ನಡ ಚಿತ್ರರಂಗವು ಕೆಸಿಸಿ ಪಂದ್ಯಾವಳಿ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದೆ’
ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಈ ಸೆಲೆಬ್ರಿಟಿಗಳಿಗೆ ಸಿಕ್ಕಿದೆ ಆಹ್ವಾನ..




