Sunday, September 8, 2024

Latest Posts

Pro Kabaddi League ಇಂದು ಒಟ್ಟು 3 ಪಂದ್ಯಗಳು..!

- Advertisement -

ಪ್ರೊ ಕಬಡ್ಡಿ(Pro Kabaddi) ಲೀಗ್ ಆವೃತ್ತಿಯ ಪೈಕಿ ಇಲ್ಲಿಯವರೆಗೂ 94 ಪಂದ್ಯಗಳು ಈಗಾಗಲೇ ಮುಗಿದಿದ್ದು, ಇಂದು ಒಟ್ಟು 3 ಪಂದ್ಯಗಳು (3 matches) ನಡೆಯಲಿವೆ. ಈ 3 ಪಂದ್ಯಗಳ ಪೈಕಿ ಪ್ರಥಮ ಪಂದ್ಯದಲ್ಲಿ ಯು ಮುಂಬಾ ಮತ್ತು ತಮಿಳ್ ತಲೈವಾಸ್ (U Mumba and Tamil Talaivas) ತಂಡಗಳು ಸೆಣಸಾಟ ನಡೆಸಿಲಿವೆ. ದ್ವಿತೀಯ ಪಂದ್ಯದಲ್ಲಿ ಯುಪಿ ಯೋಧಾ ಮತ್ತು ತೆಲುಗು ಟೈಟಾನ್ಸ್ (UP Yodha and Telugu Titans) ತಂಡಗಳು ಸೆಣಸಾಟ ನಡೆಸಲಿವೆ. ತೃತೀಯ ಪಂದ್ಯದಲ್ಲಿ ಪಿಂಕ್ ಪ್ಯಾಂಥರ್ಸ್ ಮತ್ತು ಹರಿಯಾಣ ಸ್ಟೀಲರ್ಸ್ (Pink Panthers and Haryana Steelers) ಸೆಣಸಾಟ ನಡೆಸಲಿವೆ. ಎಲ್ಲ ತಂಡಗಳಿಗೆ ಗೆಲುವು ಇಲ್ಲಿ ಅನಿವಾರ್ಯವಾಗಿದೆ. ಶನಿವಾರ ಹಿನ್ನೆಲೆ ಇಂದು ಒಟ್ಟು ಮೂರು ಪಂದ್ಯಗಳು ನಡೆಯಲಿವೆ. ಹೀಗಾಗಿ ಇಂದು ಕಬಡ್ಡಿ ಪ್ರೇಮಿಗಳಿಗೆ ಸಖತ್ ಥ್ರಿಲ್ ನೀಡುವುದರಲ್ಲಿ ಅನುಮಾನವೇ ಇಲ್ಲ. ಮೊದಲನೇ ಪಂದ್ಯದಲ್ಲಿ ಯು ಮುಂಬಾ ತಂಡವನ್ನು ಮಣಿಸಲು ತಮಿಳ್ ತಲೈವಾಸ್ ಸಜ್ಜಾಗಿದ್ದಾರೆ. ಇಬ್ಬರು ಒಟ್ಟು ತಲಾ 15 ಪಂದ್ಯಗಳನ್ನು ಆಡಿದ್ದಾರೆ. ತಲಾ  5 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ತಮಿಳ್ ತಲೈವಾಸ್ 4 ಪಂದ್ಯಗಳಲ್ಲಿ ಸೋತು ಪಾಯಿಂಟ್ಸ್ ಟೇಬಲ್ ನಲ್ಲಿ 6ನೇ  ಸ್ಥಾನದಲ್ಲಿದ್ದಾರೆ. ಇನ್ನೂ ಯು ಮುಂಬಾ 5 ಪಂದ್ಯಗಳಲ್ಲಿ ಸೋತು 7ನೇ ಸ್ಥಾನದಲ್ಲಿದೆ.ಯುಪಿ ಯೋಧಾ ತಂಡ ಒಟ್ಟು 16 ಪಂದ್ಯಗಳಲ್ಲಿ, 5ರಲ್ಲಿ ಗೆದ್ದು, 8 ಪಂದ್ಯಗಳಲ್ಲಿ ಸೋಲುಂಡಿದೆ. ತೆಲುಗು ಟೈಟಾನ್ಸ್ ಒಟ್ಟು 15 ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವು ಸಾಧಿಸಿದೆ. ಒಟ್ಟು 11 ಪಂದ್ಯಗಳಲ್ಲಿ ಸೋತು ಪಾಯಿಂಟ್ಸ್ ಟೇಬಲ್ (Points table) ನಲ್ಲಿ ಕೊನೆ ಸ್ಥಾನದಲ್ಲಿದೆ. ಇನ್ನೂ ಪಿಂಕ್  ಫ್ಯಾಂಥರ್ಸ್ 15 ಪಂದ್ಯಗಳನ್ನು ಆಡಿದ್ದು, 7 ರಲ್ಲಿ ಗೆದ್ದು 6 ಪಂದ್ಯದಲ್ಲಿ ಸೋತಿದೆ. 5ನೇ ಸ್ಥಾನದಲ್ಲಿದೆ. ಇನ್ನೂ ಇಬ್ಬರ ನಡುವೆ ಕಾದಾಟ ಹೆಚ್ಚು ನಡೆಯಲಿದೆ. ಹರಿಯಾಣ ಸ್ಟೀಲರ್ಸ್ ಒಟ್ಟು 16 ಪಂದ್ಯಗಳನ್ನು ಆಡಿದ್ದು, 7 ಪಂದ್ಯಗಳಲ್ಲಿ ಜಯ ಸಾಧಿಸಿದೆ. 6 ಪಂದ್ಯಗಳಲ್ಲಿ ಸೋತಿದೆ. ಪಾಯಿಂಟ್ಸ್ ಟೇಬಲ್ ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

- Advertisement -

Latest Posts

Don't Miss