ಬೆಳಗ್ಗೆ ನಾರ್ಮಲ್ ಆಗಿ, ಇಡ್ಲಿ, ದೋಸೆ, ಪಲಾವ್, ಹೀಗೆ ತಿಂಡಿ ತಿಂತೀವಿ. ಆದ್ರೆ ನಿಮಗೆ ಶಕ್ತಿಯುತವಾದ, ಆರೋಗ್ಯಕರವಾದ ಜೀವನ ಬೇಕು ಅಂದ್ರೆ, ನೀವು ಪ್ರೋಟೀನ್ ಭರಿತವಾದ ಬ್ರೇಕ್‌ಫಾಸ್ಟ್ ತಿನ್ನಬೇಕು. ಹಾಗಾಗಿ ನಾವಿವತ್ತು ಪ್ರೋಟೀನ್ ಬ್ರೇಕ್‌ಫಾಸ್ಟ್ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಬ್ರೇಕ್‌ಫಾಸ್ಟ್ ಅಂದ್ರೆ ಚಪಾತಿ ಮತ್ತು ತರಕಾರಿ, ಪನೀರ್ ಹಾಕಿ ತಯಾರಿಸಿದ ಪಲ್ಯ ಮತ್ತು ಮೊಸರು. ನೀವು ಬೆಳಿಗ್ಗಿನ ತಿಂಡಿಯಲ್ಲಿ ಮೊಸರು ಸೇರಿಸುವುದಿದ್ದಲ್ಲಿ, ಟೀ ಕಾಫಿ ಕುಡಿಯಬೇಡಿ. ಮೊಸರು ಸೇವಿಸುವುದಕ್ಕಿಂತ ಕೊಂಚ ಮುಂಚೆ ಹಾಲು ಕುಡಿಯಿರಿ. ಅಥವಾ ಮೊಸರು ಸೇವಿಸಿ ಕೊಂಚ ಹೊತ್ತಾದ ಮೇಲೆ ಹಾಲು ಸೇವಿಸಿ. ಆದ್ರೆ ನೆನಪಿರಲಿ ನೀವು ತರಕಾರಿ ಮತ್ತು ಪನೀರ್ ಹಾಕಿ ಮಾಡುವ ಪಲ್ಯದಲ್ಲಿ ಹೆಚ್ಚು ಮಸಾಲೆ ಪದಾರ್ಥ, ಎಣ್ಣೆ, ಬೆಣ್ಣೆ ಹಾಕಬೇಡಿ.
ಎರಡನೇಯ ತಿಂಡಿ, ಓವರ್ ನೈಟ್ ಚೀಯಾ ಪುಡ್ಡಿಂಗ್. ಇದನ್ನ ಕೆಲಸಕ್ಕೆ ಹೋಗುವವರು ತಿಂದು ಹೋಗಬಹುದು. ನಾಲ್ಕು ಸ್ಪೂನ್ ಚೀಯಾ ಸೀಡ್ಸ್, ಒಂದು ಕಪ್ ಹಾಲು, ಎರಡು ಸ್ಪೂನ್ ಜೋನುತುಪ್ಪ, ಮತ್ತು ಹಾಲಿನೊಂದಿಗೆ ಬಳಸಬಹುದಾದ ಹಣ್ಣುಗಳು. ಬಾಳೆಹಣ್ಣು, ಬಟರ್ ಫ್ರೂಟ್, ಆ್ಯಪಲ್, ಚಿಕ್ಕು, ಸ್ರಾಬೇರಿ ಇತ್ಯಾದಿ ಇವೆಲ್ಲ ಈ ತಿಂಡಿಗೆ ಬೇಕಾದ ಪದಾರ್ಥ. ರಾತ್ರಿ ಮಲಗುವಾಗ ಹಾಲಿಗೆ ಜೇನುತುಪ್ಪ ಮತ್ತು ಚೀಯಾಸೀಡ್ಸ್ ಸೇರಿಸಿ ಇಡಿ. ಮರುದಿನ ಇದಕ್ಕೆ ಫ್ರೂಟ್ಸ್, ಡ್ರೈಫ್ರೂಟ್ಸ್ ಮಿಕ್ಸ್ ಮಾಡಿ ತಿನ್ನಿ. ಇದೇ ರೀತಿ ಓಟ್ಸ್ ಬಳಸಿ ಸೇವಿಸಬಹುದು.