Sunday, September 8, 2024

Latest Posts

ರುಚಿಕರವೂ ಹೌದು, ಆರೋಗ್ಯಕರವೂ ಹೌದು ಈ ಪ್ರೋಟಿನ್ ಪಲಾವ್..

- Advertisement -

ಪಲಾವ್ ತಿನ್ನೋಕ್ಕೆ ರುಚಿಯಾಗಿರತ್ತೆ ನಿಜ. ಆದ್ರೆ ಈ ರುಚಿಯೊಂದಿಗೆ ಆರೋಗ್ಯವೂ ತುಂಬಾ ಮುಖ್ಯ. ಹಾಗಾಗಿ ನಾವಿಂದು ರುಚಿಕರವೂ, ಆರೋಗ್ಯಕರವೂ ಪ್ರೋಟಿನ್ ಪಲಾವ್ ತಯಾರು ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಇದನ್ನು ಮಾಡಲು ಬೇಕಾಗುವ ಸಾಮಗ್ರಿಗಳೇನು ಅನ್ನೋದನ್ನ ನೋಡೋಣ ಬನ್ನಿ..

ಬೇಕಾಗುವ ಸಾಮಗ್ರಿ: ಒಂದು ಕಪ್ ನೆನೆಸಿಟ್ಟ ಕಪ್ಪು ಕಡಲೆ, ಹೆಸರು ಕಾಳು, ಶೇಂಗಾ, ಕಾಬುಲ್ ಕಡಲೆ, ಕಾಲು ಕಪ್ ಪನೀರ್, ಎರಡು ಸ್ಪೂನ್ ಮೊಸರು, 10ರಿಂದ 15 ಸೋಯಾ ಚಂಕ್ಸ್, ಮೂರು ಕಪ್ ರೈಸ್, ಶುಂಠಿ- ಬೆಳ್ಳುಳ್ಳು- ಹಸಿಮೆಣಸಿನಕಾಯಿ ಪೇಸ್ಟ್, ಅರಿಶಿನ ಪುಡಿ, ಎರಡು ಸ್ಪೂನ್ ಗರಂ ಮಸಾಲೆ ಪುಡಿ, ಕೊತ್ತೊಂಬರಿ ಸೊಪ್ಪು, ಸಣ್ಣಗೆ ಹೆಚ್ಚಿದ ಈರುಳ್ಳಿ, ಕ್ಯಾರೆಟ್, ಬೀನ್ಸ್, ಅರ್ಧ ಬೌಲ್ ನೆನೆಸಿದ ಬಟಾಣಿ, ನಾಲ್ಕು ಸ್ಪೂನ್ ತುಪ್ಪ, 2 ಪಲಾವ್ ಎಲೆ, ಕೊಂಚ ಕುಟ್ಟಿ ಪುಡಿ ಮಾಡಿದ, ಚಕ್ಕೆ, ಲವಂಗ, ಏಲಕ್ಕಿ, ಕಾಳು ಮೆಣಸು, ಜೀರಿಗೆ, ಸೋಂಪು, ಕೊಂಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಬಿಸಿ ನೀರಿನಲ್ಲಿ ಸೋಯಾ ಚಂಕ್ಸ್ 15 ನಿಮಿಷ ನೆನೆಸಿಡಿ. ಒಂದು ಪ್ಯಾನ್‌ಗೆ ಬೆಣ್ಣೆ ಹಾಕಿ, ಪನೀರ್ ಹುರಿದಿಟ್ಟುಕೊಳ್ಳಿ. ಈಗ ಕುಕ್ಕರ್‌ನಲ್ಲಿ ತುಪ್ಪ ಹಾಕಿ, ಕೊಂಚ ಬಿಸಿಯಾದ ಬಳಿಕ, ಪಲಾವ್ ಎಲೆ, ಕೊಂಚ ಕುಟ್ಟಿ ಪುಡಿ ಮಾಡಿದ, ಚಕ್ಕೆ, ಲವಂಗ, ಏಲಕ್ಕಿ, ಕಾಳು ಮೆಣಸು, ಜೀರಿಗೆ, ಸೋಂಪು ಹಾಕಿ ಹುರಿಯಿರಿ.

ನಂತರ ಇದಕ್ಕೆ ಈರುಳ್ಳಿ ಸೇರಿಸಿ ಹುರಿಯಿರಿ. ಇದಾದ ಬಳಿಕ, ಕ್ಯಾರೆಟ್, ಬೀನ್ಸ್, ಬಟಾಣಿ, ಶುಂಠಿ- ಬೆಳ್ಳುಳ್ಳಿ- ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ ಹುರಿಯಿರಿ. ಇದಕ್ಕೆ ನೆನೆಸಿಟ್ಟುಕೊಂಡಿರುವ ಕಾಳು, ಅಕ್ಕಿ ಮಿಕ್ಸ್ ಮಾಡಿ ಹುರಿಯಿರಿ. ಇದಕ್ಕೆ ಮೊಸರು, ಸೋಯಾ ಚಂಕ್ಸ್, ಪನೀರ್, ಅರಿಶಿನ ಪುಡಿ, ಗರಂ ಮಸಾಲೆ ಪುಡಿ, ಸಕ್ಕರೆ- ಉಪ್ಪು , ನೀರು ಸೇರಿಸಿ ಮಿಕ್ಸ್ ಮಾಡಿ, ಮೂರು ವಿಶಲ್ ಹೊಡೆಸಿದ್ರೆ, ಪಲಾವ್ ರೆಡಿ.

- Advertisement -

Latest Posts

Don't Miss