Friday, October 18, 2024

Latest Posts

ಸೋರಿಯಾಸಿಸ್ ಖಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತಾ..?

- Advertisement -

Health Tips: ಡಾ.ರವಿರಾಜ್‌ ಅವರು ಸೋರಿಯಾಸಿಸ್ ಖಾಯಿಲೆ ಬಗ್ಗೆ ಹಲವು ವಿವರಣೆ ನೀಡಿದ್ದಾರೆ. ಈ ಖಾಯಿಲೆ ಹೇಗೆ ಬರುತ್ತದೆ. ನಾವು ಈ ಖಾಯಿಲೆ ಬಂದಾಗ ಏನು ಮಾಡಬೇಕು..? ಯಾವ ತಪ್ಪು ಮಾಡಿದಾಗ, ಈ ಖಾಯಿಲೆ ಹೆಚ್ಚಾಗುತ್ತದೆ. ತಲೆಯಲ್ಲಿ ಸೋರಿಯಾಸಿಸ್ ಆದಾಗ, ಅದರ ಲಕ್ಷಣ ಹೇಗಿರುತ್ತದೆ. ಹೀಗೆ ಸೋರಿಯಾಸಿಸ್ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ. ಅದೇ ರೀಕಿ ಸೋರಿಯಾಸಿಸ್ ಖಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತದಾ ಅನ್ನೋ ವಿಷಯದ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಸೋರಿಯಾಸಿಸ್ ಖಾಯಿಲೆ ಬಂದವರು, ಬರೀ ಚರ್ಮ ರೋಗದಿಂದ ಬಳಲುವುದಿಲ್ಲ. ಬದಲಾಗಿ, ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಾನೆ. ನಾಲ್ಕು ಜನ ಮುಂದೆ ಬರಲು ಅವರಿಗೆ ಅಳುಕು ಉಂಟಾಗುತ್ತದೆ. ಕೆರೆತ ಒಂದೆಡೆಯಾದರೆ, ಅವರ ಚರ್ಮ ಕಂಡು ಪ್ರಶ್ನಿಸುವವರು ಸಾವಿರ ಜನ. ಕೆಲವರು ಸೋರಿಯಾಸಿಸ್ ರೋಗಿಗಳನ್ನು ದೂರ ಮಾಡುತ್ತಾರೆ. ಇಂಥ ವಿಷಯಗಳಿಂದಲೇ, ಸೋರಿಯಾಸಿಸ್ ರೋಗಿಗಳು ಕುಗ್ಗಿಹೋಗುತ್ತಾರೆ.

ಇನ್ನು ಕೆಲವರಿಗೆ ಸೋರಿಯಾಸಿಸ್ ರೋಗ ಬಂದವರಿಂದ ದೂರವಿರಬೇಕು. ಇಲ್ಲದಿದ್ದಲ್ಲಿ ನಮಗೂ ಆ ಖಾಯಿಲೆ ಬರುತ್ತದೆ ಅನ್ನೋ ಭಯವಿರುತ್ತದೆ. ಅಲ್ಲದೇ, ವೈದ್ಯರ ಬಳಿ ಬಂದ ಹಲವರು ಇದೇ ಪ್ರಶ್ನೆಯನ್ನೇ ವೈದ್ಯರಲ್ಲಿ ಕೇಳುತ್ತಾರೆ. ಸೋರಿಯಾಸಿಸ್ ಹರಡುತ್ತಾ ಅಂತಾ.  ಆದರೆ ಡಾ.ರವಿರಾಜ್ ಹೇಳುವ ಪ್ರಕಾರ, ಸೋರಿಯಾಸಿಸ್ ರೋಗ ಒಬ್ಬರಿಂದ ಒಬ್ಬರಿಗೆ ಹರಡುವುದಿಲ್ಲ. ಇದು ಹರಡುವ ರೋಗವಲ್ಲ.  ಅಂಟು ರೋಗವಲ್ಲ.

ಹಾಗಾಗಿ ಸೋರಿಯಾಸಿಸ್ ಬಂದಿರುವ ರೋಗಿಗಳನ್ನು ಮನುಷ್ಯರಂತೆ ನೋಡಿ. ಅವರೊಂದಿಗೆ ನೀವು ಬೆರೆಯಿರಿ ಎನ್ನುತ್ತಾರೆ ವೈದ್ಯರು. ಏಕೆಂದರೆ, ಎಷ್ಟೋ ಸೋರಿಯಾಸಿಸ್ ರೋಗಿಗಳು ಎಲ್ಲರಿಂದ ದೂರವಾಗಿ, ಡಿಪ್ರೆಶನ್‌ಗೆ ಹೋಗಿದ್ದಾರೆ. ಏಕೆಂದರೆ ಎಲ್ಲರಿಗೂ ಆ ಖಾಯಿಲೆ ತಮಗೂ ಬಂದರೆ ಎಂಬ ಭಯವಿರುತ್ತದೆ. ವೈದ್ಯರು ಹೇಳುವುದೇನೆಂದರೆ, ಸೋರಿಯಾಸಿಸ್ ಅಂಟು ರೋಗವಾಗಿದ್ದರೆ, ಅದು ತಮಗೂ ಬರಬೇಕಿತ್ತು. ಏಕೆಂದರೆ, ತಾನು ಸೋರಿಯಾಸಿಸ್ ಆಗ ಜಾಗವನ್ನು ಮುಟ್ಟಿ, ಪರೀಕ್ಷಿಸಿ, ಬಳಿಕ ಚಿಕಿತ್ಸೆ ನೀಡುತ್ತೇವೆ. ಹಾಗಾಗಿ ಸೋರಿಯಾಸಿಸ್ ಬರುವಂತಿದ್ದರೆ, ತನಗೇ ಬರಬೇಕಿತ್ತು. ಆದರೆ ಬರಲಿಲ್ಲ. ಏಕೆಂದರೆ ಸೋರಿಯಾಸಿಸ್ ಅಂಟು ರೋಗವಲ್ಲ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

- Advertisement -

Latest Posts

Don't Miss