Recipe: ಪುದೀನಾ ಆರೋಗ್ಯಕ್ಕೆ ಅತ್ಯುತ್ತಮವಾದ ಸೊಪ್ಪು. ಇದರ ಸೇವನೆಯಿಂದ ಹಲವು ರೋಗಗಳು ಶಮನವಾಗುತ್ತದೆ. ಅಲ್ಲದೇ, ಚಾಟ್ಸ್‌ಗಳಲ್ಲಿ ಇದನ್ನ ಹೆಚ್ಚಾಗಿ ಬಳಸಲಾಗುತ್ತದೆ. ಇಂಥ ರುಚಿಯಾದ ಎಲೆಯನ್ನು ಬಳಸಿ, ನೀವು ಮನೆಯಲ್ಲೇ ಟೇಸ್ಟಿ ರಾಯ್ತಾ ತಯಾರಿಸಬಹುದು. ಮತ್ತು ಇದನ್ನು ಪಲಾವ್ ಜೊತೆಗೂ ಬಳಸಬಹುದು.
ಒಂದು ಕಪ್ ಪುದೀನಾವನ್ನು ಸ್ವಚ್ಛವಾಗಿ ತೊಳೆದು, ಮಿಕ್ಸಿ ಜಾರ್‌ಗೆ ಹಾಕಿ. ಇದಕ್ಕೆ 2 ಸ್ಪೂನ್ ಮೊಸರು ಹಾಕಿ ಗ್ರೈಂಡ್ ಮಾಡಿ. ಇದಕ್ಕೆ ನೀರು ಸೇರಿಸಬಾರದು. ಯಾಕಂದ್ರೆ ಇದು, ಕ್ರೀಮಿಯಾಗಿರಬೇಕು. ಈಗ ಕ್ರೀಮಿಯಾಗಿರುವ ಪುದೀನಾ ಪೇಸ್ಟ್‌ನ್ನು ಒಂದು ಬೌಲ್‌ಗೆ ಹಾಕಿ. ಇದನ್ನು ಬದಿಗಿರಿಸಿ, ಗ್ಯಾಸ್ ಆನ್ ಮಾಡಿ, ಪ್ಯಾನ್ ಇರಿಸಿ. ಇದಕ್ಕೆ ಒಂದು ಕಪ್ ಜೀರಿಗೆ ಹಾಕಿ ಹುರಿಯಿರಿ.
ಇದನ್ನು ಗ್ರೈಂಡ್ ಮಾಡಿ, ಪುಡಿ ಮಾಡಿ. ಈಗ ಒಂದು ಮಿಕ್ಸಿಂಗ್‌್ ಬೌಲ್‌ಗೆ ಎರಡು ಕಪ್ ಮೊಸರು, ಒಂದು ಸ್ಪೂನ್ ಜೀರಿಗೆ ಪುಡಿ, ಈಗಷ್ಟೇ ರೆಡಿ ಮಾಡಿದ ಪುದೀನಾ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು, ಜೊತೆಗೆ ಚಿಟಿಕೆ ಕಪ್ಪು ಉಪ್ಪು, 1 ಸ್ಪೂನ್ ಸಕ್ಕರೆ, ಅರ್ಧ ಸ್ಪೂನ್ ಖಾರದ ಪುಡಿ ಇವಿಷ್ಟನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ಪುದೀನಾ ರಾಯ್ತಾ ರೆಡಿ.
ಗೋಧಿ ಬಳಕೆಯಿಂದ ಆರೋಗ್ಯಕ್ಕಾಗುವ ಲಾಭವೇನು..? ಅತಿಯಾಗಿ ಚಪಾತಿ ತಿಂದರೆ ಏನಾಗತ್ತೆ..?




