ಸಡನ್ನಾಗಿ ಯಾರಾದ್ರೂ ಮನೆಗೆ ಬರ್ತಾರೆ, ಅಥವಾ ರಾತ್ರಿ ಅಡುಗೆ ಮಾಡ್ಕೊಳ್ಳೋಕ್ಕೆ ಬೋರ್ ಆಗತ್ತೆ ಅಂತಾ ಅನ್ನಿಸಿದಾಗ, ಇನ್‌ಸ್ಟಂಟ್ ಆಗಿ ಏನಾದ್ರೂ ರೆಡಿ ಮಾಡ್ಬೇಕಾಗತ್ತೆ. ಹಾಗಾಗಿ ನಾವಿಂದು ರಾಗಿ ದೋಸೆ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ.
ಸಿಂಪಲ್ ಆಗಿ ಮಾಡಬಹುದಾದ ತಿಂಡಿ ಈ ಖಾರಾ ಪೊಂಗಲ್
ಒಂದು ಕಪ್ ರಾಗಿ ಹಿಟ್ಟು, ಒಂದು ಸಣ್ಣಗೆ ಕತ್ತರಿಸಿದ ಈರುಳ್ಳಿ, ಕೊಂಚ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, 10 ಕರಿಬೇವಿನ ಎಲೆ, ಮೂರು ಸಣ್ಣಗೆ ಕತ್ತರಿಸಿದ ಮೆಣಸಿನಕಾಯಿ, ಅಗತ್ಯಕ್ಕೆ ತಕ್ಕಷ್ಟು ಉಪ್ಪು ಮತ್ತು ನೀರು. 2 ಸ್ಪೂನ್ ಎಣ್ಣೆ.
ಮನೆಯಲ್ಲೇ ಸಿಂಪಲ್ ಮತ್ತು ರುಚಿಯಾಗಿ ತಯಾರಿಸಬಹುದು ಮೊಸರೊಡೆ (ದಹಿ ವಡಾ)..
ಮಾಡುವ ವಿಧಾನ: ಒಂದು ಬೌಲ್‌ನಲ್ಲಿ ರಾಗಿ ಹಿಟ್ಟು ಮತ್ತು ನೀರು ಹಾಕಿ, ದೋಸೆ ಹಿಟ್ಟಿನ ಹದಕ್ಕೆ ಕಲಿಸಿ. ಈಗ ಇದಕ್ಕೆ ಈರುಳ್ಳಿ, ಮೆಣಸಿನಕಾಯಿ, ಕೊತ್ತೊಂಬರಿ ಸೊಪ್ಪು, ಇಂಗು, ಕರಿಬೇವು, ಉಪ್ಪು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ದೋಸೆ ಹಂಚನ್ನ ಬಿಸಿ ಮಾಡಿ, ಎಣ್ಣೆ ಸವರಿ ರಾಗಿ ದೋಸೆ ಮಾಡಿ. ಕಾಯಿ ಚಟ್ನಿ, ಸಾಂಬಾರ್ ಅಥವಾ ಉಪ್ಪಿನಕಾಯಿ- ಎಣ್ಣೆ ಜೊತೆ ತಿನ್ನಲು ಇದು ರುಚಿಯಾಗಿರುತ್ತದೆ.