Political News: ಹುಬ್ಬಳ್ಳಿ: ರಾಹುಲ್ ಗಾಂಧಿಗೆ ಸೋಲಿನ ಕನಸು ಬೀಳ್ತಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ನವರಿಗೆ ನಾವು ಸೋಲ್ತೀವಿ ಅನ್ನೋದ ಗೊತ್ತಿದೆ. ಮಮತಾ ಬ್ಯಾನರ್ಜಿ ಕೂಡಾ ಕೇವಲ 40 ಸೀಟ್ ಗೆಲ್ತೀವಿ ಅಂತಾ ಹೇಳ್ತಾರೆ. ಕಾಂಗ್ರೆಸ್ ಗೆ ನಾವು ಸೋಲತೀವಿ ಅಂತಾ ಅರ್ಥ ಆಗಿದೆ. ಕಳೆದ ಬಾರಿಗಿಂತ ಕಡಿಮೆ ಸೀಟ್ ಬರ್ತೀವಿ ಅನ್ನೋದು ಅರ್ಥ ಆಗಿದೆ. ಹೀಗಾಗಿ ಚುನಾವಣಾ ಆಯೋಗ, EVM ಮೇಲೆ ಅನುಮಾನ ಪಡ್ತಾರೆ. ಕಾಂಗ್ರೆಸ್ ದು ಎಂತಹ ದುರಂತ ನೋಡಿ.
ಅವರಿಗೆ ಕರ್ನಾಟಕದಲ್ಲಿ ಗೆದ್ದರೆ EVM ಪ್ರಾಬ್ಲಮ್ ಇಲ್ಲ. ನಾವು ಗೆದ್ರೆ ಅವರಿಗೆ EVM ಸಮಸ್ಯೆ. ನಾವ ಸೋತರೂ EVM ಬಗ್ಗೆ ತಕರಾರು ತಗೆದಿಲ್ಲ. ನಾವು ಸುಮ್ಮೇ ಕೂತಿದ್ದೇವೆ. ಕಾಂಗ್ರೆಸ್ ಪಕ್ಷ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಮೋದಿ ಅವರ ನೇತೃತ್ವದಲ್ಲಿ ಬಹಳ ಬದಲಾವಣೆಯಾಗಿದೆ. ಬಿಜೆಪಿ ಗೆಲ್ಲಿಸಬೇಕು ಅಂತಾ ಜನ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ಗೆ ಸೋಲಿನ ಭಯ ಇನ್ನಿಲದಂತೆ ಕಾಡ್ತಿದೆ. ಹತಾಶರಾಗಿ ಕಾಂಗ್ರೆಸ್ ನವರು ಮಾತಾಡ್ತಿದಾರೆ ಎಂದು ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದ್ದಾರೆ.
ಕನಿಷ್ಠ 200 ಸ್ಥಾನಗಳನ್ನು ಗೆದ್ದು ತೋರಿಸಿ: ಬಿಜೆಪಿಗೆ ಮಮತಾ ಬ್ಯಾನರ್ಜಿ ಚಾಲೆಂಜ್
ಹುಟ್ಟುಹಬ್ಬಕ್ಕೆ ಅನ್ನದಾನ, ಪ್ರಚಾರ ಮಾಡಬೇಡಿ ಎಂದ ನಟಿ ಸಾರಾ ಅಲಿ ಖಾನ್
ರಾಜರಾಜೇಶ್ವರಿಯ ಆಶೀರ್ವಾದದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಡಿಸಿಎಂ ಡಿಕೆಶಿ