ರಾಮನಗರ ಶಾಸಕರ ವೀಡಿಯೋ ವೈರಲ್

Political News: ಇಷ್ಟು ದಿನ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಸದ್ದು ಮಾಡಿದ್ದರೆ, ಇದೀಗ ರಾಮನಗರ ಶಾಸಕರಾದ ಎಚ್.ಎ.ಇಕ್ಬಾಲ್ ಹುಸೇನ್ ವೀಡಿಯೋ ಸದ್ದು ಮಾಡುತ್ತಿದೆ.

ಇಕ್ಬಾಲ್ ಮಹಿಳೆಯೊಬ್ಬರ ಜೊತೆ ವಾಟ್ಸಪ್ ವೀಡಿಯೋ ಕಾಲ್ ಮಾಡಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಈಕೆ ಕಾಂಗ್ರೆಸ್ ಪಧಾಧಿಕಾರಿ ಎನ್ನಲಾಗಿದ್ದು, 2 ನಿಮಿಷ 27 ಸೆಕೆಂಡ್ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ. ಇದನ್ನು ಸ್ಕ್ರೀನ್ ರೆಕಾರ್ಡ ಮೂಲಕ ರೆಕಾರ್ಡ್ ಮಾಡಲಾಗಿದ್ದು, ಇದರಲ್ಲಿ ಏನು ಮಾತನಾಡಿದ್ದಾರೆಂದು ಕೇಳಿಸುವುದಿಲ್ಲ.

ಈ ವೀಡಿಯೋದಲ್ಲಿರುವ ಮಹಿಳೆ ಇಕ್ಬಾಲ್ ಜೊತೆ ಫೋಟೋ ಸಹ ತೆಗೆಸಿಕೊಂಡಿದ್ದಾರೆ. ಆದರೆ ಈ ಬಗ್ಗೆ ಇನ್ನು ಯಾವುದೇ ದೂರು ದಾಖಲಾಗಿಲ್ಲ. ಇನ್ನು ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಇಕ್ಬಾಲ್, ಇದು ತಮ್ಮದೇ ವೀಡಿಯೋ ಎಂದು ಒಪ್ಪಿಕೊಂಡಿದ್ದು, ಯಾರದ್ದೋ ಮೇಲಿನ ಕೋಪಕ್ಕೆ, ನನ್ನನ್ನು ಸಿಲುಕಿಸುವ ಪ್ರಯತ್ನ ನಡೆದಿದೆ ಎಂದಿದ್ದಾರೆ.

ಅಲ್ಲದೇ, ಸಮಸ್ಯೆ ಹೇಳಿಕೊಂಡು, ಪರಿಹಾರ ಕೇಳಲು ಹಲವರು ಕಾಲ್ ಮಾಡುತ್ತಾರೆ. ಅಂಥ ಕಾಲ್‌ಗಳಲ್ಲಿ ಈ ಕಾಲ್ ಕೂಡ ಒಂದು. ಒಂದೂವರೆ ವರ್ಷದ ಹಿಂದಿನ ಕಾಲ್‌ ಈಗ ಓಪೆನ್ ಮಾಡಿ, ನನ್ನ ತೇಜೋವಧೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಇಕ್ಬಾಲ್ ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ಕ್ಯಾನ್ಸಲ್ ಮಾಡಿಸಲು ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಸತ್ಯ ಆದಷ್ಟು ಬೇಗ ಹೊರಬರಲಿದೆ: ಪ್ರಜ್ವಲ್ ರೇವಣ್ಣ

ದಿಂಗಾಲೇಶ್ವರ ಸ್ವಾಮೀಜಿಯ ರಾಜಕೀಯ ನಡೆ ಬಗ್ಗೆ ಸಿಎಮ್ ಇಬ್ರಾಹಿಂ ಸ್ಪೋಟಕ ಮಾಹಿತಿ

About The Author