Sunday, September 8, 2024

Latest Posts

ರವಾ ಇಡ್ಲಿ ಢೋಕ್ಲಾ ರೆಸಿಪಿ

- Advertisement -

Recipe: ಢೋಕ್ಲಾ ಎಂದರೆ ಗುಜರಾತಿ ತಿಂಡಿ. ಖಾರಾ, ಹುಳಿಯಾದ ಈ ತಿಂಡಿ ಇಡ್ಲಿ ರೀತಿಯಲ್ಲೇ ಮಾಡಲಾಗುತ್ತದೆ. ಇಂದು ನಾವು ರವಾ ಇಡ್ಲಿ ಢೋಕ್ಲಾ ಮಾಡೋದು ಹೇಗೆ ಅಂತಾ ತಿಳಿಸಲಿದ್ದೇವೆ.

2 ಟೇಬಲ್ ಸ್ಪೂನ್ ಕಡಲೆಹಿಟ್ಟನ್ನು ಪ್ಯಾನ್‌ಗೆ ಹಾಕಿ ಘಮ ಬರುವವರೆಗೂ ಹುರಿದುಕೊಳ್ಳಿ. ಇದನ್ನು ಒಂದು ಬೌಲ್‌ಗೆ ಹಾಕಿ. ಈಗ ಇದಕ್ಕೆ ಒಂದುವರೆ ಕಪ್ ರೆಡಿಮೇಡ್ ರವಾ ಇಡ್ಲಿ ಮಿಕ್ಸ್ ಬೆರೆಸಿ. ಜೊತೆಗೆ 1 ಕ್ಯಾರೇಟ್‌ ತುರಿ, ಕೊಂಚ ಕೊತ್ತೊಂಬರಿ ಸೊಪ್ಪು, ಅರ್ಧ ಕಪ್ ಮೆಂತ್ಯೆ ಎಲೆ, 2 ಸ್ಪೂನ್ ಸಕ್ಕರೆ, 1 ಸ್ಪೂನ್ ಹಸಿಮೆಣಸು- ಶುಂಠಿ ಪೇಸ್ಟ್, 1 ಸ್ಪೂನ್ ಜೀರಿಗೆ- ಕೊತ್ತೊಂಬರಿ ಕಾಳಿನ ಪುಡಿ, ಅರ್ಧ ಕಪ್ ಮೊಸರು, ಕಾಲು ಕಪ್ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ 15 ನಿಮಿಷ ಮುಚ್ಚಿಡಿ.

ಈಗ ಅರ್ಧ ನಿಂಬೆ ರಸ, ಅವಶ್ಯಕತೆ ಇದ್ದಷ್ಟು ಫ್ರೂಟ್ ಸಾಲ್ಟ್ ಮಿಕ್ಸ್ ಮಾಡಿದ್ರೆ ಬ್ಯಾಟರ್ ರೆಡಿ. ಇದನ್ನು ನೀವು ಇಡ್ಲಿ ತಟ್ಟೆಯಲ್ಲಿ ಸೆಟ್ ಮಾಡಬಹುದು. ಅಥವಾ ಢೋಕ್ಲಾ ಸೆಟ್ ಇದ್ದರೆ ಅದರಲ್ಲೂ ಸೆಟ್ ಮಾಡಬಹುದು. ಈಗ ಇಡ್ಲಿ ಕುಕ್ಕರ್‌ನಲ್ಲಿ ನೀರು ಇಟ್ಟು ಅದು ಚೆನ್ನಾಗಿ ಕುದಿ ಬಂದ ಮೇಲೆ ಇಡ್ಲಿ ಹಿಟ್ಟು ಹಾಕಿದ ಪಾತ್ರೆಯಲ್ಲಿ ಇದರಲ್ಲಿ ಇಟ್ಟು ಬೇಯಿಸಿದರೆ, ಢೋಕ್ಲಾ ರೆಡಿ. ಬೇಕಾದರೆ ನೀವು ಈ ಢೋಕ್ಲಾದ ಮೇಲೆ ಸಾಸಿವೆ, ಜೀರಿಗೆ, ಕರಿಬೇವಿನ ಒಗ್ಗರಣೆ ಹಾಕಬಹುದು.

ಈ 5 ಆಹಾರಗಳ ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ..

ಗ್ಯಾಸ್ ಕಂಟ್ರೋಲ್ ಮಾಡುವುದರಿಂದ ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಗೊತ್ತಾ..?

ಮಗುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ..?

- Advertisement -

Latest Posts

Don't Miss