ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ ನಾವು ರಾವಣ ಸಾಯುವಾಗ ಲಕ್ಷ್ಮಣನಿಗೆ ಹೇಳಿದ 10 ಮಾತುಗಳಲ್ಲಿ 5 ಮಾತುಗಳೇನು ಅನ್ನೋ ಬಗ್ಗೆ ಮಾಹಿತಿ ನೀಡಿದ್ದೇವೆ. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಮಾತುಗಳನ್ನು ಹೇಳಲಿದ್ದೇವೆ..
ಜೀವನದಲ್ಲಿ ಎಂದಿಗೂ ಈ 10 ವಿಷಯಗಳನ್ನು ಮರಿಯಬೇಡಿ ಎನ್ನುತ್ತಾನೆ ರಾವಣ.. ಭಾಗ 1
ಆರನೇಯದಾಗಿ, ತಪಸ್ಸು ಅನ್ನೋದು ತುಂಬಾ ಮುಖ್ಯ. ನಾನು ಕಠಿಣ ತಪಸ್ಸನ್ನಾಚರಿಸಿ, ಹಲವು ವರಗಳನ್ನು ಪಡೆದಿದ್ದೇನೆ. ಮನುಷ್ಯ ಕಠಿಣ ತಪಸ್ಸನ್ನಾಚರಿಸಿ, ಯಶಸ್ಸು ಪಡೆದುಕೊಳ್ಳಬಹುದು ಎಂದಿದ್ದಾನೆ ರಾವಣ. ಇಲ್ಲಿ ತಪಸ್ಸಿನ ಅರ್ಥವೇನೆಂದರೆ, ಕಠಿಣ ಪರಿಶ್ರಮ. ಶ್ರದ್ಧೆವಹಿಸಿ ಕೆಲಸ ಮಾಡೋದು. ನೀವು ಸತತವಾಗಿ ಪರಿಶ್ರಮ ಪಟ್ಟು ಕೆಲಸ ಮಾಡಿದ್ರೆ, ಖಂಡಿತವಾಗಿ ಯಶಸ್ಸು ಕಾಣುತ್ತೀರಿ ಅನ್ನೋದೇ ಇದರ ಅರ್ಥ.
ಏಳನೇಯದಾಗಿ, ಇಷ್ಟ ದೇವರ ಪೂಜೆಯನ್ನು ತಪ್ಪದೇ ಮಾಡಿ. ಮನುಷ್ಯ ಎಂದಿಗೂ ಇಷ್ಟ ದೇವರ ಮೇಲೆ ಸದಾ ಭಕ್ತಿ ಮಾಡಬೇಕು. ನಾನು ಶಿವನನ್ನು ಇಷ್ಟ ದೇವರೆಂದು ಪೂಜಿಸಿದೆ. ಅವನ ಕೃಪೆಯಿಂದಲೇ ನನಗೆ ಶಕ್ತಿ, ಮತ್ತು ಜ್ಞಾನ ಪ್ರಾಪ್ತವಾಯಿತು. ಎಲ್ಲರ ದೇವರಲ್ಲೂ ನಾವು ಭಕ್ತಿ ಮಾಡಬೇಕು. ಆದರೆ ಇಷ್ಟ ದೇವರು ಒಬ್ಬನೇ ಆಗಿರುತ್ತಾನೆ. ಅವರನ್ನು ನಾವು ಭಕ್ತಿಯಿಂದ ಪೂಜಿಸಿದ್ದಲ್ಲಿ, ಸಕಲವೂ ನಮಗೆ ಪ್ರಾಪ್ತಿಯಾಗುತ್ತದೆ.
ಸೌಂದರ್ಯದ ಬಗ್ಗೆ ಹೆಚ್ಚು ಅಹಂಕಾರ ಬೇಡ ಅನ್ನುತ್ತೆ ಗರುಡಪುರಾಣದ ಈ ಮಾತು..
ಎಂಟನೇಯದಾಗಿ, ಮನುಷ್ಯನಿಗೆ ಯಾವಾಗಲೂ ಆಯುರ್ವೇದದ ಜ್ಞಾನವಿರಬೇಕು. ಆಯುರ್ವೇದದ ಜ್ಞಾನವಿದ್ದವರು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಬಲ್ಲರು. ಸ್ವಲ್ಪ ಮಟ್ಟಿಗಾದರೂ, ಅವರ ಜೀವ ಉಳಿಸಬಲ್ಲರು. ಹಾಗಾಗಿ ಮನುಷ್ಯ ಆಯುರ್ವೇದದ ಜ್ಞಾನ ಹೊಂದಿರಬೇಕು ಅನ್ನೋದು ರಾವಣನ ಅಂಬೋಣ.
ಒಂಭತ್ತನೇಯದಾಗಿ, ಸರಿಯಾದ ಗುರಿಯನ್ನು ಹೊಂದಿರುವುದು. ಮನುಷ್ಯ ತನ್ನ ಗುರಿ ಮುಟ್ಟಬೇಕು ಎಂದಲ್ಲಿ, ಅವನು ಯಾವುದೇ ಅಡಚಣೆ ಬಂದರೂ, ಅದನ್ನು ಸಹಿಸಿಕೊಂಡು, ಅಥವಾ ಅದನ್ನು ತಳ್ಳಿಕೊಂಡು ಹೋಗುವಷ್ಟು ಸಮರ್ಥನಾಗಿರಬೇಕು ಅಂತಾನೇ ರಾವಣ. ನಾವು ನಮ್ಮ ಗುರಿ ಮುಟ್ಟಲು ಹೊರಟಾಗ, ಅಡ್ಡ ಬಂದ ಹಲವು ಸಮಸ್ಯೆಗಳನ್ನೇ ನೆಪವಾಗಿಟ್ಟುಕೊಂಡು ಹಿಂದೆ ಸರಿಯಬಾರದು. ಬದಲಾಗಿ ಎಲ್ಲ ಸಮಸ್ಯೆಗಳನ್ನೂ ಎದುರಿಸಿ, ಗುರಿ ತಲುಪಬೇಕು.
ಹೆಣ್ಣೆಂದರೆ ಉಪ್ಪಿದ್ದ ಹಾಗೆ ಎಂದಿದ್ದಾನೆ ಶ್ರೀಕೃಷ್ಣ.. ಯಾಕೆ ಹೀಗೆ ಹೇಳಿದ..?
ಹತ್ತನೇಯದಾಗಿ, ಶಾಸ್ತ್ರಗಳ ಅಭ್ಯಾಸ ಮಾಡುವುದು. ಎಲ್ಲಕ್ಕಿಂತ ಉನ್ನತ ಅಭ್ಯಾಸ ಅಂದ್ರೆ ಶಾಸ್ತ್ರಗಳ ಅಭ್ಯಾಸ. ಶಾಸ್ತ್ರ ತಿಳಿದುಕೊಂಡವ ಉತ್ತಮ ಜೀವನ ನಡೆಸಬಲ್ಲ. ಉತ್ತಮ ವಾಗ್ಮಿ, ಉತ್ತಮ ಜ್ಞಾನಿಯಾಗಬಲ್ಲ. ಹಾಗಾಗಿ ಶಾಸ್ತ್ರ ಅಭ್ಯಾಸ ಮಾಡುವುದು ತುಂಬಾ ಮುಖ್ಯ ಎಂದಿದ್ದಾನೆ ರಾವಣ.