Sunday, September 8, 2024

Latest Posts

ನೀವ್ ಬಯ್ಕೋಬಹುದು ಮತ್ತೆ ಈ ಸಲಾನೂ ತಪ್ ನಮ್ದೇ..?

- Advertisement -

ಎಡವಿದ್ದೇ ಎಡವಿದ್ದು ಆರ್‌ಸಿಬಿ. ಪ್ರತೀ ಸೀಸನ್ನಂಗೇ ಇದೂ ಇನ್ನೊಂದು ಸೀಸನ್ ಅಷ್ಟೇ. ಇನ್ನೇನು ಘನಂದಾರಿ ಮಾಡಲ್ಲ ಇವ್ರು ಅನ್ನೋದು ಕನ್ಫರ್ಮ್ ಆಗ್ತಿದೆ. ಆರಂಭದಲ್ಲಿ ಮೊದಲನೇ ಮ್ಯಾಚ್ ದೇವ್ರಿಗೆ ಅಂತ ಬಿಟ್ಟುಕೊಡ್ತಾರೆ. ಆಮೇಲೆ ಯಾವ್ ಮ್ಯಾಚ್ ಗೆದ್ದರೂ ಸೋತ್ರೂ ಫ್ಯಾನ್ಸ್ ಆರ್‌ಸಿಬಿ ಜೊತೆ ನಿಲ್ತಾರೆ. ಅತ್ಯಂತ ಲಾಯಲ್ ಫ್ಯಾನ್ಸ್ ಇರೋದು ಆರ್‌ಸಿಬಿಗೇ ಅನ್ನೋದು ಕನ್ಫರ್ಮ್ ಆದ್ರೆ ರಾಯಲ್ ಅಂತ ಹೆಸ್ರಿಟ್ಕೊಂಡು ಬಿಗಿಲ್ ಥರಾ ಆಡ್ತಾರಲ್ಲ ಗುರು ಮ್ಯಾಚ್‌ನ್ನ, ಕೊಹ್ಲಿ ಫಾರ್ಮಲ್ಲಿಲ್ಲ, ಡುಫ್ಲೆಸಿ, ಮ್ಯಾಕ್ಸ್ವೆಲ್, ಅನುಜ್ ರಾವತ್, ಯಾರೂ ಫಾರ್ಮಲ್ಲಿಲ್ಲ. ಒಂದು ಮ್ಯಾಚ್ ಆಡಿದ್ರೆ ನಾಲ್ಕು ಮ್ಯಾಚ್ ಆಡಲ್ಲ.
ಈ ಸಾರಿ ಮುಂಬೈಗಿAತ ಚೆನ್ನೆöÊಗಿಂತ ಚೆನ್ನಾಗಿದ್ದೀವಿ ಅಂತ ಬೀಗಬಹುದು ಅಷ್ಟೇ ಈ ಲಾಯಲ್ ಫ್ಯಾನ್ಸ್. ನೀವು ಏನೇ ಹೇಳು ಗುರು ಆರ್.ಸಿ.ಬಿ ಆರಂಭದಲ್ಲೇ ಎಡವಟ್ಟು ಮಾಡ್ಕೊಳ್ಳುತ್ತೆ ಪ್ರತೀ ಬಾರೀನೂ ಒಳ್ಳೇ ಟೀಂ ಮಾಡ್ಕೊಳ್ಳಲ್ಲ ಒಬ್ಬರನ್ನೇ ನಂಬ್ಕೊAಡು ಅವ್ರಿಗೆ ೧೦-೧೫ ಕೋಟಿ ಹಾಕಿ ಕಳ್ಕೊಳ್ಳುತ್ತೆ ಆಪ್ಶನ್ ಇಟ್ಕೊಳ್ಳಲ್ಲ ಅಂತ ಎಲ್ಲರೂ ಹೇಳ್ತಾರೆ. ಹರ್ಷಲ್ ಪಟೇಲ್ ೧೦ ಕೋಟಿ ಕೊಡೋದಕ್ಕಿಂತ ರಿಟೇನ್ ಮಾಡ್ಕೋಬಹುದಿತ್ತು, ಪರ್ಪಲ್ ಕ್ಯಾಪ್ ಪಡ್ಕೊಂಡಿದ್ದವರು. ಚಾಹಲ್ ಬಿಟ್ಕೊಡಬರ‍್ದಿತ್ತು. ಈಗಲೂ ಅವರೇ ಪರ್ಪಲ್ ಕ್ಯಾಪ್. ಹಸರಂಗಾಗೇ ೧೦ ಕೋಟಿ ಬೇಕಿತ್ತಾ..? ಇದೆಲ್ಲಾ ಈಗ ಹೇಳಿ ಏನೂ ಪ್ರಯೋಜನ ಇಲ್ಲ.
ಇಂಥ ಟೀಂ ನಂಬ್ಕೊAಡು ಕಪ್ ನಮ್ದೇ ಅಂತ ಹೇಳೋ ಫ್ಯಾನ್ಸ್ ಬಗ್ಗೆ ಪೆಕಪೆಕನೆ ನಗ್ತಿದ್ದಾರಂತೆ ಉಳಿದ ಟೀಂ ಫ್ಯಾನ್ಸ್. ಮೊದ ಮೊದಲು ಗೆಲ್ತೀವಿ ಅನ್ನೋ ಭರವಸೆ ಹುಟ್ಟಿಸೋ ರ‍್ಸಿಬಿ ಆಮೇಲೆ ನಾವು ಇಷ್ಟೇ ಗುರು ಅಂತ ತಮ್ಮ ವೀಕ್ನೆಸ್ ಜಾಸ್ತಿ ಮಾಡ್ಕೊಳ್ಳೋದು ಪ್ರತೀ ಸೀಸನ್‌ನಲ್ಲೂ ನಡೀತಾ ಇರೋದೆ. ಸಂಜಯ್ ಬಂಗಾರ್, ಮೈಕ್ ಹೆಸನ್‌ರಂತಹ ಎಕ್ಸ್ಪರ್ಟ್ಗಳು ಸೆಲೆಕ್ಟ್ ಮಾಡೋ ಟೀಂ ನೋಡಿದ್ರೆ ಒಬ್ಬ ಬೀದೀಲಿ ಹೋಗೋ ಬಚ್ಚಾ ಕೂಡ ಹೇಳ್ತಾನೆ, ಇದು ಬಿಗಿಲ್ ಟೀಮ್. ಇದು ಕಪ್ ಗೆಲ್ಲಲ್ಲ ಅಂತ. ಮತ್ತೆ ರಾಯಲ್ಸ್ ಪಾಯಿಂಟ್ಸ್ ಟೇಬಲ್ಲಲ್ಲಿ ೫ನೇ ಸ್ಥಾನದಲ್ಲಿದ್ದು, ಮುಂದೆ ೧೦ನೇ ಸ್ಥಾನಕ್ಕೆ ಬಂದು ಚೆನ್ನೆöÊ ಜೊತೆ ಕಾಂಪಿಟೀಷನ್ ಮಾಡೋ ಹಳೆ ಚಾಳಿ ಮುಂದುವರಿಸಿದ್ರೂ ಆಶ್ಚರ್ಯ ಇಲ್ಲ.
ಓಂ
ಕರ್ನಾಟಕ ಟಿವಿ

- Advertisement -

Latest Posts

Don't Miss