Monday, June 23, 2025

Latest Posts

ಕೂದಲು ಯಾಕೆ ಉದುರುತ್ತೆ ಗೊತ್ತಾ..?

- Advertisement -

ಇಂದಿನ ಯುವ ಪೀಳಿಗೆಯವರ ಹೆಚ್ಚಿನ ಸೌಂದರ್ಯ ಸಮಸ್ಯೆ ಅಂದ್ರೆ ಕೂದಲು ಉದುರುವ ಸಮಸ್ಯೆ. ಬೇಕಾದ್ರೆ ಮುಖದ ಮೇಲಾಗುವ  ಮೊಡವೆ ಬಗ್ಗೆ ಟೆನ್ಶನ್ ತೆಗೆದುಕೊಳ್ಳೋದಿಲ್ಲ. ಆದ್ರೆ ಕೂದಲು ಉದುರುವ ಸಮಸ್ಯೆಗೆ ಏನೇ ಪರಿಹಾರ ಮಾಡಿದ್ರೂ ಸರಿಯಾಗ್ತಾ ಇಲ್ಲಾ ಅಂತಾ ಹೇಳ್ತಾರೆ. ಆದ್ರೆ ಕೂದಲು ಉದುರಲು ಕಾರಣವೇನು..? ಅದಕ್ಕೆ ಮನೆಯಲ್ಲೇ ಪರಿಹಾರ ಹೇಗೆ ಮಾಡಿಕೊಳ್ಳಬೇಕು ಅಂತಾ ಯೋಚಿಸೋದಿಲ್ಲಾ. ಹಾಗಾದ್ರೆ ಕೂದಲು ಉದುರುವಿಕೆಗೆ ಕಾರಣವೇನು..? ಅದಕ್ಕೇನು ಪರಿಹಾರ ಮಾಡಿಕೊಳ್ಳುವುದು ಅಂತಾ ತಿಳಿಯೋಣ ಬನ್ನಿ..

ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 1

ಕೂದಲು ಉದುರಲು ಮುಖ್ಯವಾದ ಕಾರಣ ಅಂದ್ರೆ ನಿಮ್ಮ ಹೊಟ್ಟೆ ಸರಿಯಾಗಿ ಕ್ಲೀನ್ ಆಗದೇ ಇರುವುದು. ಹೊಟ್ಟೆ ಸರಿಯಾಗಿ ಕ್ಲೀನ್ ಆಗಬೇಕು ಅಂದ್ರೆ ನಿಮ್ಮ ಜೀರ್ಣಶಕ್ತಿ ಸರಿಯಾಗಿ ಇರಬೇಕು. ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗಬೇಕು ಅಂದ್ರೆ, ಸರಿಯಾಗಿ ನೀರು ಕುಡಿಯಬೇಕು. ನಿಮಗೆ ಜೀರ್ಣ ಮಾಡಿಕೊಳ್ಳಲು ಆಗುವಷ್ಟು ನೀರು ಕುಡಿಯಿರಿ. ಜಂಕ್ ಫುಡ್, ಮಸಾಲೆ ಪದಾರ್ಥ ತಿನ್ನುವುದನ್ನು ಕಡಿಮೆ ಮಾಡಿ. ಅಂಗಡಿಯಲ್ಲಿ ಸಿಗುವ ತಂಪು ಪಾನೀಯವನ್ನು ಕುಡಿಯಬೇಡಿ.

ಆಗ ನೀವು ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಆಗ ಮಲಬದ್ಧತೆ ಸಮಸ್ಯೆ ಬರುವುದಿಲ್ಲ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರು ಕುಡಿಯುವುದು ಎಲ್ಲಕ್ಕಿಂತ ಉತ್ತಮ ಮದ್ದು. ಇದರಿಂದ ಮಲಬದ್ಧತೆ ಸಮಸ್ಯೆ ಬರುವುದಿಲ್ಲ. ಇನ್ನು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 5 ನೆನೆಸಿ ಸಿಪ್ಪೆ ತೆಗೆದ ಬಾದಾಮಿ, ಒಂದು ನೆನೆಸಿದ ಅಂಜೂರ ತಿನ್ನಬೇಕು. ಇದರಿಂದ ಕೂದಲು ಉದುರುವ ಸಮಸ್ಯೆ ಕಂಟ್ರೋಲಿಗೆ ಬರುತ್ತದೆ.

ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 2

ಇನ್ನು ನೀವು ಶಾಂಪೂ ಹಾಕುವ ಬದಲು, ಮನೆಯಲ್ಲೇ ಶಾಂಪ್ಯೂ ತಯಾರಿಸಿ.  ಸೀಗೆಕಾಯಿ ಪುಡಿ, ನೆಲ್ಲಿಕಾಯಿ ಪುಡಿ, ಮೆಂತ್ಯೆ ಪುಡಿ ಮತ್ತು ಅಂಟ್ಲಕಾಯಿಯ ಪುಡಿಯನ್ನು ತರಿಸಿಕೊಳ್ಳಿ. ರಾತ್ರಿ ಮಲಗುವಾಗ ಬಿಸಿ ನೀರಿನಲ್ಲಿ ಇವೆಲ್ಲವನ್ನೂ ಸಮ ಪ್ರಮಾಣದಲ್ಲಿ ನೆನೆಸಿಡಿ. ನಂತರ ಮರುದಿನ ಈ ಪೇಸ್ಟನ್ನ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿ. ಇದು ಹರ್ಬಲ್ ಶ್ಯಾಂಪೂವಾಗಿದ್ದು, ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತವಾದ ಶ್ಯಾಂಪೂವಿಗಿಂತ ಉತ್ತಮವಾಗಿದೆ.

- Advertisement -

Latest Posts

Don't Miss