Tuesday, October 22, 2024

Latest Posts

ಈ ಸುಲಭ ಉಪಾಯವನ್ನು ಬಳಸಿ ಜಿರಳೆ ಮತ್ತು ಇಲಿಗಳಿಗೆ ಗೇಟ್ ಪಾಸ್ ನೀಡಿ..

- Advertisement -

ಇಂದಿನ ಕಾಲದಲ್ಲಿ ಹಲವು ಮನೆಗಳಲ್ಲಿ ಇಲಿಗಳ ಸಮಸ್ಯೆ ಇದೆ. ಒಂದು ದೊಡ್ಡ ಮನೆಯಲ್ಲಿ ಕೂಡ, ಗೊತ್ತಿಲ್ಲದಂತೆ, ಒಂದೆರಡು ಇಲಿಗಳು ಹೊಕ್ಕುವ ಸಾಧ್ಯತೆ ಇರುತ್ತದೆ. ಅದರಲ್ಲಿ ಹಳ್ಳಿಗಳಲ್ಲಿ ಇಲಿಗಳ ಕಾಟ ಜೋರಾಗಿಯೇ ಇರತ್ತೆ. ನಾವು ಇಲಿ ಬೋನು, ಇಲಿ ಪಾಷಾಣವೆಲ್ಲ ತಂದರೂ, ಅದರ ಎಫೆಕ್ಟ್ ಒಂದೆರಡು ದಿನ ಮಾತ್ರ ಇರುತ್ತದೆ. ಮೂರನೇ ದಿನದಿಂದ ಇಲಿಗಳು, ಎಚ್ಚೆತ್ತು ಅದನ್ನೆಲ್ಲ ತಿನ್ನುವುದಿಲ್ಲ. ಹಾಗಾಗಿ ಅಂಥ ಉಪಾಯ ಫಲಿಸುವುದಿಲ್ಲ. ಹಾಗಾಗಿ ಇಂದು ನಾವು ಇಲಿಗಳನ್ನು ಮನೆಯಿಂದ ಓಡಿಸಲು, ಮತ್ತು ಜಿರಳೆಗಳು ಬಾರದಿರಲು ಏನು ಮಾಡಬೇಕು ಅನ್ನೋ ಬಗ್ಗೆ ಟಿಪ್ಸ್ ನೀಡಲಿದ್ದೇವೆ.

ಮೊದಲಿಗೆ ಒಂದು ಸ್ಪ್ರೇ ಬಾಟಲ್ ಬೇಕು. ನೀವು ಪಾತ್ರೆ, ಸಾಮಾನ್ಯ ಬಾಟಲಿಗಳನ್ನ ಕೂಡ ಬಳಸಬಹುದು. ಆದ್ರೆ ಸ್ಪ್ರೇ ಬಾಟಲಿ ಬಳಸಿದರೆ, ತುಂಬಾ ಒಳ್ಳೆಯದು. ಅದರಲ್ಲಿ ಅರ್ಧ ಗ್ಲಾಸ್ ನೀರು ಹಾಕಿ. ಅಂದ್ರೆ ಬಾಟಲಿ ಅರ್ಧವಷ್ಟೇ ತುಂಬಿರಬೇಕು. ಅದಕ್ಕೆ ಎರಡು ಸ್ಪೂನ್ ಉಪ್ಪು, ಒಂದು ಸ್ಪೂನ್ ಕರ್ಪೂರದ ಪುಡಿ ಹಾಕಿ ಮಿಕ್ಸ್ ಮಾಡಿ. ಇದಕ್ಕೆ ನಾಲ್ಕು ಸ್ಪೂನ್ ವೈಟ್ ವಿನೇಗರ್, ಎರಡು ಸ್ಪೂನ್ ಡೆಟಾಲ್ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.

ಈ ಒಂದು ಹತ್ತಿ ತೆಗೆದುಕೊಂಡು ಅದಕ್ಕೆ ಈ ನೀರನ್ನು ಸ್ಪ್ರೇ ಮಾಡಿ, ಆ ಹತ್ತಿಯನ್ನು ಜಿರಳೆ, ಇಲಿ ಬರುವ ಜಾಗದಲ್ಲಿರಿಸಿ. ಹೀಗೆ ಮಾಡುವುದರಿಂದ ಇಲಿ ಮತ್ತು ಜಿರಳೆಗಳು ಓಡಿ ಹೋಗುತ್ತದೆ. ಆದರೆ ನೆನಪಿರಲಿ, ಗೋಡೆಗಳಿಗೆ, ನೆಲಕ್ಕೆ ಈ ಹತ್ತಿ ತಾಕದಂತೆ ನೋಡಿಕೊಳ್ಳಿ. ಯಾಕಂದ್ರೆ ಇದರ ಕಲೆ ಅಷ್ಟು ಬೇಗ ಹೋಗುವುದಿಲ್ಲ. ಹಾಗಾಗಿ ಈ ಹತ್ತಿ ಇಡುವಾಗ, ಯಾವುದಾದರೂ ರಟ್ಟು, ಪ್ಲೇಟ್ ಅಥವಾ ಯಾವುದಾದರೂ ವಸ್ತುವಿನ ಸಹಾಯದಿಂದಲೇ ಇಡಿ.

- Advertisement -

Latest Posts

Don't Miss