ಬ್ರೇನ್ ಶಾರ್ಪ್ ಮಾಡಲು ಮತ್ತು ಚುರುಕಾಗಲು ಈ 10 ಟಿಪ್ಸ್ ನೆನಪಿಡಿ.. ಭಾಗ 1

ನಮ್ಮ ಬ್ರೇನ್ ಶಾರ್ಪ್ ಆಗಬೇಕು ಎಂದಲ್ಲಿ, ನೀವು ಚುರುಕಾಗಬೇಕು ಎಂದಲ್ಲಿ, ಕೆಲ ತಪ್ಪುಗಳನ್ನು ಮಾಡಬಾರದು. ಹಾಗಾದ್ರೆ ಅಂಥ ತಪ್ಪುಗಳು ಯಾವುದು..? ಅನ್ನೋ ಬ್ಗಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..

ಮೊದಲನೇಯ ಟಿಪ್ಸ್, ಎಂದಿಗೂ ಆರೋಗ್ಯ ಸರಿ ಇಲ್ಲದಿದ್ದಾಗ, ಕೆಲಸ ಮಾಡಬೇಡಿ. ನಿಮಗೆ ಜ್ವರ ಬಂದಿರಬಹುದು ಅಥವಾ ಹೆಣ್ಣು ಮಕ್ಕಳು ಮುಟ್ಟಿನ ನೋವಿನಿಂದ ನರಳುತ್ತಿರಬಹುದು. ಈ ಸಂದರ್ಭದಲ್ಲಿ ಮನೆಗೆಲಸ ಅಥವಾ ಪ್ರಯಾಣ ಅಥವಾ ಆಫೀಸು ಕೆಲಸ, ಇದ್ಯಾವುದನ್ನು ಮಾಡಬೇಡಿ. ಇದರಿಂದ ನಿಮಗೆ ಮಾನಸಿಕ ಹಿಂಸೆಯೂ ಆಗುತ್ತದೆ. ಈ ರೀತಿ ದೈಹಿಕ ಮತ್ತು ಮಾನಸಿಕ ಹಿಂಸೆಯಾದಾಗ ಅದರ ಪರಿಣಾಮ ಮೆದುಳಿನ ಮೇಲೆ ಬೀಳುತ್ತದೆ. ನಿಮ್ಮ ಚುರುಕುತನ ಹೊರಟು ಹೋಗುತ್ತದೆ. ಹಾಗಾಗಿ ಆರೋಗ್ಯ ಸರಿ ಇಲ್ಲದಿದ್ದಾಗ, ರೆಸ್ಟ್ ಮಾಡಿ.

ಎರಡನೇಯ ಟಿಪ್ಸ್ ಹೆಚ್ಚು ಸಕ್ಕರೆ ತಿನ್ನಬಾರದು. ನೀವು ಆರೋಗ್ಯವಾಗಿರಬೇಕು. ನಿಮ್ಮ ಬ್ರೇನ್ ಶಾರ್ಪ್ ಆಗಿರಬೇಕು ಅಂದ್ರೆ ನೀವು ಸಕ್ಕರೆ ಬಳಕೆ ಮಾಡಲೇಬಾರದು. ಆದ್ರೆ ಕೆಲ ಆಹಾರಗಳಿಗೆ ಸಕ್ಕರೆ ಹಾಕದಿದ್ದರೆ, ಅವು ರುಚಿಸುವುದಿಲ್ಲ. ಮತ್ತು ಅದಕ್ಕೆ ಪರ್ಯಾಯವಾಗಿ ಏನು ಬಳಸುವಂತಿರುವುದಿಲ್ಲ. ಈ ವೇಳೆ ನೀವು ಕೊಂಚ ಸಕ್ಕರೆಯನ್ನ ಬಳಸಬಹುದು. ಇಲ್ಲದಿದ್ದಲ್ಲಿ, ನೀವು ಬೆಲ್ಲ, ಜೇನುತುಪ್ಪ, ಜೋನಿ ಬೆಲ್ಲ, ಅಂಜೂರ, ಖರ್ಜೂರ, ಒಣ ದ್ರಾಕ್ಷಿ ಇವನ್ನೆಲ್ಲ ಬಳಸಬಹುದು.

ಮೂರನೇಯ ಟಿಪ್ಸ್ ಎಂದಿಗೂ ಊಟ, ತಿಂಡಿಯನ್ನು ಸ್ಕಿಪ್ ಮಾಡಬೇಡಿ. ನಿಮ್ಮ ಮೆದುಳು ಉತ್ತಮವಾಗಿ ಕಾರ್ಯಗತವಾಗಬೇಕು ಅಂದ್ರೆ, ನೀವು ಆರೋಗ್ಯಕರ ಆಹಾರ ತಿನ್ನುವುದು ತುಂಬಾ ಮುಖ್ಯ. ಅಲ್ಲದೇ ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡುವುದು ಕೂಡ ಮುಖ್ಯ. ಹಾಗಾಗಿ ತಿಂಡಿ ತಿನ್ನುವ ಸಂದರ್ಭದಲ್ಲಿ, ಊಟ ಮಾಡುವ ಸಮಯದಲ್ಲಿ ಲೈಟ್ ಆಗಿ ಫಾಸ್ಟ್ ಫುಡ್ ತಿಂದ್ರೆ, ಅದರ ಪರಿಣಾಮ ನಿಮ್ಮ ಮೆದುಳಿನ ಮೇಲೆ ಬೀಳುತ್ತದೆ. ಹಾಗಾಗಿ ತಿಂಡಿ ತಿನ್ನುವ ಸಮಯಕ್ಕೆ ತಿಂಡಿ, ಊಟ ಮಾಡುವ ಸಮಯಕ್ಕೆ ಊಟ ಮಾಡಿದರೆ, ಆರೋಗ್ಯ ಸರಿಯಾಗಿ ಇರತ್ತೆ. ನಿಮ್ಮ ಮೆದುಳು ಚುರುಕಾಗಿರತ್ತೆ.

ನಾಲ್ಕನೇಯ ಟಿಪ್ಸ್ ಜೀವನವನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡಬೇಡಿ. ಯಾವ ಸಮಯಕ್ಕೆ ಯಾವ ಕೆಲಸ ಮಾಡಬೇಕೋ, ಅದನ್ನೇ ಮಾಡಬೇಕು. ಕೆಲಸದ ಸಮಯದಲ್ಲಿ ಕೆಲಸ, ಮನೆಯ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ಆ ಕೆಲಸ, ಎಂಜಾಯ್ ಮಾಡುವ ವೇಳೆ ಮಾತ್ರವೇ ಜೀವನ ಎಂಜಾಯ್‌ ಮಾಡಿದ್ರೆ, ಒಳ್ಳೆಯದಾಗಿರತ್ತೆ. ಅದನ್ನು ಬಿಟ್ಟು ಅಗತ್ಯಕ್ಕಿಂತ ಹೆಚ್ಚು ಜೀವನವನ್ನು ಎಂಜಾಯ್ ಮಾಡುವುದು, ಅಥವಾ ಜೀವನವನ್ನೇ ಎಂಜಾಯ್ ಮಾಡದೇ, ಬರೀ ಕೆಲಸ ಕೆಲಸ ಕೆಲಸ ಎಂದು ಒದ್ದಾಡುವುದರಿಂದಲೂ ನಿಮ್ಮ ಮೆದುಳು ಶಕ್ತಿ ಕಳೆದುಕೊಳ್ಳುತ್ತದೆ.

ಐದನೇಯ ಟಿಪ್ಸ್ ನೆಮ್ಮದಿಯಾಗಿ ನಿದ್ದೆ ಮಾಡುವುದು ತುಂಬಾ ಮುಖ್ಯ. ಕೆಲವರಿಗೆ ಮನೆಯಲ್ಲಿ ಕಿರಿಕಿರಿ ಇರುತ್ತದೆ. ಕೆಲವರಿಗೆ ಆಫೀಸು ಕೆಲಸದ ಟೆನ್ಶನ್ ಇರುತ್ತದೆ. ಹಾಗಾಗಿ ನೆಮ್ಮದಿಯಾಗಿ ನಿದ್ದೆ ಮಾಡಲಾಗುವುದಿಲ್ಲ. ಆದ್ರೆ ಮನುಷ್ಯ ಚುರುಕಾಗಿರಬೇಕು. ಮೆದುಳು ಸರಿಯಾಗಿ ಕಾರ್ಯನಿರ್ವಹಿಸಬೇಕು ಅಂದ್ರೆ, ನೀವು ರಾತ್ರಿ ಹೊತ್ತು 8 ಗಂಟೆಗಳ ಕಾಲ, ನೆಮ್ಮದಿಯಾಗಿ ನಿದ್ದೆ ಮಾಡಲೇಬೇಕು. ಹಾಗಾಗಿ ಧ್ಯಾನ, ಪ್ರಾಣಾಯಾಮ ಮಾಡಿ, ರಾತ್ರಿ ಮಲಗುವಾಗ ಗೋಲ್ಡನ್ ಮಿಲ್ಕ್ ಕುಡಿದು ಮಲಗಿ.

ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

ಈ ಪೇಯವನ್ನ ನೀವು ಕುಡಿದರೆ, ನಿಮ್ಮ ಮೂಳೆ ಗಟ್ಟಿಯಾಗತ್ತೆ, ಕ್ಯಾಲ್ಶಿಯಂ ಪ್ರಮಾಣ ಹೆಚ್ಚುತ್ತೆ..

ಹಾರ್ಮೋನ್ ಬ್ಯಾಲೆನ್ಸ್ಗೆ ಸಹಕಾರಿಯಾಗಿರುವ ಒಣಹಣ್ಣಿನ ಬಗ್ಗೆ ಮಾಹಿತಿ..

ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?

About The Author