Friday, September 20, 2024

Latest Posts

ಬ್ರೇನ್ ಶಾರ್ಪ್ ಮಾಡಲು ಮತ್ತು ಚುರುಕಾಗಲು ಈ 10 ಟಿಪ್ಸ್ ನೆನಪಿಡಿ.. ಭಾಗ 2

- Advertisement -

ನಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಮೊದಲ ಭಾಗದಲ್ಲಿ 5 ಟಿಪ್ಸ್ ಹೇಳಿದ್ದೆವು. ಇದೀಗ ಮುಂದುವರಿದ ಭಾಗವಾಗಿ, ಇನ್ನಷ್ಟು ಟಿಪ್ಸ್ ಹೇಳಲಿದ್ದೇವೆ.

ಆರನೇಯ ಟಿಪ್ಸ್ ಯಾರ ಬಗ್ಗೆಯೂ ಮನಸ್ಸಿನಲ್ಲಿ ಕೋಪ, ಅಸೂಯೆ ಇಟ್ಟುಕೊಳ್ಳಬೇಡಿ. ಈ ವಿಷಯ ತುಂಬ ಮುಖ್ಯವಾಗಿದೆ. ಏಕೆಂದರೆ, ನಿಮ್ಮ ಮನಸ್ಸು ಸರಿಯಾಗಿ ಇದ್ದರೆ ಮಾತ್ರ, ನಿಮ್ಮ ಮೆದುಳು ಸರಿಯಾಗಿ ಇರುತ್ತದೆ. ಇಲ್ಲದಿದ್ದಲ್ಲಿ, ನಿಮಗೆ ಮಾನಸಿಕ ಹಿಂಸೆಯಾಗುತ್ತದೆ. ಉದಾಹರಣೆಗೆ ಮನೆಯಲ್ಲಿ ಬರೀ ಕೊಂಕು ಮಾತನಾಡುವ ಜನರಿರರುತ್ತಾರೆ. ಅಂಥವರ ಕೊಂಕು ಮಾತಿನಿಂದ ನಿಮಗೆ ಬೇಸರವಾಗಬಹುದು.

ಆದರೆ ನೀವು ಆ ಮಾತನ್ನ ನೆನಪಿನಲ್ಲಿರಿಸಿಕೊಳ್ಳದೇ, ಅವರೊಂದಿಗೆ ಒಳ್ಳೆಯ ರೀತಿಯಿಂದಿರಿ. ನೀವು ನೆಮ್ಮದಿಯಿಂದ ಇರಬೇಕು ಅಂದ್ರೆ, ಅಂಥವರ ಮಾತನ್ನ ಮನಸ್ಸಿಗೆ ಹಚ್ಚಿಕೊಳ್ಳಬಾರದು. ಅದಕ್ಕಾಗಿ ನೀವು ಇಡೀ ದಿನ ಬ್ಯುಸಿಯಾಗಿರುವಂತೆ ನೋಡಿಕೊಳ್ಳಿ. ಹೊಸ ಹೊಸ ವಿದ್ಯೆ, ಅಡುಗೆಯನ್ನ ಕಲಿರಿಯಿರಿ. ನಿಮ್ಮನ್ನು ನೀವು ಬ್ಯುಸಿಯಾಗಿ ಇರಿಸಿದ್ದಲ್ಲಿ, ನಿಮ್ಮ ಮನಸ್ಸನ್ನು ಯಾರೂ ನೋಯಿಸಲು ಸಾಧ್ಯವಿಲ್ಲ.

ಏಳನೇಯ ಟಿಪ್ಸ್ ಪ್ರತಿದಿನ 15 ನಿಮಿಷವಾದ್ರೂ ಬೆಳಿಗ್ಗೆ ಬರುವ ಸೂರ್ಯನ ತಿಳಿ ಬಿಸಿಲಿಗೆ ನಿಲ್ಲಿ. ಇದರಿಂದ ನಿಮ್ಮ ದೇಹಕ್ಕೆ ವಿಟಾಮಿನ್‌ ಡಿ ಸಿಗುತ್ತದೆ. ನೀವು ಯಾವಾಗ ನೋಡಿದ್ರೂ ಮನೆಯಲ್ಲೇ ಕುಳಿತುಕೊಂಡರೆ, ನಿಮ್ಮ ದೇಹದಲ್ಲಿ ವಿಟಾಮಿನ್ ಡಿ ಕಡಿಮೆಯಾಗಿ, ನೀವು ಮಂಕಾಗಿ ಹೋಗುತ್ತೀರಿ. ನೀವು ಚೈತನ್ಯದಾಯಕರಾಗಿರಬೇಕು. ಆರೋಗ್ಯವಾಗಿರಬೇಕು ಅಂದ್ರೆ ಸೂರ್ಯನ ತಿಳಿ ಬಿಸಿಲಿಗೆ ನಿಲ್ಲಿ.

ಎಂಟನೇಯ ಟಿಪ್ಸ್ ಪ್ರತಿದಿನ ಏನನ್ನಾದರೂ ಕಲಿಯಲು ಪ್ರಯತ್ನಿಸಿ. ಹೊಸ ಹೊಸ ಸ್ಕಿಲ್ಸ್ ಕಲಿತುಕೊಳ್ಳಿ. ಅಡುಗೆ ಕಲಿಯಿರಿ. ಹೊಸ ವಿಷಯ ತಿಳಿಯಿರಿ. ಇದರಿಂದ ನಿಮ್ಮ ಮೆದುಳಿಗೆ ಯೋಚನಾ ಶಕ್ತಿ ಬರುತ್ತದೆ. ಮೆದುಳು ಎಷ್ಟು ಯೋಚಿಸಲು ಶುರು ಮಾಡುತ್ತದೆಯೋ, ಅಷ್ಟು ಉತ್ತಮವಾಗಿರುತ್ತದೆ. ಅದಕ್ಕೆ ಹಿರಿಯರು ಮಕ್ಕಳಿಗೆ ಪ್ರಶ್ನೆ ಕೇಳಿ, ತಲೆ ಓಡಿಸಿ, ಉತ್ತರಿಸು ಅಂತಾ ಹೇಳುತ್ತಾರೆ. ಯಾಕಂದ್ರೆ ಇದರಿಂದ ಅವರ ಯೋಚನಾ ಶಕ್ತಿ ಹೆಚ್ಚಾಗತ್ತೆ.

ಒಂಭತ್ತನೇಯ ಟಿಪ್ಸ್ ವ್ಯಾಯಾಮ, ಧ್ಯಾನ, ಪ್ರಾಣಾಯಾಮ ಮಾಡುವುದು. ನೀವು ಪ್ರತಿದಿನ ಅರ್ಧ ಗಂಟೆಯಾದ್ರೂ ಯೋಗ, ಧ್ಯಾನ, ಪ್ರಾಣಾಯಾಮ, ವ್ಯಾಯಾಮ ಮಾಡಿದರೆ ನಿಮ್ಮ ಆರೋಗ್ಯ ಚೆನ್ನಾಗಿ ಇರುತ್ತದೆ.

ಹತ್ತನೇಯ ಟಿಪ್ಸ್ ಯಾರ ಮೇಲಾದರೂ ಇರುವ ಕೋಪ ದ್ವೇಷವನ್ನ ತಲೆಯಿಂದ ತೆಗೆದು ಹಾಕಿ. ಈ ಹಿಂದೆ ನಿಮಗೆ ವಿರೋಧಿಗಳು ಇದ್ದಿರಬಹುದು. ಅವರು ನಿಮ್ಮ ಜೊತೆ ಕೆಟ್ಟದ್ದಾಗಿ ನಡೆದುಕೊಂಡಿರಬಹುದು. ನೀವು ಅದನ್ನ ಮರೆತು, ಮುನ್ನಡೆವ ಯೋಚನೆ ಮಾಡುವುದು ಉತ್ತಮ. ದ್ವೇಷ ಸಾಧಿಸಿದಷ್ಟು, ಇನ್ನೊಬ್ಬರ ಬಗ್ಗೆ ಮನಸ್ಸಿನಲ್ಲಿ ಕೋಪ ಉಳಿಸಿಕೊಂಡಷ್ಟು ನಮ್ಮ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಮೆದುಳಿನ ಶಕ್ತಿ ಕುಂದಿಹೋಗುತ್ತದೆ.

ಈ ಪೇಯವನ್ನ ನೀವು ಕುಡಿದರೆ, ನಿಮ್ಮ ಮೂಳೆ ಗಟ್ಟಿಯಾಗತ್ತೆ, ಕ್ಯಾಲ್ಶಿಯಂ ಪ್ರಮಾಣ ಹೆಚ್ಚುತ್ತೆ..

ಹಾರ್ಮೋನ್ ಬ್ಯಾಲೆನ್ಸ್ಗೆ ಸಹಕಾರಿಯಾಗಿರುವ ಒಣಹಣ್ಣಿನ ಬಗ್ಗೆ ಮಾಹಿತಿ..

ನಿಮ್ಮ ಬಾಯಿಯಿಂದ ಬರುವವ ವಾಸನೆಯನ್ನು ಹೇಗೆ ತಡೆಯಬೇಕು..? ಏನು ಮಾಡಬೇಕು..?

- Advertisement -

Latest Posts

Don't Miss