ಪ್ರತೀ ಮನುಷ್ಯನಿಗೂ ಕಷ್ಟ ಬಂದೇ ಬರುತ್ತದೆ. ಯಾಕಂದ್ರೆ ಜೀವನ ಅಂದ್ರೆ ಬರೀ ಸುಖದ ಸುಪ್ಪತಿಗೆ ಅಲ್ಲ. ಶ್ರೀಮಂತನಿಗೂ ಕಷ್ಟದ ಪರಿಸ್ಥಿತಿ ಎದುರಾಗುತ್ತದೆ. ಕೋಟಿ ಕೋಟಿ ಸಂಪಾದಿಸಿದವನಿಗೂ ಕೆಲವೊಮ್ಮೆ ಜೀವನದಲ್ಲಿ ಜಿಗುಪ್ಸೆ ಬರುತ್ತದೆ. ಹಾಗಾದ್ರೆ ನಮ್ಮ ಜೀವನದಲ್ಲಿ ಕಠಿಣ ಪರಿಸ್ಥಿತಿ ಎದುರಾದಾಗ ನಾವೇನು ಮಾಡಬೇಕು ಅಂತಾ ಈ ಕಥೆಯ ಮೂಲಕ ತಿಳಿಯೋಣ ಬನ್ನಿ..
ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 1
ಒಂದು ರಾಜ್ಯದ ರಾಜ, ತನ್ನ ಮಂತ್ರಿ ಮಂಡಲವನ್ನು ಸಭೆಗೆ ಕರೆದ. ಅವರ ಬಳಿ, ನನಗೊಂದು ಸೂತ್ರ ಬೇಕು. ಆದರೆ ಅದರಲ್ಲಿ ವಿವರಣೆ ಇರಬಾರದು. ಅದು ಒಂದು ವಾಕ್ಯದ ಸೂತ್ರವಿರಬೇಕು. ನಾನು ಆ ವಾಕ್ಯವನ್ನು ಓದಿದಾಗ ನನಗೆ ದುಃಖವಾಗಿದ್ದರೆ, ಖುಷಿಯಾಗಬೇಕು ಮತ್ತು ಖುಷಿಯಾದರೆ ನಾನು ಸುಮ್ಮನಾಗಬೇಕು ಎಂದು ಹೇಳುತ್ತಾರೆ. ಮಂತ್ರಿ ಮಂಡಲದವರೆಲ್ಲ ಹಲವು ಗ್ರಂಥಗಳನ್ನು ಓದುತ್ತಾರೆ. ಆದರೂ ಅವರಿಗೆ ಆ ಸೂತ್ರ ಕಂಡು ಹಿಡಿಯಲು ಆಗುವುದಿಲ್ಲ. ಆಗ ಆ ರಾಜ್ಯಕ್ಕೆ ಓರ್ವ ಸಾಧುಗಳು ಬರುತ್ತಾರೆ. ರಾಜ ಅವರ ಬಳಿ ಈ ಬಗ್ಗೆ ಕೇಳುತ್ತಾನೆ.
ಅದಕ್ಕೆ ಆ ಸಾಧುಗಳು ನನ್ನ ಬಳಿ ಒಂದು ಉಂಗುರವಿದೆ. ಆ ಉಂಗುರದ ಹಿಂದೆ ಒಂದು ಚೀಟಿ ಇದೆ. ಈ ಉಂಗುರವನ್ನ ನನಗೆ ನನ್ನ ಗುರುಗಳು ಕೊಟ್ಟಿದ್ದರು. ನಿನಗೆ ದುಃಖವಾದಾಗ, ಕಷ್ಟದ ಸಮಯ ಬಂದಾಗ ಅಥವಾ ನಿನಗೆ ಸಕಲ ಸರ್ವಸ್ವವೂ ಒಲಿದಾಗ, ಅಹಂ ಬಂದಾಗ ಈ ಚೀಟಿಯನ್ನು ಓದು ಎಂದು ಹೇಳಿದ್ದರು. ಇಲ್ಲಿಯವರೆಗೆ ನನ್ನ ಜೀವನದಲ್ಲಿ ನನದೆ ಕಷ್ಟಗಳು ಬರಲಿಲ್ಲ. ಅಹಂ ನನ್ನ ಹತ್ತಿರ ಸುಳಿಯಲಿಲ್ಲ. ಹಾಗಾಗಿ ನಾನಿದನ್ನು ಓದಲಿಲ್ಲ. ನೀನು ಈ ಉಂಗುರುವನ್ನು ಹಾಕಿಕೊಂಡಿರು. ನಿನಗೆ ಕಷ್ಟ ಬಂದಾಗ ಅಥವಾ ಅಹಂ ಬಂದಾಗ ಇದನ್ನು ಓದು.
ಇದು ಓರ್ವ ಭಿಕ್ಷುಕ ಕೋಟ್ಯಾಧೀಶನಾದ ಕಥೆ.. ಭಾಗ 2
ಅಲ್ಲಿಯವರೆಗೂ ಇದನ್ನು ಓದಬೇಡ. ಇದನ್ನು ನೀನು ಸುಮ್ಮ ಸುಮ್ಮನೆ ಓದಿದರೆ, ಅದಕ್ಕೆ ಅರ್ಥವಿರುವುದಿಲ್ಲ ಎಂದು ಹೇಳಿ ಉಂಗುರ ಕೊಟ್ಟು ಹೊರಡುತ್ತಾರೆ. ಹಲವು ವರ್ಷಗಳು ಕಳೆಯುತ್ತದೆ. ರಾಜನ ರಾಜ್ಯದ ಮೇಲೆ ದಾಳಿಯಾಗುತ್ತದೆ. ಬೇರೆ ರಾಜ್ಯದವರು ಬಂದು ರಾಜನನ್ನು ಲೂಟಿ ಮಾಡುತ್ತಾರೆ. ಆತ ಕೆಲ ತಿಂಗಳ ಬಳಿಕ ಅದೇ ರಾಜ್ಯದ ಮೇಲೆ ಸೈನ್ಯ ಸಮೇತ ದಾಳಿ ಮಾಡಿ, ಮತ್ತೆ ತಾನು ಕಳೆದುಕೊಂಡದ್ದೆಲ್ಲ ಹಿಂಪಡೆದುಕೊಳ್ಳುತ್ತಾನೆ. ತನ್ನ ಗೆಲುವಿನಿಂದ ರಾಜನಿಗೆ ಅಹಂ ಬರುತ್ತದೆ.
ಆಗ ಅವನ ಕೈಯಲ್ಲಿದ್ದ ಉಂಗುರದ ಹೊಳಪು ಅವನ ಕಣ್ಣಿಗೆ ಬೀಳುತ್ತದೆ. ಸಾದು ಹೇಳಿದ ಮಾತು ನೆನಪಿಗೆ ಬರುತ್ತದೆ. ಅವನು ಆ ಚೀಟಿಯನ್ನು ತೆಗೆದು ನೋಡುತ್ತಾನೆ. ಅದರಲ್ಲಿ ಬರೆದ ಸಾಲು ಕಂಡು ಮೌನವಾಗುತ್ತಾನೆ. ಅವನ ಅಹಂ ಇಳಿದಿರುತ್ತದೆ. ಮಂತ್ರಿ ಈ ಬಗ್ಗೆ ಕೇಳಿದಾಗ, ಅವನ ಬಳಿ ಚೀಟಿ ಕೊಡುತ್ತಾನೆ. ಆ ಚೀಟಿಯಲ್ಲಿ ಶ್ರೀಕೃಷ್ಣನ ಮಾತಾದ ಈ ಸಮಯ ಕಳೆದು ಹೋಗುತ್ತದೆ ಎಂದು ಬರೆದಿರುತ್ತದೆ.
ಅದರ ಅರ್ಥ ರಾಜನಿಗೆ ಅರ್ಥವಾಗುತ್ತದೆ. ತಾನು ಈ ಗೆಲುವಿಗಾಗಿ ಈ ಸಮಯದಲ್ಲಿ ಮೆರೆಯುತ್ತಿದ್ದೇನೆ. ಅದು ಕಳೆದು ಹೋಗುತ್ತದೆ. ಮತ್ತೆ ನನ್ನ ರಾಜ್ಯದ ಮೇಲೆ ಯಾವಾಗ ಬೇಕಾದರೂ ದಾಳಿಯಾಗಬಹುದು. ಆಗ ನಾನು ಧೈರ್ಯ ಗೆಡಬಾರದು. ಯಾಕಂದ್ರೆ ಈ ಸಮಯ ಕಳೆದು ಹೋಗುತ್ತದೆ ಎಂದುಕೊಂಡು ರಾಜ ಜೀವನ ಸಾರ ಅರಿತುಕೊಳ್ಳುತ್ತಾನೆ.