Monday, December 23, 2024

Latest Posts

ರೆಸ್ಟೋರೆಂಟ್ ಸ್ಟೈಲ್ ಶಾಹಿ ಪನೀರ್ ಮನೆಯಲ್ಲೇ ತಯಾರಿಸಿ..

- Advertisement -

ಪನೀರ್ ನಿಂದ ಮಾಡುವ ಕೆಲವು ರೆಸಿಪಿಗಳನ್ನು ಹಲವರು ಮನೆಯಲ್ಲಿ ಟ್ರೈ ಮಾಡೋಕ್ಕೆ ಇಷ್ಟಪಡೋದಿಲ್ಲಾ. ಯಾಕಂದ್ರೆ ಅದರ ರುಚಿ ಹಾಳಾದ್ರೆ, ಮಾಡಿದ್ದೆಲ್ಲಾ ಸುಮ್ಮನೆ ವೇಸ್ಟ್ ಆಗತ್ತೆ ಅಂತಾ. ಆದ್ರೆ ನೀವು ಸರಿಯಾದ ರೀತಿಯಲ್ಲಿ ಟ್ರೈ ಮಾಡಿದ್ರೆ, ಖಂಡಿತವಾಗ್ಲೂ ರೆಸ್ಟೋರೆಂಟ್ ಸ್ಟೈಲ್‌ ರುಚಿನೇ ಬರತ್ತೆ. ಹಾಗಾದ್ರೆ ರುಚಿಯಾದ ಶಾಹಿ ಪನೀರ್ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಗ್ಯಾಸ್ ಆನ್ ಮಾಡಿ, ಒಂದು ಪ್ಯಾನ್ ಇರಿಸಿ, 1 ಟೇಬಲ್‌ ಸ್ಪೂನ್‌ ಎಣ್ಣೆ ಮತ್ತು ಒಂದು ಕ್ಯೂಬ್ ಬೆಣ್ಣೆ ಹಾಕಿ, ಬಿಸಿ ಮಾಡಿ. ಈಗ ಇದಕ್ಕೆ ಕೊಂಚ ಜೀರಿಗೆ, 1 ಪಲಾವ್ ಎಲೆ, 4ರಿಂದ 5 ಕಾಳು ಮೆಣಸು, 3 ಏಲಕ್ಕಿ, ಸಣ್ಣ ತುಂಡು ಚಕ್ಕೆ, 2 ಲವಂಗ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಇದಕ್ಕೆ 2 ಮಿಡಿಯಂ ಸೈಜ್‌ನ ಈರುಳ್ಳಿಯನ್ನು ಕತ್ತರಿಸಿ, ಸೇರಿಸಿ.

ಮನೆಯಲ್ಲೇ ಟೇಸ್ಟಿಯಾಗಿ ನೀವೂ ತಯಾರಿಸಬಹುದು ತವಾ ಪುಲಾವ್..

ಇವಿಷ್ಟನ್ನೂ ಚೆನ್ನಾಗಿ ಹುರಿದ ಬಳಿಕ, 3 ಒಣಮೆಣಸು, 5 ಎಸಳು ಬೆಳ್ಳುಳ್ಳಿ, ಚಿಕ್ಕ ತುಂಡು ಶುಂಠಿ, 2 ಹಸಿ ಮೆಣಸು, 5ರಿಂದ 6 ಕೊತ್ತೊಂಬರಿ ಸೊಪ್ಪಿನ ಕಡ್ಡಿ, 20 ಗೋಡಂಬಿ, ಸಣ್ಣಗೆ ಕತ್ತರಿಸಿದ 4 ಟೊಮೆಟೋ,  ಉಪ್ಪನ್ನು ಸೇರಿಸಿ, ಹುರಿಯಿರಿ. ಇದನ್ನು ಸರಿಯಾಗಿ ಹುರಿದ ಬಳಿಕ ಒಂದು ಸಣ್ಣ ಗ್ಲಾಸ್ ಬಿಸಿ ನೀರನ್ನು ಇದಕ್ಕೆ ಸೇರಿಸಿ, 10 ನಿಮಿಷ ಮಂದ ಉರಿಯಲ್ಲಿ ಚೆನ್ನಾಗಿ ಬೇಯಿಸಿ.

ಈಗ ಗ್ಯಾಸ್ ಆಫ್ ಮಾಡಿ, ಈ ಮಿಶ್ರಣ ತಣಿಯಲು ಬಿಡಿ. ಮಿಶ್ರಣ ತಣಿದ ಬಳಿಕ, ಇದರಲ್ಲಿದ್ದ ಪಲಾವ್ ಎಲೆ, ಚಕ್ಕೆ ತುಂಡನ್ನು ಬೇರ್ಪಡಿಸಿ, ಮಿಕ್ಸಿ ಜಾರ್‌ಗೆ ಮಿಶ್ರಣ ಹಾಕಿ, ನುಣ್ಣಗೆ ರುಬ್ಬಿಕೊಳ್ಳಿ. ಈಗ ಶಾಹಿ ಪನೀರ್‌ಗೆ ಬೇಕಾದ ಗ್ರೇವಿ ರೆಡಿ. ಈಗ ಒಂದು ಬೌಲ್‌ನಲ್ಲಿ ಅರ್ಧ ಕಪ್ ಮೊಸರು, ಕಾಲು ಚಮಚ ಅರಿಶಿನ, ಒಂದು ಚಮಚ ಖಾರದ ಪುಡಿ, ಒಂದು ಚಮಚ ಜೀರಿಗೆ ಪುಡಿ ಮತ್ತು ಧನಿಯಾ ಪುಡಿ ಹಾಕಿ ಮಿಕ್ಸ್ ಮಾಡಿ. ಇದನ್ನ ಬದಿಗಿರಿಸಿ.

ಪ್ಯಾನ್ ಬಿಸಿ ಮಾಡಿ, ಅದಕ್ಕೆ 1 ಟೇಬಲ್ ಸ್ಪೂನ್ ಎಣ್ಣೆ, 1 ಕ್ಯೂಬ್ ಬೆಣ್ಣೆ ಹಾಕಿ. 1 ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ ಮತ್ತು ಮತ್ತು ಚಿಕ್ಕ ತುಂಡು ಹಸಿ ಶುಂಠಿ ಹಾಕಿ ಹುರಿಯಿರಿ. ಈಗ ಸಣ್ಣ ಉರಿ ಮಾಡಿ, ಅದಕ್ಕೆ 1 ಸ್ಪೂನ್ ಖಾರದ ಪುಡಿ ಮತ್ತು ಮೊದಲೇ ತಯಾರಿಸಿಟ್ಟುಕೊಂಡ ಮೊಸರಿನ ಮಿಶ್ರಣ ಹಾಕಿ. 1 ನಿಮಿಷ ಚೆನ್ನಾಗಿ ಕೈಯಾಡಿಸುತ್ತಾ ಹುರಿಯಿರಿ.

ನಾರ್ತ್ ಶೈಲಿಯ ಬೈಂಗನ್ ಭರ್ತಾ ರೆಸಿಪಿ..

ಈಗ ಇದಕ್ಕೆ ರೆಡಿ ಮಾಡಿಟ್ಟುಕೊಂಡ ಗ್ರೇವಿ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಒಂದು ಗ್ಲಾಸ್ ಬಿಸಿ ನೀರನ್ನು ಸೇರಿಸಿ. ಬೇಕಾದಲ್ಲಿ 2 ಗ್ಲಾಸ್ ಬಿಸಿ ನೀರು ಹಾಕಿ. ಇದಕ್ಕೆ 1 ಟೇಬಲ್ ಸ್ಪೂನ್ ಜೇನುತುಪ್ಪ ಹಾಕಿ, ಮಿಕ್ಸ್ ಮಾಡಿ. 5ರಿಂದ 6 ನಿಮಿಷ ಮಂದ ಉರಿಯಲ್ಲಿ ಇದನ್ನು ಬೇಯಿಸಬೇಕು. ಮತ್ತು ಆಗಾಗ ತಳ ತಾಗದಂತೆ ಕೈಯಾಡಿಸುತ್ತಿರಬೇಕು.

ಇದಾದ ಬಳಿಕ ಪನೀರ್, 1 ಸ್ಪೂನ್ ಗರಂ ಮಸಾಲೆ, ಕೊಂಚ ಕಸೂರಿ ಮೇಥಿ, ಕೊಂಚ ಕೊತ್ತೊಂಬರಿ ಸೊಪ್ಪು, 5 ಸ್ಪೂನ್ ಫ್ರೆಶ್ ಕ್ರೀಮ್, ಇವೆಲ್ಲವನ್ನೂ ಹಾಕಿ ಮಿಕ್ಸ್ ಮಾಡಿ 2 ನಿಮಿಷ ಬೇಯಿಸಿ. ಈಗ ಟೇಸ್ಟ್ ಕಂಡು ಅಗತ್ಯವಿದ್ದಲ್ಲಿ ಉಪ್ಪು ಸೇರಿಸಿದ್ರೆ, ಶಾಹೀ ಪನೀರ್ ರೆಡಿ.

- Advertisement -

Latest Posts

Don't Miss