Sunday, September 8, 2024

Latest Posts

Leaders: ದಲಿತ ಸಂಸದರಾದ ನನಗೆ ಅವಮಾನ ಮಾಡಿದ್ದಾರೆ :ಎಸ್ ಮುನಿಸ್ವಾಮಿ

- Advertisement -

ಕೋಲಾರ: ಸೋಮವಾರ ಕೋಲಾರದಲ್ಲಿ ನಡೆದ ಜನತಾ ದರ್ಶನದಲ್ಲಿ ಶಾಸಕ ಎಸ್,ಎನ್ ನಾರಾಯಣಸ್ವಾಮಿ ಮತ್ತು ಸಂಸದ ಎಸ್ ಮುನಿಸ್ವಾಮಿಗಳ ನಡುವೆ ವೇದಿಕೆ ಮೇಲೆಯೇ ಗದ್ದಲ ನಡೆದಿದ್ದರ ಬಗ್ಗೆ ಇಂದು ಮಾದ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಸಂಸದ ಎಸ್ ಮುನಿಸ್ವಾಮಿ ಸರ್ಕಾರಿ ಕಾರ್ಯಕ್ರಮದಲ್ಲಿ ಒಬ್ಬ ಸಂಸದರನ್ನು ನಡೆಸಿಕೊಂಡ ಬಗ್ಗೆ ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ದೂರು ನೀಡುತ್ತೇನೆ ಎಂದು ಹೇಳಿದರು.

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಪೋಲೀಸ್ ವರಿಷ್ಟಾಧಿಕಾರಿ ನಾರಾಯಣ್ ಅವರ ಮೇಲೆ ಹಕ್ಕು ಚ್ಯುತಿ ಮಂಡಿಸಲಾಗುವುದು‌. ಎಸ್.ಎನ್ ನಾರಾಯಣಸ್ವಾಮಿ ಅವರು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರು ಸ್ಟಾಂಪೆಂಡರ್ ಆಗಿ ಇದ್ದಾಗ, ಜನ ಕತ್ತೆಯ ಮೇಲೆ ಮೆರವಣಿಗೆ ಮಾಡಿದ್ರು, ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿದ್ದಾರೆ ಅಂತಹ ಹಿನ್ನೆಲೆ ನನಗಿಲ್ಲ ಎಂದು ಹೇಳಿದರು.

ಕಾಂಗ್ರೇಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಕೋಲಾರದಲ್ಲಿ ಹದಿನೈದು ಮರ್ಡರ್, ವೇಶ್ಯಾವಾಟಿಕೆ, ಜೂಜು, ಬೆಟ್ಟಿಂಗ್ ದಂಧೆ ಜೋರಾಗಿದೆ. ಅವ್ಯಾಚ್ಯ ಶಬ್ದಗಳಿಂದ ಬೈದವರನ್ನ ಬಿಟ್ಟು, ಕಾಂಗ್ರೇಸ್ ನವರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳಲು ನನ್ನನ್ನು ಹೊರಕಳಿಸಿದ್ದಾರೆ. ಕಾಂಗ್ರೇಸ್ ಪಕ್ಷದ ಏಜೆಂಟರಂತಿರುವ ಎಸ್ಪಿ ನಾರಾಯಣ್ ನಮ್ಮ ಜಿಲ್ಲೆಗೆ ಬೇಕಾಗಿಲ್ಲ.

ಚುನಾವಣೆಗೆ ಬರಬಾರದೆಂದು ಅಂಬೇಡ್ಕರ್ ಅವರನ್ನ ಆಗ ಕಾಂಗ್ರೇಸ್ ಪಕ್ಷ ಪಿತೂರಿ ಮಾಡಿ ತುಳಿದರು, ಹಾಗೆಯೇ ಕೋಲಾರದಲ್ಲಿ ನನ್ನ ವಿರುದ್ದ ಪಿತೂರಿ ಮಾಡಲು ಮುಂದಾಗಿದ್ದಾರೆ. ದಲಿತ ಸಂಸದರಾದ ನನಗೆ ಅವಮಾನ ಮಾಡಿದ್ದಾರೆ ಎಂದು ಸಂಸದ ಎಸ್ ಮುನಿಸ್ವಾಮಿ ನೆನ್ನೆ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹಿಂದೂ-ಮುಸ್ಲೀಂ ಏಕತೆಯೇ ಭಾರತಕ್ಕೆ ಶ್ರೀರಕ್ಷೆ: ಸಂತೋಷ್ ಲಾಡ್

Cauvery Water : ಬೆಂಗಳೂರು ಬಂದ್ : ಟೌನ್ ಹಾಲ್ ಬಳಿ ಎಂದಿನಂತೆ ಜನ ಸಂಚಾರ

KSRTC: ಮರಕ್ಕೆ ಡಿಕ್ಕಿ ಹೊಡೆದು ಕೆಎಸ್ಆರ್ ಟಿಸಿ ಬಸ್ ಪಲ್ಟಿ:

- Advertisement -

Latest Posts

Don't Miss