Recipe: ಸಾಮಾನ್ಯವಾಗಿ ಪಾಯಸವೆಂದರೆ ಹಾಲಿನಿಂದ ಮಾಡಲಾಗುತ್ತದೆ. ಅಥವಾ ಬೇಳೆ ನೀರು ಬೆಲ್ಲ ತುಪ್ಪ ಸೇರಿಸಿ ಮಾಡಲಾಗುತ್ತದೆ. ಆದರೆ ಇಂದು ನಾವು ಕಾಯಿಹಾಲು, ಬೆಲ್ಲ ಬಳಸಿ ಸಾಬಕ್ಕಿ ಪಾಯಸ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
2ರಿಂದ 3 ತೆಂಗಿನ ಕಾಯಿ ತುರಿಯಿಂದ ಮಾಡಿದ ಕಾಯಿ ಹಾಲು, ಇದರಲ್ಲಿ ಅರ್ಧ ಕಾಯಿ ಹಾಲು ಗಟ್ಟಿಯಾಗಿರಬೇಕು. ಇನ್ನರ್ಧ ಕಾಯಿಹಾಲಿಗೆ 2 ಗ್ಲಾಸ್ ನೀರು ಬೆರೆಸಿ ಥಿನ್ ಮಾಡಬೇಕು. ಈಗ ಗ್ಯಾಸ್ ಆನ್ ಮಾಡಿ, ದಪ್ಪ ತಳದ ಪಾತ್ರೆ ಇಟ್ಟು, ಥಿನ್ ಹಾಲನ್ನ ಹಾಕಿ. ಇದು 3 ಗ್ಲಾಸ್ ಇರಬೇಕು. ಇದಕ್ಕೆ 200 ಗ್ರಾಮ್ ನೆನೆಸಿದ ಹೆಸರುಬೇಳೆ ಸೇರಿಸಿ. ಇದು ತಳ ಹಿಡಿಯದಂತೆ ಎಚ್ಚರ ವಹಿಸಿ. ಈಗ ಇದಕ್ಕೆ ಚಿಟಿಕೆ ಉಪ್ಪು ಹಾಕಬೇಕು.
ಇದು ಚೆನ್ನಾಗಿ ಕುದಿಬಂದ ಬಳಿಕ, ಇದಕ್ಕೆ ನೆನೆಸಿಟ್ಟ ಸಾಬಕ್ಕಿಯನ್ನು ಸೇರಿಸಿ, ಇದನ್ನೂ ಚೆನ್ನಾಗಿ ಕುದಿಸಿ. ಈಗ 100 ಗ್ರಾಮ್ ಬೆಲ್ಲ ಹಾಕಿ ಮಿಕ್ಸ್ ಮಾಡಿ. ಬಳಿಕ ಏಲಕ್ಕಿ ಪುಡಿ, ನೀವು ಈಗಾಗಲೇ ಮಾಡಿಟ್ಟುಕೊಂಡಿರುವ ದಪ್ಪ ಕಾಯಿ ಹಾಲು, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಸೇರಿಸಿ ಇನ್ನು 5 ನಿಮಿಷ ಕುದಿಸಿದರೆ, ಪಾಯಸ ರೆಡಿ. ಇದರೊಂದಿಗೆ ತುಪ್ಪ ಹಾಕಿ ಸವಿಯಿರಿ.
ಮಕ್ಕಳು ಹೆಚ್ಚು ಫೋನ್ ಬಳಕೆ ಮಾಡಿದ್ದಲ್ಲಿ ಈ ಅಪಾಯಕಾರಿ ಸಮಸ್ಯೆ ತಪ್ಪಿದ್ದಲ್ಲ..
ಗರ್ಭಿಣಿಯರು ಜೀರಿಗೆ ನೀರು ಕುಡಿಯುವುದರಿಂದ ಎಷ್ಟೆಲ್ಲ ಉತ್ತಮ ಪ್ರಯೋಜನವಿದೆ ಗೊತ್ತಾ..?




