Movie News: ಪ್ರಶಾಂತ್ ನೀಲ್ ನಿರ್ದೇಶನ ಮಾಡಿ, ರೆಬೆಲ್ ಸ್ಟಾರ್ ಪ್ರಭಾಸ್ ನಟಿಸಿರುವ ಸಿನಿಮಾ ಸಲಾರ್ ನಿನ್ನೆಯಷ್ಟೇ ರಿಲೀಸ್ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಉಗ್ರಂ, ಕೆಜಿಎಫ್ ಈಗಾಗಲೇ ಮೋಡಿ ಮಾಡಿದ್ದು, ಸಲಾರ್ ಸಿನಿಮಾ ಮೊದಲ ದಿನದ ಕಲೆಕ್ಷನ್ ಎಷ್ಟಿರತ್ತೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಮೊದಲ ದಿನದ ಗಳಿಕೆಯ ಲೆಕ್ಕ ಬಂದಿದ್ದು, ಸಲಾರ್ ಸಿನಿಮಾದ ಒಂದು ದಿನದ ಕಲೆಕ್ಷನ್ 178 ಕೋಟಿ ಎಂದು ಹೇಳಲಾಗಿದೆ.
ಶಾರೂಖಾನ್ ನಟನೆಯ ಡಂಕಿ ಸಿನಿಮಾ ಕೂಡ ನಿನ್ನೆಯೇ ರಿಲೀಸ್ ಆಗಿದ್ದು, ಡಂಕಿ ಸಿನಿಮಾಗಿಂತಲೂ ಸಲಾರ್ ಸಿನಿಮಾ ಗಳಿಗೆ ಹೆಚ್ಚಾಗಿದೆ. ಈ ಮೂಲಕ ಮತ್ತೆ ದಕ್ಷಿಣ ಭಾರತದ ಸಿನಿಮಾ ಬಾಲಿವುಡ್‌ಗೆ ಸೆಡ್ಡು ಹೊಡೆದಿದೆ. ಇನ್ನೊಂದು ವಿಶೇಷ ಸಂಗತಿ ಅಂದ್ರೆ, ತಮ್ಮ ಸಿನಿಮಾದ ಮೂಲಕ ಇಡೀ ವಿಶ್ವಕ್ಕೆ ಪ್ರಭಾಸ್ ಅಂದ್ರೆ ಯಾರು ಅಂತಾ ತೋರಿಸಿದ್ದ, ನಿರ್ದೇಶಕ ಮತ್ತು ಕನ್ನಡಿಗ ರಾಜಮೌಳಿ, ತನ್ನ ನೆಚ್ಚಿನ ನಟ ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಫಸ್ಟ್‌ಡೇ ಫಸ್ಟ್ ಶೋ ನೋಡಲೇಬೇಕೆಂದು, 10 ಸಾವಿರ ರೂಪಾಯಿ ಕೊಟ್ಟು ಟಿಕೇಟ್ ಖರೀದಿಸಿದ್ದಾರೆ. ಹೈದರಾಬಾದ್‌ನ ಸಂಧ್ಯಾ ಸಿನಿಮಾ ಹಾಲ್‌ನಲ್ಲಿ ಸಲಾರ್ ಸಿನಿಮಾ ವೀಕ್ಷಿಸಿದ್ದಾರೆ.
ಹೊಂಬಾಳೆ ಫಿಲ್ಸ್ಮ್ ಅಡಿ ನಿರ್ಮಾಣವಾಗಿದ್ದ ಸಲಾರ್ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದರು. ಇದರಲ್ಲಿ ಪ್ರಭಾಸ್, ಶೃತಿ ಹಾಸನ್, ಪ್ರಥ್ವಿರಾಜ್, ಜಗಪತಿ ಬಾಬು ಸೇರಿ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.