ಬೆಂಗಳೂರು : ನಿನ್ನೆ ಸಂಜೆ ಕೋಣನಕುಂಟೆಯ ವಾಜರಹಳ್ಳಿ(Vajrahalli of Koonanakunte)ಯಲ್ಲಿ ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿ ಹೊಡೆದು ಕಲರ್ಸ್ ಕನ್ನಡದ ವಾಹಿನಿಯಲ್ಲಿ ಬರುವ ನನ್ನಮ್ಮ ಸೂಪರ್ ಸ್ಟಾರ್ (nannamma super star)ಸ್ಪರ್ಧಿ ಸಮನ್ವಿ (Samanvi)ಮೃತಪಟ್ಟಿದ್ದಾಳೆ. ನಿನ್ನೆ ಸಂಜೆ ಶಾಪಿಂಗ್(Shopping)ಗಾಗಿ ತಾಯಿ ಅಮೃತಾ ಹಾಗೂ ಸಮನ್ವಿ ತೆರಳುತ್ತಿದ್ದರು ಈ ವೇಳೆ ಟಿಪ್ಪರ್ ಚಾಲಕ ಮಂಚೇಗೌಡ ಆಟೋ ಹಿಂದಿಕ್ಕಲು ಹೋಗಿ ಹಿಂದಿನಿಂದ ಸ್ಕೂಟರ್ ಗೆ ಡಿಕ್ಕಿ ಹೊಡೆದ ಕಾರಣ (6 )ವರ್ಷದ ಸಮನ್ವಿ ಮೃತ ಪಟ್ಟಿದ್ದಾರೆ. ಈ ವೇಳೆ ತಾಯಿ ಅಮೃತಾಗೆ(Amrita)ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಅಮೃತ ನಾಲ್ಕು ತಿಂಗಳ ಗರ್ಭಿಣಿ. ಖ್ಯಾತ ಹರಿಕಥೆ ದಾಸ ಗುರುರಾಜ ನಾಯ್ಡು(Harikatha Dasa Gururaja Naidu) ರವರ ಮಗಳು ಅಮೃತಾ, ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಿದ್ದ “ನನ್ನಮ್ಮ ಸೂಪರ್ ಸ್ಟಾರ್ ” ಕಾರ್ಯಕ್ರಮದಲ್ಲಿ ಅಮೃತ ಹಾಗೂ ಮಗಳು ಸಮನ್ವಿ ಭಾಗಿಯಾಗಿದ್ದರು, ಶೋಗೆ ಬರುವುದಕ್ಕೂ ಮೊದಲು ಮಾತನಾಡಿದ ಸಮನ್ವಿ ನನಗೆ ಅಮ್ಮ ಎಂದರೆ ತುಂಬಾ ಇಷ್ಟ, ನಾನು ಅವಳನ್ನು ಜಾಸ್ತಿ ಪ್ರೀತಿ ಮಾಡುತ್ತೇನೆ, ಪಾರ್ಟಿಗೆ ಹೋಗ್ತಾರೆ, ಅಪ್ಪನ ಜೊತೆ ಹಣ ಶೇರ್ ಮಾಡುತ್ತಾರೆ, ಈ ಕಾರಣಕ್ಕೆ ಅವಳು ನನಗೆ ಹೆಚ್ಚು ಇಷ್ಟ ಎಂದು ಹೇಳಿಕೊಂಡಿದ್ದಳು. ಇನ್ನೂ ಬಾಳಿ ಬದುಕಬೇಕಾಗಿರುವ ಸಮನ್ವಿ ಇಂತಹ ದುರ್ಘಟನೆಯಲ್ಲಿ ಸಾವನ್ನಪ್ಪಿರುವುದು, ಎಲ್ಲರ ಮನಕಲಕುವಂತೆ ಆಗಿದೆ, ಇದಕ್ಕೆ ಕಿರುತೆರೆಯ ಅನೇಕರು ಕಂಬನಿಯನ್ನು ಮಿಡಿದಿದ್ದು, ಸೃಜನ್ ಲೋಕೇಶ್(Srujan Lokesh) ರವರು ಈ ಘಟನೆಯ ನಂತರ ದೇವರು ನಿಜವಾಗಲೂ ಇದ್ದಾನೋ ಇಲ್ಲವೋ ಎನ್ನುವ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ, ಮಿಸ್ ಯೂ ಸಮನ್ವಿ ಕಂದ,ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಇದೇ ವೇಳೆ ಟಿಪ್ಪರ್ ಚಾಲಕ ಮಂಚೇಗೌಡ (Manchegowda)ನನ್ನು ಕೆ ಎಸ್ ಲೇಔಟ್ ನ ಸಂಚಾರಿ ಪೊಲೀಸರು(KS Layout Traffic Police) ಬಂಧಿಸಿದ್ದು, ಆಟೋ ಹಿಂದಿಕ್ಕಲು ಹೋಗಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿರುವುದುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.