ಹಲವರದ್ದು ಒಂದೇ ಕಾಮೆಂಟ್ ನಮ್ಮ ಮನೆಯಲ್ಲಿ ಸಾಂಬಾರ್ ರುಚಿನೇ ಇರಲ್ಲ. ಸ್ಮೆಲ್ ಏನೋ ಚೆನ್ನಾಗೇ ಬರ್ತಿರತ್ತೆ. ಆದ್ರೆ ಟೇಸ್ಟ್ ಮಾತ್ರ ಇರೋದೇ ಇಲ್ಲ ಅಂತಾ. ಹಾಗಾಗಿ ಇಂದು ನಾವು ಸಾಂಬಾರ್ ಪೌಡರ್ ರೆಸಿಪಿಯನ್ನ ನಿಮಗಾಗಿ ತಂದಿದ್ದೀವಿ. ಈ ಸಾಂಬಾರ್ ಪುಡಿ ರೆಡಿ ಮಾಡಿ, ನೀವು ಸಾಂಬಾರ್‌ಗೆ ಬಳಸಿ ನೋಡಿ.
ಬೇಕಾಗುವ ಸಾಮಗ್ರಿ: ಮುಕ್ಕಾಲು ಕಪ್ ಉದ್ದಿನ ಬೇಳೆ, ಅರ್ಧ ಕಪ್ ಕಡಲೆ ಬೇಳೆ, ಒಂದು ಸ್ಪೂನ್ ಮೆಂತ್ಯೆ, 10 ಒಣ ಮೆಣಸಿನಕಾಯಿ, ಒಂದು ಕಪ್ ಕೊತ್ತಂಬರಿ ಕಾಳು, ಕಾಲು ಕಪ್ ಜೀರಿಗೆ, 20 ಎಸಳು ಕರಿಬೇವು.
ಈ ಎಲ್ಲ ಸಾಮಗ್ರಿಯನ್ನು ಸಪರೇಟ್ ಸಪರೇಟ್ ಆಗಿ ಹುರಿಯಬೇಕು. ಹೀಗೆ ನೀವು ಇದನ್ನ ಹುರಿಯುವಾಗ ಅದರ ಪರಿಮಳ ಬರಬೇಕು. ಪರಿಮಳ ಬರಲು ಶುರುವಾದರೆ, ಹುರಿದಿದ್ದು ಕರೆಕ್ಟ್ ಆಗಿದೆ ಎಂದರ್ಥ. ಇನ್ನು ಇದನ್ನ ಹುರಿಯುವಾಗ ಎಣ್ಣೆ, ಬೆಣ್ಣೆ, ತುಪ್ಪ ಯಾವುದನ್ನೂ ಬಳಸಬಾರದು. ಹಾಗೆ ಹುರಿಯಬೇಕು. ಹೀಗೆ ಹುರಿದ ಸಾಮಗ್ರಿಗಳನ್ನ ಮಿಕ್ಸಿ ಜಾರ್‌ಗೆ ಹಾಕಿ, ತರಿ ತರಿಯಾಗಿ ಪುಡಿ ಮಾಡಿಕೊಂಡರೆ, ಸಾಂಬಾರ್ ಪುಡಿ ರೆಡಿ.
ನೀವು ಸಾಂಬಾರ್ ತಯಾರಿಸುವಾಗ, 6 ಜನರಿದ್ದರೆ, ಮೂರು ಸ್ಪೂನ್ ಸಾಂಬಾರ್ ಪೌಡರ್ ಹಾಕಿ. ಇಬ್ಬರಿದ್ದರೆ ಒಂದು ಸ್ಪೂನ್ ಈ ಪೌಡರ್ ಹಾಕಿದ್ರೆ ಸಾಕು. ಇನ್ನು ಒಂದು ತಿಂಗಳಿಗೆ ಆಗುವಷ್ಟು ಅಷ್ಟೇ ಸಾಂಬಾರ್ ಪುಡಿ ತಯಾರಿಸಿಡಿ. ಯಾಕಂದ್ರೆ ಇದು ಹೆಚ್ಚು ಕಾಲ ಇರಿಸಿದ್ದಲ್ಲಿ, ಕಹಿ ಬರಲಾರಂಭಿಸುತ್ತದೆ. ಇನ್ನು ನಿಮಗೆ ಇನ್ನೂ ಹೆಚ್ಚು ಖಾರ ಬೇಕೆಂದಲ್ಲಿ ಕೊಂಚ ಕರಿಮೆಣಸು ಮತ್ತು ಕೊಂಚ ಒಣ ಮೆಣಸು ಹುರಿದು ಸೇರಿಸಿಕೊಳ್ಳಿ.