ನಟಿ ಮಯೂರಿ ಇಂದು ತಮ್ಮ ಬಹುಕಾಲದ ಗೆಳೆಯನಾದ ಅರುಣ್‌ರೊಂದಿಗೆ ಸಪ್ತಪದಿ ತುಳಿದು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದ್ದಾರೆ.
ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಯೂರಿ ಹಸೆಮಣೆ ಏರಿದ್ದಾರೆ.

ಕಳೆದ 10 ವರ್ಷಗಳಿಂದ ಅರುಣ್ ಮತ್ತು ಮಯೂರಿ ಪ್ರೀತಿಸುತ್ತಿದ್ದು, ಮನೆಯವರ ಒಪ್ಪಿಗೆಯ ಮೇರೆಗೆ ಇಂದು ವಿವಾಹವಾಗಿದ್ದಾರೆ. ಇವ್ರದ್ದು, ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು, ಯುಎಸ್‌ಎನಲ್ಲಿ ಸೆಟಲಾಗಿದ್ದ ಅರುಣ್, ಇದೀಗ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ತೆರೆಗೆ ಬಂದ ಮಯೂರಿ ಮೂಲತಃ ಹುಬ್ಬಳ್ಳಿಯವರು. ಜರ್ನಲಿಸಂ ಮಾಡಿದ್ದ ಮಯೂರಿ ಬಳಿಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಧಾರಾವಾಹಿ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆ ಆಫರ್ ಗಿಟ್ಟಿಸಿಕೊಂಡ ಮಯೂರಿ, ಕೃಷ್ಣಲೀಲಾ, ಇಷ್ಟಕಾಮ್ಯ, ನಟರಾಜಸರ್ವೀಸ್, ಕರಿಯ 2, ರ್ಯಾಂಬೋ 2 ಹೀಗೆ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.