Sandalwood News: ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟಿ ರಾಗಿಣಿ ವಿರುದ್ಧ ಯಾವುದೇ ಪುರಾವೆ ಸಿಗದಿರುವ ಕಾರಣ, ಅವರು ನಿರಪರಾಧಿ ಎಂದು ಕೋರ್ಟ್ ಆದೇಶ ನೀಡಿದ್ದು, ನಟಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಕೇಸ್ ಖುಲಾಸೆ ಮಾಡಿ ಹೈಕೋರ್ಟ್ ಆದೇಶ ನೀಡಿದ್ದು, ಯಾಾವುದೇ ಸಾಕ್ಷ್ಯಾಧಾರ ನೀಡುವುದರಲ್ಲಿ ಪ್ರಾಸಿಕ್ಯೂಶನ್ ವಿಫಲವಾಗಿದೆ ಎಂದು ಕೋರ್ಟ್, ರಾಗಿಣಿ ನಿರಪರಾಧಿ ಎಂದು ತೀರ್ಪು ನೀಡಲಾಗಿದೆ. ಈ ಕೇಸ್‌ಗೆ ಸಂಬಂಧಿಸಿದಂತೆ ರಾಗಿಣಿಯನ್ನು 2020ರ ಸೆಪ್ಟೆಂಬರ್ ತಿಂಗಳಿನಲ್ಲಿ ರಾಗಿಣಿಯನ್ನು ಅರೆಸ್ಟ್ ಮಾಡಿ, ಜೈಲಿನಲ್ಲಿ ಇರಿಸಲಾಗಿತ್ತು. ಬಳಿಕ ರಾಗಿಣಿ ಕೆಲ ತಿಂಗಳು ಜೈಲು ವಾಸ ಅನುಭವಿಸಿದ್ದರು.
ಡ್ರಗ್ ಮಾಫಿಯಾದೊಂದಿಗೆ ರಾಗಿಣಿ ನಂಟು ಹೊಂದಿದ್ದರು. ಪಾರ್ಟಿ ಆಯೋಜಿಸಿ, ಡ್ರಗ್ ಉಪಯೋಗಿಸಲು ಅನುಮತಿ ನೀಡಿದ್ದರು ಎಂದು ರಾಗಿಣಿ ವಿರುದ್ಧ ಆರೋಪ ಕೇಳಿಬಂದಿತ್ತು. ಇನ್ನು ತಮ್ಮ ಪರ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ರಾಗಿಣಿ ಪೋಸ್ಟ್ ಹಾಕಿದ್ದು, ಹೊಸ ಅಧ್ಯಾಯ ಆರಂಭವಾಗಿದೆ. ಸತ್ಯಮೇವ ಜಯತೇ, ಮೌನ ಮುರಿಯುವ ಸಮಯ ಇದಾಗಿದೆ ಎಂದು ರಾಗಿಣಿ ಪೋಸ್ಟ್ ಮಾಡಿ, ಸಂತಸ ವ್ಯಕ್ತಪಡಿಸಿದ್ದಾರೆ.