Sandalwood News: ಗೆಳತಿ ಪವಿತ್ರಾಗೌಡ ಕುರಿತು ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ರೇಣುಕಾಸ್ವಾಮಿಯ ಹತ್ಯೆಯಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಇನ್ಸ್ಟಾಗ್ರಾಂನಲ್ಲಿ ತನ್ನ ಪ್ರಿಯತಮೆಗೆ ಮರ್ಮಾಂಗ ಫೋಟೋ ಕಳುಹಿಸಿ ಲೈಂಗಿಕ ಕ್ರಿಯೆಗೆ ಬರುವಂತೆ ರೇಣುಕಾಸ್ವಾಮಿ ಆಹ್ವಾನಿಸಿದ್ದೇ ನಟ ದರ್ಶನ್ ಅವರು ಸಿಟ್ಟಿಗೇಳಲು ಕಾರಣ ಎಂದು ತಿಳಿದುಬಂದಿದೆ.
ಕಳೆದ ವರ್ಷ ಇನ್ಸ್ಟಾಗ್ರಾಂನಲ್ಲಿ ದರ್ಶನ್ ಪತ್ನಿ ವಿಲಯಲಕ್ಷ್ಮೀ ಕುರಿತು ಪವಿತ್ರಾಗೌಡ ಪರೋಕ್ಷವಾಗಿ ಪೋಸ್ಟ್ ಹಾಕಿದ್ದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಆ ವಿವಾದದ ನಂತರ ಪವಿತ್ರಾಗೌಡ ಅವರಿಗೆ ರೇಣುಕಾಸ್ವಾಮಿ ಪದೇ ಪದೇ ಮೆಸೇಜ್ ಮಾಡಿ ಕಾಟ ಕೊಡಲು ಶುರುಮಾಡಿದ್ದರು. ತನ್ನನ್ನು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿದ್ದ ಸ್ವಾಮಿ, ಇನ್ಸ್ಟಾಗ್ರಾಂನಲ್ಲಿ ಪವಿತ್ರಾರವರ ಫೋಟೋಗಳಿಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡುತ್ತಿದ್ದ.
ಇಂಟ್ರೆಸ್ಟಿಂಗ್ ಸ್ಟೋರಿ ಅಂದರೆ, ಇನ್ಸ್ಟಾಗ್ರಾಂನಲ್ಲಿ ತನೀಶಾ ರೆಡ್ಡಿ 2205 ಎಂಬ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದಿದ್ದ ರೇಣುಕಾಸ್ವಾಮಿ, ಪ್ರೋಫೈಲ್ಗೆ ಯುವತಿಯೊಬ್ಬಳ ಚಿತ್ರವನ್ನು ಹಾಕಿದ್ದ. ಅಸಲಿಗೆ ಸ್ವಾಮಿ ಹಾಕಿದ್ದ ಮೆಸೇಜ್ನನ್ನು ನಾವು ನಿಮಗೆ ನೇರವಾಗಿ ತೋರಿಸ್ತೀವಿ. ಅದ್ರಲ್ಲಿ ನಾವೇನು ಎಡಿಟ್ ಮಾಡಿಲ್ಲ. ಅದನ್ನೊಮ್ಮೆ ನೀವೇ ಓದಿಕೊಳ್ಳಿ.
How come darshan sir not travelling with you. he is seen only with his wife vijaylakshmi. ashte bidi paapa nivu keep, keep he in the society. issue madi joker aghidhu public nallie, same nimma fiend pavitra xyz. so pls u take her, this time karnataka janna avli jyothe nimminu serisi adbitharu publicenalli.
ಹೀಗೆ ಹಲವು ಬಾರಿ ಸ್ವಾಮಿ ಅವರು ಪವಿತ್ರಾಗೌಡ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಹಾಕಿದ್ದ. ಇದಲ್ಲದೇ ಇನ್ಸ್ಟಾಗ್ರಾಂನಲ್ಲಿ ಪವಿತ್ರಾಗೌಡರಿಗೆ ಖಾಸಗಿಯಾಗಿ ನಿರಂತರವಾಗಿ ಅಶ್ಲೀಲ ಮೆಸೇಜ್ಗಳನ್ನು ಕಳುಹಿಸಿದ್ದ. ಇದು ಅತಿರೇಕಕ್ಕೆ ಹೋಗಿ ಮರ್ಮಾಂಗದ ಫೋಟೋವನ್ನು ಕಳುಹಿಸಿ ವಿಕೃತಿ ಮೆರೆದಿದ್ದ. ಈ ಮಸೇಜ್ನ್ನು ಪವಿತ್ರಾ ಅವರು ದರ್ಶನ್ಗೆ ತೋರಿಸಿದ್ದರು. ಇದರಿಂದ ಕೆರಳಿದ ದಾಸ ರೆಡ್ಡಿ ಹೆಸರಿನ ಖಾತೆ ಬಗ್ಗೆ ವಿಚಾರಿಸಿದಾಗ ಈತ ರೇಣುಕಾಸ್ವಾಮಿ ಎಂಬುದು ಗೊತ್ತಾಗಿದೆ. ಬಳಿಕ ಬೆದರಿಸಿ ಎಚ್ಚರಿಕೆ ಕೊಡಲು ಕರೆತಂದು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಕಳುಹಿಸುತ್ತಿದ್ದ ಕಾಮೆಂಟ್ಗಳಿಗೆ ಪವಿತ್ರಾಗೌಡ ಹಾಗೂ ಆಕೆಯ ಸ್ನೇಹಿತರು ಪ್ರತಿಕ್ರಿಯೆ ನೀಡಿದ್ದರು. ಟೈಮ್ ಬರುತ್ತೆ ಆಗ ಉತ್ತರಿಸುತ್ತೇನೆ ಎಂದು ಸ್ವಾಮಿಗೆ ಪವಿತ್ರಾ ಎಚ್ಚರಿಕೆಯನ್ನು ನೀಡಿದ್ದರು.
ಇನ್ಸ್ಟಾಗ್ರಾಂನಲ್ಲಿ ಪವಿತ್ರಾಗೆ ಕಾಟ ಕೊಡುತ್ತಿರುವುದು ರೇಣುಕಾಸ್ವಾಮಿ ಎಂಬುದು ದರ್ಶನ್ ಅ್ಯಂಡ್ ಟೀಮ್ಗೆ ಗೊತ್ತಾಗಿದೆ. ಆಗ ಸ್ವಾಮಿ ಕುರಿತು ದಾಸನ ಗ್ಯಾಂಗ್ ಸಂಪೂರ್ಣ ಮಾಹಿತಿ ಕಲೆಹಾಕಲು ಮುಂದಾಯಿತು.
ಚಿತ್ರದುರ್ಗದ ಔಷಧ ಅಂಗಡಿಯಲ್ಲಿ ರೇಣುಕಾಸ್ವಾಮಿ ಕೆಲಸ ಮಾಡುವ ವಿಚಾರ ಗೊತ್ತಾದಾಗ, ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ರಾಘವೇಂದ್ರ ರೇಣುಕಾಸ್ವಾಮಿಯನ್ನು ಖೆಡ್ಡಾಕ್ಕೆ ಕೆಡವಿದ್ದಾನೆ. ಕೆಲ ದಿನಗಳ ಕಾಲ ಯುವತಿ ಸೋಗಿನಲ್ಲಿ ಸ್ವಾಮಿ ಜೊತೆ ಚಾಟ್ ಮಾಡಿದ್ದ ರಾಘವೇಂದ್ರ, ಅಂತಿಮವಾಗಿ ಶನಿವಾರ ಭೇಟಿ ಮಾಡುವಂತೆ ತಿಳಿಸಿದ್ದ. ಚಳ್ಳಕೆರೆ ಗೇಟ್ ಬಳಿ ಬರುತ್ತಿದ್ದಂತೆ ಸ್ವಾಮಿಯನ್ನು ಬೆಂಗಳೂರಿಗೆ ಕರೆತಂದು, ಹತ್ಯೆಮಾಡಲಾಗಿದೆ.