Sunday, September 8, 2024

Latest Posts

ಕೊಂಕಣಿ ಶೈಲಿಯ ಖಾರಾ ದೋಸೆ (ಸಾನ್ನಾ ಪೋಳೊ)ರೆಸಿಪಿ..

- Advertisement -

ಪ್ರತಿದಿನ ಉದ್ದಿನ ದೋಸೆ, ಅಕ್ಕಿ ದೋಸೆ, ಇನಸ್ಟಂಟ್ ದೋಸೆ ತಿಂದು ತಿಂದು ನಿಮಗೆ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಕೊಂಕಣಿ ಶೈಲಿಯ ಖಾರಾ ದೋಸೆ (ಸಾನ್ನಾ ಪೋಳೆ) ಮಾಡೋದು ಹೇಗೆ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ..

ಸೋಂಪು ನೀರು ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ..ಸೌಂದರ್ಯ ಹೆಚ್ಚುತ್ತದೆ..!

ಬೇಕಾಗುವ ಸಾಮಗ್ರಿ : ಎರಡು ಕಪ್ ಅಕ್ಕಿ, ಕೊಂಚ ಹುಣಸೆಹಣ್ಣು, ಒಂದು ಕಪ್ ತೆಂಗಿನತುರಿ, ಮೂರು ಒಣಮೆಣಸು, ಅರ್ಧ ಕಪ್ ಸಣ್ಣಗೆ ಹೆಚ್ಚಿದ ಎಲೆಕೋಸು, ಸ್ವಲ್ಪ ಕೊತ್ತೊಂಬರಿ ಸೊಪ್ಪು, ಅವಶ್ಯಕತೆ ಇದ್ದಲ್ಲಿ ಸಣ್ಣಗೆ ಹೆಚ್ಚಿದ ಈರುಳ್ಳಿ ಬಳಸಬಹುದು. ಕೊಂಚ ಹಿಂಗು, ರುಚಿಗೆ ತಕ್ಕಷ್ಟು ಉಪ್ಪು, ದೋಸೆ ಮಾಡಲು ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ : ಮೊದಲು ಅಕ್ಕಿಯನ್ನ ಚೆನ್ನಾಗಿ ತೊಳೆದು, ಕಾಟನ್ ಬಟ್ಟೆಯ ಮೇಲೆ ನೆರಳಿನಲ್ಲೇ ಅಕ್ಕಿಯನ್ನ ಒಣಗಿಸಿ. ಎರಡರಿಂದ ಮೂರು ದಿನ ಅಕ್ಕಿಯನ್ನು ನೆರಳಿನಲ್ಲೇ ಒಣಗಿಸಿ, ಪುಡಿ ಮಾಡಿ ಅಕ್ಕಿ ರವಾ ತಯಾರಿಸಿ. ಈಗ ತಯಾರಿಸಿರುವ ಅಕ್ಕಿ ರವೆಯನ್ನು ಮಿಕ್ಸಿ ಜಾರ್‌ಗೆ ಹಾಕಿ, ಇದರೊಂದಿಗೆ ಹುಣಸೆಹಣ್ಣು, ಕೊಬ್ಬರಿ ತುರಿ, ಮೆಣಸಿನಕಾಯಿ, ಉಪ್ಪು ಹಾಕಿ ರುಬ್ಬಿಕೊಳ್ಳಿ. ಕೊಂಚ ದಪ್ಪವಾಗಿ ದೋಸೆ ಬ್ಯಾಟರ್ ತಯಾರಿಸಿ.

ನೆನೆಸಿದ ಕಡಲೆಬೀಜ ಪ್ರತಿದಿನ ತಿನ್ನುವುದರಿಂದ ಆಗುವ ಅದ್ಭುತ ಪ್ರಯೋಜನಗಳು..!

ಇದಕ್ಕೆ ಕೊತ್ತೊಂಬರಿ ಸೊಪ್ಪು, ಹಿಂಗು, ಈರುಳ್ಳಿ, ಕ್ಯಾಬೇಜ್ ಹಾಕಿ ಮಿಕ್ಸ್ ಮಾಡಿ. ಈಗ ಪ್ಯಾನ್ ಬಿಸಿ ಮಾಡಿ , ಎಣ್ಣೆ ಹಾಕಿ, ಉತ್ತಪ್ಪದಷ್ಟು ದಪ್ಪವಾಗಿ ದೋಸೆ ಮಾಡಿದ್‌ರೆ, ಸನ್ನಾ ಪೋಳೆ ರೆಡಿ. ತೆಂಗಿನ ಎಣ್ಣೆಯೊಂದಿಗೆ ಈ ದೋಸೆ ತಿಂದ್ರೆ ರುಚಿಯಾಗಿರತ್ತೆ. ಅನ್ನ ತೊವೆಯೊಂದಿಗೆ, ಈ ದೋಸೆಯನ್ನ ನೆಂಚಿಕೊಳ್ಳಬಹುದು.

- Advertisement -

Latest Posts

Don't Miss