Sunday, June 1, 2025

Latest Posts

ಈ ಸಾತ್ವಿಕ ಜ್ಯೂಸ್ಗಳನ್ನು ನೀವೂ ಒಮ್ಮೆ ತಯಾರಿಸಿ ನೋಡಿ..

- Advertisement -

ಕೆಲವರು ಆರೋಗ್ಯಕ್ಕೆ ಒಳ್ಳೆಯದು ಅಂತಾ ಪ್ರತಿದಿನ ಜ್ಯೂಸ್ ಕುಡಿಯುತ್ತಾರೆ. ಆದ್ರೆ ಆ ಜ್ಯೂಸ್‌ಗೆ ಸಕ್ಕರೆ ಸೇರಿಸುತ್ತಾರೆ. ಅಥವಾ ಅಂಗಡಿಯಲ್ಲಿ ಜ್ಯೂಸ್ ಕುಡಿಯುತ್ತಾರೆ. ಇದು ತಪ್ಪು. ಇದರಿಂದ ನಿಮ್ಮ ಆರೋಗ್ಯಕ್ಕೆ ಯಾವ ಲಾಭವೂ ಸಿಗುವುದಿಲ್ಲ. ಹಾಗಾಗಿ ನಾವಿಂದು 2 ರೀತಿಯ  ಸಕ್ಕರೆ ಬಳಸದೇ, ರುಚಿಕರವಾಗಿ ಮತ್ತು ಆರೋಗ್ಯಕರವಾಗಿರುವ ಸಾತ್ವಿಕ ಜ್ಯೂಸ್ ತಯಾರಿಸೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಜ್ವರ ಬಂದಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಮೊದಲನೇಯದ್ದು, ಜೆಸ್ಟಿ ಶರ್ಬತ್. ಇದಕ್ಕೆ ಬೇಕಾಗಿರುವ ಸಾಮಗ್ರಿ: ಎರಡು ಸ್ಪೂನ್ ತುರಿದ ಬೀಟ್‌ರೂಟ್, 3 ಸ್ಪೂನ್ ಬೆಲ್ಲದ ಪುಡಿ, 2 ಲೋಟ ನೀರು, ಚಿಟಿಕೆ ಏಲಕ್ಕಿ ಪುಡಿ, ಧನಿಯಾ ಪುಡಿ, ದಾಲ್ಚೀನಿ ಪುಡಿ, ಜೀರಿಗೆ ಪುಡಿ, ಕೊಂಚ ತುರಿದ ನಿಂಬೆ ಹಣ್ಣಿನ ಸಿಪ್ಪೆ, ಎರಡು ಸ್ಪೂನ್ ನಿಂಬೆ ರಸ, ರುಚಿಗೆ ತಕ್ಕಷ್ಟು ಕಪ್ಪು ಉಪ್ಪು.

ಸೊಳ್ಳೆಗಳಿಂದ ಮುಕ್ತಿ ಹೊಂದಬೇಕಾದಲ್ಲಿ ಈ ಮೂರು ಟ್ರಿಕ್ಸ್ ಬಳಸಿ..

ಈ ಜ್ಯೂಸ್ ತಯಾರಿಸುವಾಗ ನೀವು ಮಣ್ಣಿನ ಪಾತ್ರೆ ಬಳಸಬೇಕು. ಗ್ಯಾಸ್ ಆನ್ ಮಾಡಿ, ಅದಕ್ಕೆ ನೀರು, ಬೀಟ್‌ರೂಟ್ ಮತ್ತು ಬೆಲ್ಲ ಹಾಕಿ 5 ನಿಮಿಷ ಬಿಸಿ ಮಾಡಿ, ಕುದಿ ಬರಿಸಿ. ಈಗ ಕೊಂಚ ಕೊಂಚ ಏಲಕ್ಕಿ ಪುಡಿ, ಧನಿಯಾ ಪುಡಿ, ದಾಲ್ಚೀನಿ ಪುಡಿ, ಜೀರಿಗೆ ಪುಡಿ, ಕೊಂಚ ತುರಿದ ನಿಂಬೆ ಹಣ್ಣಿನ ಸಿಪ್ಪೆ, ಎರಡು ಸ್ಪೂನ್ ನಿಂಬೆ ರಸ, ರುಚಿಗೆ ತಕ್ಕಷ್ಟು ಕಪ್ಪು ಉಪ್ಪು ಹಾಕಿ ಮಿಕ್ಸ್ ಮಾಡಿ, ಗ್ಯಾಸ್ ಆಫ್ ಮಾಡಿ. ಈಗ ಜೆಸ್ಟಿ ಶರ್ಬತ್ ರೆಡಿ. ಇದನ್ನು ತಣಿಸಿ ಕುಡಿಯಿರಿ.

ನಿದ್ದೆ ಮಾಡೋಕ್ಕೂ ಮುನ್ನ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ..

ಎರಡನೇಯದ್ದು ಕೊಕೊನಟ್ ವಾಟರ್ ಪಂಚ್. ಬೇಕಾದ ಸಾಮಗ್ರಿ: ಚಿಕ್ಕ ತುಂಡು ಶುಂಠಿ, ಚಿಕ್ಕ ತುಂಡು ಲೆಮನ್ ಗ್ರಾಸ್, 20 ಪುದೀನಾ ಎಲೆ, 2 ಕಪ್ ಎಳನೀರು, 4 ನಿಂಬೆ ಹಣ್ಣಿನ ಸ್ಲೈಸ್.

ಲೆಮನ್ ಗ್ರಾಸ್, ಶುಂಠಿ, ಪುದೀನಾ ಎಲೆ ಹಾಕಿ ಕುಟ್ಟಿ ತರಿತರಿಯಾಗಿ ಪುಡಿ ಮಾಡಿ. ಈಗ ಒಂದು ದೊಡ್ಡ ಜ್ಯೂಸ್ ಜಗ್‌ನಲ್ಲಿ ಈ ಮಿಶ್ರಣ, ಎಳನೀರು ಮತ್ತು ನಿಂಬೆಹಣ್ಣಿನ ಸ್ಲೈಸ್ ಹಾಕಿ ಮಿಕ್ಸ್ ಮಾಡಿ. 15 ನಿಮಿಷ ಬಿಡಿ. ಯಾಕಂದ್ರೆ ಎಳನೀರು ಈ ಎಲ್ಲ ಫ್ಲೇವರನ್ನು ಎಳೆದುಕೊಳ್ಳಬೇಕು. ಆಗಲೇ ಟೇಸ್ಟ್ ಬರೋದು. ಇದಾದ ಬಳಿಕ ಗ್ಲಾಸ್‌ನಲ್ಲಿ ಲೆಮನ್ ಗ್ರಾಸ್‌ನಿಂದ ಗಾರ್ನಿಶ್ ಮಾಡಿ, ಜ್ಯೂಸ್ ಸರ್ವ್ ಮಾಡಿ.

- Advertisement -

Latest Posts

Don't Miss