ರಾಯಚೂರು:ನಿನ್ನೆಯಷ್ಟೇ ಭಾರತದ 100 ಕೋಟಿ ಡೋಸ್ ಲಸಿಕೆ ವಿತರಸಿ ವಿಶ್ವದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ದೇಶದಲ್ಲಿ ಯಶಸ್ವಿಯಾಗಿ ಲಸಿಕಾ ಅಭಿಯಾನ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರು ಮನೆಮನೆಗೂ ತೆರಳಿ ಲಸಿಕೆ ಹಾಕೋ ಕೆಲಸ ಮಾಡ್ತಿದ್ದಾರೆ.
ಈ ಮಧ್ಯೆ ರಾಯಚೂರಿನಲ್ಲಿ ಬಾಲಕನೊಬ್ಬ ತನ್ನ ತಂದೆ ತಾಯಿಗೆ ಲಸಿಕೆ ಹಾಕಿಸಿಕೊಳ್ಳಬಾರದು ಅಂತ ರಂಪಾಟ ಮಾಡಿದ್ದಾನೆ. ಅಲ್ಲದೆ ಲಸಿಕೆ ಹಾಕಲು ಬಂದವರನ್ನ ಪ್ಲಾಸ್ಟಿಕ್ ಪೈಪ್ ಹಿಡಿದು ಬೆದರಿಸಿದ್ದಾನೆ.
ಹೌದು ಈ ಪ್ರಸಂಗ ನಡೆದಿರೋದು ರಾಯಚೂರು ಜಿಲ್ಲೆಯ ಸಿರಿವಾರ ಪಟ್ಟಣದಲ್ಲಿ. ಮನೆಮನೆಗೂ ತೆರಳಿ ಆರೋಗ್ಯ ಸಿಬ್ಬಂದಿ ಲಸಿಕೆ ನೀಡುತ್ತಿದ್ರು. ಈ ವೇಳೆ ದಂಪತಿಗೆ ಲಸಿಕೆ ಹಾಕೋದಕ್ಕೆ ಮುಂದಾದಾಗ ಆ ದಂಪತಿಯ ಮಗ, ತಮ್ಮ ಪೋಷಕರಿಗೆ ಲಸಿಕೆ ಹಾಕಬೇಡಿ ಅಂತ ಹಠ ಹಿಡಿದಿದ್ದ. ಆದ್ರೆ ಲಸಿಕೆ ಮಹತ್ವ ತಿಳಿಯದ ಬಾಲಕನ ಮನವೊಲಿಸಲು ಪೋಷಕರೂ ಸೇರಿದಂತೆ ಆರೋಗ್ಯ ಕಾರ್ಯಕರ್ತರು ಮುಂದಾದ್ರು. ಇದರಿಂದ ಕೋಪಗೊಂಡ ಬಾಲಕ ಅತ್ತು ಕರೆದು ಕಡೆಗೆ ಅಲ್ಲೇ ಇದ್ದ ಪೈಪ್ ಹಿಡಿದು ಆವಾಜ್ ಹಾಕಿದ್ದಾನೆ. ಇನ್ನು ಬಾಲಕನ ಈ ಹಠಕ್ಕೆ ಜಗ್ಗದ ಆರೋಗ್ಯ ಸಿಬ್ಬಂದಿ ಕಡೆಗೂ ಆತನ ಮನವೊಲಿಸಿ ಲಸಿಕೆ ನೀಡಬೇಕಾಯ್ತು.
ಈ ದೃಶ್ಯ ಕಂಡು ಬಂದಿದು ರಾಯಚೂರು ಜಿಲ್ಲೆಯಲ್ಲಿ .ಹೌದು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಆರೋಗ್ಯ ಇಲಾಖೆ ಮನೆ ಮನೆ ಗೆ ತೆರಳಿ ಲಸಿಕೆ ನೀಡುತ್ತಿದ್ದಾರೆ . ಆದರೆ ಈ ಬಾಲಕ
ತಂದೆ ತಾಯಿಗೆ ಲಸಿಕೆ ನೀಡಲು ಬಂದ ಆರೋಗ್ಯ ಅಧಿಕಾರಗಳಿಗೆ ಹಾಗೂ ಆಶಾ ಕಾರ್ಯಕರ್ತೆಯಾರಿಗೆ ಪೈಪ್ ಹಿಡಿದು ದಮ್ಕಿ ಹಾಕುತ್ತಿದ್ದಾನೆ .ಬಾಲಕನ ತಂದೆ ತಾಯಿಗೆ ಲಸಿಕೆ ನೀಡದಂತೆ ಕಣ್ಣಲ್ಲಿ ನೀರು ಹಾಕುತ್ತಾ ಅಡ್ಡವಾಗಿ ನಿಂತಿರುವುದು . ನಂತರ ಕೋವಿಡ್ ಬಗೆಗೆ ಜಾಗೃತಿ ಮೂಡಿಸಿ ಲಸಿಕೆ ನೀಡಿದ ಆರೋಗ್ಯ ಸಿಬ್ಬಂದಿಗಳು.
ಅನಿಲ್ ಕುಮಾರ್, ಕರ್ನಾಟಕ ಟಿವಿ-ರಾಯಚೂರು

