Beauty Tips: ತಲೆಗೂದಲು ಚೆಂದವಾಗಿರಿಸಲು, ಹಲವರು ಹಲವು ವಿಧದ ಎಣ್ಣೆ, ಶ್ಯಾಂಪೂ ಸೇರಿ, ಹಲವು ಕೇಶ ಸೌಂದರ್ಯದ ವಸ್ತುಗಳನ್ನು ಬಳಸುತ್ತಾರೆ. ಆದ್ರೆ ನೀವು ನಿಮ್ಮ ಮನೆಯಲ್ಲೇ ಇರುವಂಥ ಕೆಲವು ವಸ್ತುಗಳನ್ನು ಬಳಸಿ, ಎಣ್ಣೆ ತಯಾರಿಸಿ, ಅದರಿಂದ ನಿಮ್ಮ ಕೂದಲಿನ ಆರೋಗ್ಯ ಮತ್ತು ಸೌಂದರ್ಯ ಹೆಚ್ಚಿಸಬಹುದು. ಅದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೆಳ್ಳುಳ್ಳಿ ಎಣ್ಣೆ ಬಳಸುವುದರಿಂದ ಕೇಶರಾಶಿಯ ಸೌಂದರ್ಯ, ಆರೋಗ್ಯ ಚೆನ್ನಾಗಿರುತ್ತದೆ. ಆದರೆ ನೀವು ಬೆಳ್ಳುಳ್ಳಿ ಎಣ್ಣೆಯನ್ನು ಒಮ್ಮೆ ಬಳಸಿ, ಅದರಿಂದ ನಿಮಗೇನೂ ಅಲರ್ಜಿಯಾಗಲಿಲ್ಲವೆಂದಲ್ಲಿ, ಮಾತ್ರ, ಇನ್ನೊಮ್ಮೆ ಅದನ್ನು ಬಳಸಬಹುದು. ನಾಲ್ಕೈದು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಪೇಸ್ಟ್ ತಯಾರಿಸಿ, ತೆಂಗಿನ ಎಣ್ಣೆಯಲ್ಲಿ, ಮಂದ ಉರಿಯಲ್ಲಿ 5 ನಿಮಿಷ ಕುದಿಸಿ. ಬಳಿಕ ತಣಿಸಿ, ಕೂದಲಿಗೆ ಮಸಾಜ್ ಮಾಡಿಕೊಳ್ಳಿ. ಇದನ್ನು ನೀವು ಶೇಖರಿಸಿ ಇಟ್ಟುಕೊಳ್ಳಬಹುದು.
ವಾರಕ್ಕೆ ಎರಡು ಬಾರಿ ನೀವು ಈ ಎಣ್ಣೆ ಹಾಕಿ, ಮಸಾಜ್ ಮಾಡಿ, ಬಳಿಕ ಉಗುರು ಬೆಚ್ಚಗಿನ ನೀರಿನಿಂದ ಹೇರ್ ವಾಶ್ ಮಾಡಿ. ಆದಷ್ಟು ಕೆಮಿಕಲ್ ಇಲ್ಲದ ಶ್ಯಾಂಪು ಬಳಸುವುದು ಉತ್ತಮ. ಬೆಳ್ಳುಳ್ಳಿ ಎಣ್ಣೆ ಬಳಕೆ ಮಾಡುವುದರಿಂದ, ಫಂಗಲ್ ಇನ್‌ಫೆಕ್ಷನ್ ಆಗುವುದಿಲ್ಲ. ಡ್ಯಾಂಡ್ರಫ್ ಹೋಗಲಾಡಿಸುತ್ತದೆ. ಆಗ ನಿಮ್ಮ ಕೂದಲು ಆರೋಗ್ಯಕರವಾಗಿ ಬೆಳೆಯುತ್ತದೆ.
ಇಂಥ ಬಟ್ಟೆಗಳನ್ನು ಎಂದಿಗೂ ಧರಿಸಬೇಡಿ: ಧರಿಸಿದರೆ ನೆಮ್ಮದಿ ಹಾಳಾಗುವುದು ನಿಶ್ಚಿತ
ನಿಮ್ಮ ಅಂಗೈ ನೋಡಿ, ದಿನ ಶುರು ಮಾಡಬೇಕು ಅಂತಾ ಹೇಳುವುದು ಯಾಕೆ ಗೊತ್ತಾ..?

