Krishi News: ಬೆಂಗಳೂರಿನಲ್ಲಿ ಅಗ್ರಿಕಲ್ಚರ್ ಓದುತ್ತಿರುವ ವಿದ್ಯಾರ್ಥಿಗಳು ಸಹ, ಹಲವಾರು ಗಿಡಗಳನ್ನು ಹಿಡಿದು ಕೃಷಿ ಮೇಳಕ್ಕೆ ಬಂದಿದ್ದರು. ಅಲ್ಲದೇ, ಅವುಗಳ ಬಗ್ಗೆ ವಿವರಣೆಯನ್ನೂ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ ವಿದ್ಯಾರ್ಥಿಗಳ ಕೃಷಿ ಪಾಠ ಹೇಗಿತ್ತು ಅಂತಾ ತಿಳಿಯೋಣ ಬನ್ನಿ..
ಮಲಬೇರಿ, ಪೀಚ್, ಪೀನಟ್ ಬಟರ್, ಹೀಗೆ ವಿವಿಧ ರೀತಿಯ ಗಿಡಗಳನ್ನು ಬೆಳೆಸಿದ್ದ ವಿದ್ಯಾರ್ಥಿಗಳು, ಅದನ್ನು ಕೃಷಿ ಮೇಳದ ಪ್ರದರ್ಶನಕ್ಕೆ ತಂದಿದ್ದರು. ಇಷ್ಟೇ ಅಲ್ಲದೇ, ವಿವಿಧ ರೀತಿಯ ಬದನೇಕಾಯಿ, ಟೊಮೆಟೋ, ದಾಳಿಂಬೆ, ಪಪ್ಪಾಯಿ, ನುಗ್ಗೆಕಾಯಿ, ಸೇರಿ ಹಲವು ರೀತಿಯ ಗಿಡಗಳನ್ನು ಬೆಳೆಸಿ ತಂದಿದ್ದರು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಬೀಜ ಬಿತ್ತನೆ ಎಲ್ಲ ಈ ವಿದ್ಯಾರ್ಥಿಗಳೇ ಮಾಡಿ, ಗಿಡಗಳ ಕಟಿಂಗ್ ಎಲ್ಲ ಮಾಡಿದ್ದಾರೆ.
ಇಷ್ಟೇ ಅಲ್ಲದೇ, ಲೈಸೆನ್ಸ್ ಪಡೆದು ಕುಕೀಸ್, ಅರಿಶಿನದ ಪುಡಿ, ಕಪ್‌ಕೇಕ್, ಬೇರೆ ಬೇರೆ ಫ್ಲೇವರ್ ಗೇರುಬೀಜ, ಬಾದಾಮಿ, ನೆಲ್ಲಿಕಾಯಿ ಕ್ಯಾಂಡ್, ಕೋಕಂ ಪ್ಯೂರಿ, ಕೋಕಂ ಜ್ಯೂಸ್, ದ್ರಾಕ್ಷಿ ಜ್ಯೂಸ್ ಗಳನ್ನು ಈ ವಿದ್ಯಾರ್ಥಿಗಳೆಲ್ಲ ಸೇರಿ, ತಯಾರು ಮಾಡಿ, ಮಾರಾಟ ಮಾಡಲು ಪ್ರದರ್ಶನಕ್ಕೆ ತಂದಿದ್ದರು. ವಿದ್ಯಾರ್ಥಿಗಳ ಕೃಷಿ ಸಾಧನೆ ಬಗ್ಗೆ ಇನ್ನಷ್ಟು ತಿಳಿಯಲು ಈ ವೀಡಿಯೋ ನೋಡಿ..
ಒಣಹಣ್ಣುಗಳಿಗಿಂತ ಹಣ್ಣಿನ ಸೇವನೆ ಉತ್ತಮ: ವೈದ್ಯರ ವಿವರಣೆ ಇಲ್ಲಿದೆ ನೋಡಿ..