Thursday, December 12, 2024

Latest Posts

ನಿಮ್ಮ ಕೂದಲನ್ನು ಈ ರೀತಿ ಕಪ್ಪಾಗಿಸಬಹುದು ನೋಡಿ..

- Advertisement -

ಇಂದಿನ ಕಾಲದವರ ಆಹಾರ ಪದ್ಧತಿಯಿಂದ, ಮಾರುಕಟ್ಟೆಯಲ್ಲಿ ಸಿಗುವ, ಕೆಮಿಕಲ್ ಯುಕ್ತವಾದ ಪ್ರಾಡಕ್ಟ್‌ಗಳಿಂದ, ಕೂದಲಿನ ಆರೋಗ್ಯ ಹಾಳಾಗುತ್ತಿದೆ. ಅಲ್ಲದೇ, ಬೇಗ ಕೂದಲು ಬೆಳ್ಳಗಾಗುತ್ತಿದೆ. ಹೀಗಾಗಿ ಮೆಹಂದಿ, ಹೇರ್ ಡೈ ಬಳಸಿ, ಜನ ಕೂದಲನ್ನ ಕಪ್ಪಾಗಿಸುತ್ತಿದ್ದಾರೆ. ಆದರೆ ಮೆಹಂದಿ, ಹೇರ್ ಡೈ ಇಲ್ಲದೆಯೂ, ಕೂದಲನ್ನ ನ್ಯಾಚುರಲ್ ಆಗಿ ಕಪ್ಪಗಾಗಿಸಬಹುದು. ಅದು ಹೇಗೆ ಎಂದು ತಿಳಿಯೋಣ ಬನ್ನಿ..

ನೀವು ಕೂದಲಿಗೆ ಮೆಹಂದಿ, ಹೇರ್ ಕಲರ್ ಹಚ್ಚದೇ, ನಿಮ್ಮ ಕೂದಲನ್ನ ಕಪ್ಪು ಮಾಡಿಕೊಳ್ಳಬೇಕು ಎಂದಲ್ಲಿ, ನಿಮ್ಮ ಆಹಾರ ಪದ್ಧತಿ ಸರಿಯಾಗಿ ಇರಬೇಕು. ನೀವು ಚೆನ್ನಾಗಿ ನೀರು ಕುಡಿಯಿರಿ. ಪ್ರತಿದಿನ ನೆಲ್ಲಿಕಾಯಿಯ ಸೇವನೆ ಮಾಡಿ. ಮನೆಯಲ್ಲೇ ನೆಲ್ಲಿಕಾಯಿ ಎಣ್ಣೆ ತಯಾರಿಸಿ, ಬಳಸಿ. ಸಿಗೇಕಾಯಿ, ನೆಲ್ಲಿಕಾಯಿ ಪುಡಿ, ಅಂಟಲಕಾಯಿ ಬಳಸಿ, ಶ್ಯಾಂಪೂ ತಯಾರಿಸಿ, ಬಳಸಿ. ಇವೆಲ್ಲವೂ ಲೇಟ್ ಆಗಿ ರಿಸಲ್ಟ್ ಕೊಡುತ್ತದೆ. ಆದರ ಇದರ ಫಲಿತಾಂಶ ಮಾತ್ರ ಅಚ್ಚುಕಟ್ಟಾಗಿರುತ್ತದೆ.

ಅಲ್ಲದೇ ವಾರಕ್ಕೊಮ್ಮೆಯಾದರೂ, ನಿಮ್ಮ ಕೂದಲಿಗೆ ಮೊಸರು, ಆ್ಯಲೋವೆರಾ ಜೆಲ್, ಬಾದಾಮಿ ಎಣ್ಣೆಯ ಮಿಶ್ರಣ ಮಾಡಿ, ಅದರಿಂದ ಹೇರ್ ಪ್ಯಾಕ್ ಹಾಕಿ. ಇದರಿಂದಲೂ ನಿಮ್ಮ ಕೂದಲಿನ ಬೆಳವಣಿಗೆ ಉತ್ತಮವಾಗಿರುತ್ತದೆ. ನೀವು ಪ್ರತಿದಿನ ಸಲಾಡ್, ನೆನೆಸಿದ ಡ್ರೈಫ್ರೂಟ್ಸ್ ಸೇವನೆ ಮಾಡುವುದು ಅತ್ಯಗತ್ಯವಾಗಿದೆ. ತುರಿದ ಕ್ಯಾರೆಟ್, ನೆನೆಸಿ ಮೊಳಕೆ ಬರಿಸಿ, ಹೆಸರು ಕಾಳು, ದಾಳಿಂಬೆ, ಇವಿಷ್ಟನ್ನು ಸೇರಿಸಿ ಪ್ರತಿದಿನ ಸೇವನೆ ಮಾಡಿದರೂ, ನಿಮ್ಮ ಆರೋಗ್ಯ, ಸೌಂದರ್ಯ ಎರಡೂ ಅಭಿವೃದ್ಧಿಯಾಗುತ್ತದೆ.

ರಾತ್ರಿ ಊಟದಲ್ಲಿ ಈ ಆಹಾರವನ್ನ ಸೇವಿಸಲೇಬೇಡಿ..

ನಿಮ್ಮ ತೂಕ ಹೆಚ್ಚಲು ಇದೂ ಒಂದು ಕಾರಣವಿರಬಹುದು ನೋಡಿ..

ಮಗು ಹುಟ್ಟಿದ ಬಳಿಕ, ಬಾಣಂತಿಯರು ಎಂದಿಗೂ ಈ ತಪ್ಪು ಮಾಡಬೇಡಿ

- Advertisement -

Latest Posts

Don't Miss