Spiritual: 2024ರಲ್ಲಿ ಕೆಲ ರಾಶಿಯವರಿಗೆ ಉತ್ತಮ ಫಲವಿದೆ. ಇನ್ನು ಕೆಲ ರಾಶಿಯವರಿಗೆ ಉತ್ತಮವಲ್ಲದ ಜೀವನ ಮತ್ತೆ ಕೆಲ ರಾಶಿಯವರಿಗೆ ಮಿಶ್ರ ಫಲವಿದೆ. ಇಂದು ನಾವು 2024ರಲ್ಲಿ ಕರ್ಕ ರಾಶಿಯವರ ಜೀವನ ಹೇಗಿರುತ್ತದೆ ಅಂತಾ ಹೇಳಲಿದ್ದೇವೆ.
ಕರ್ಕ ರಾಶಿಯವರು ಸ್ವಭಾವತಃ ಮೃದು ಸ್ವಭಾವದವರು. ಯಾರಾದರೂ ಬೈಯ್ದರು, ಅವರಿಗೆ ತಿರುಗಿಸಿ ಬಯ್ಯಲು ಗೊತ್ತಿಲ್ಲ. ಅಂಥವರು. ತಾಳ್ಮೆ ಕೂಡ ಹೆಚ್ಚು. ಆದರೆ ಒಮ್ಮೆ ಯಾರನ್ನಾದರೂ ದ್ವೇಷಿಸಲು ಶುರು ಮಾಡಿದರೆ, ಅವರು ಸತ್ತಾಗಲೂ, ಅವರತ್ತ ಮುಖ ಮಾಡದಷ್ಟು ಕಠುವಾಗುತ್ತಾರೆ. ಅದು ಯಾರಾದರೂ ಸರಿ, ಸ್ನೇಹಿತರಾದರೂ ಸರಿ, ಸಂಬಂಧಿಯಾದರೂ ಸರಿ.
ಇಂಥ ಸ್ವಭಾವದ ಕರ್ಕ ರಾಶಿಯವರಿಗೆ 2024ನೇ ವರ್ಷ ಅತ್ಯುತ್ತಮವಾಗಿದೆ. ಈ ವರ್ಷ ಕರ್ಕ ರಾಶಿಯವರು ಹೆಚ್ಚು ಪ್ರವಾಸ ಮಾಡಲಿದ್ದಾರೆ. ಕಷ್ಟಪಟ್ಟು ದುಡಿದು, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲಿದ್ದಾರೆ. ವಿಶೇಷ ಸಂಗತಿ ಅಂದ್ರೆ, ಇಷ್ಟು ವರ್ಷದ ತನಕ ಹೆಚ್ಚು ಬುದ್ಧಿ ಉಪಿಯೋಗಿಸದೇ ಇರುವ ಇವರು, ಈ ವರ್ಷ ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತಾರೆ. ಅಂಥ ಪರಿಸ್ಥಿತಿಯೂ ಕರ್ಕ ರಾಶಿಯವರಿಗೆ ಬರಲಿದೆ.
ಇನ್ನು ಕರ್ಕ ರಾಶಿಯವರ ಮೇಲೆ ಶನಿಯ ಪ್ರಭಾವವಿದ್ದರೂ, ಗುರುಬಲದಿಂದ ಕರ್ಕ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗಲಿದೆ. ಆದರೆ ಆರೋಗ್ಯದ ವಿಷಯದಲ್ಲಿ ಮಾತ್ರ ನೀವು ಗಮನ ಹರಿಸಬೇಕು. ಬೆನ್ನು ನೋವು, ಕಾಲು ನೋವಿನ ಸಮಸ್ಯೆ ಹೆಚ್ಚಾಗುವ ಎಲ್ಲ ಸಾಧ್ಯತೆಗಳಿದೆ.
ಇನ್ನು ಹೂಡಿಕೆಯ ವಿಷಯದ ಬಗ್ಗೆ ಗಮನ ನೀಡಬೇಕು. ಏಕೆಂದರೆ, ಕರ್ಕ ರಾಶಿಯವರು ಈ ವರ್ಷ ಹೂಡಿಕೆ ಮಾಡುವಲ್ಲಿ ಮೋಸ ಹೋಗುವ ಸಾಧ್ಯತೆ ಇದೆ.