Health Tips: ಅತೀಯಾದ ಮದ್ಯಪಾನ ಸೇವನೆಯಿಂದ ನಮ್ಮ ಲಿವರ್ ಡ್ಯಾಮೇಜ್ ಆಗುತ್ತದೆ ಅಂತಾ ಎಲ್ಲರಿಗೂ ಗೊತ್ತು. ಆದರೆ ನಾವು ಸೇವಿಸುವ ಆಹಾರ ಆರೋಗ್ಯಕರವಾಗಿ ಇಲ್ಲದಿದ್ದಾಗಲೂ, ಲಿವರ್ ಡ್ಯಾಮೇಜ್ ಆಗುತ್ತದೆ. ಈ ಬಗ್ಗೆ ವೈದ್ಯರು ವಿವರಿಸಿದ್ದಾರೆ ನೋಡಿ..
ವೈದ್ಯರು ಹೇಳುವ ಪ್ರಕಾರ, ನಾವು ಸೇವಿಸುವ ಆಹಾರ, ಆರೋಗ್ಯಕ್ಕೆ ಪೂರಕವಾಗಿರಬೇಕು. ಆಗ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಇಲ್ಲವಾಗಿದ್ದಲ್ಲಿ, ಅಂಥ ಆಹಾರ ಸೇವನೆ ಮಾಡಿದಾಗ, ನಮ್ಮ ಆರೋಗ್ಯ ಹಾಳಾಗುತತದೆ. ಲಿವರ್ ಡ್ಯಾಮೇಜ್ ಆಗುತ್ತದೆ. ಇನ್ನು ಕೆಲ ಮಾತ್ರೆಗಳನ್ನು ತೆಗೆದುಕೊಳ್ಳುವಾಗಲೂ, ನೀವು ವೈದ್ಯರ ಸಲಹೆ ಬಳಿಕವೇ, ಮಾತ್ರೆ ಸೇವಿಸಬೇಕು. ಏಕೆಂದರೆ, ಕೆಲವು ಮಾತ್ರೆಗಳ ಸೇವನೆಯಿಂದ ಲಿವರ್ ಮೇಲೆ ಹೊಡೆತ ಬೀಳಬಹುದು.
ಇನ್ನು ಕೆಲ ಆಹಾರಗಳಲ್ಲಿ ಕಲರ್ ಮಿಕ್ಸ್ ಮಾಡಿರುತ್ತಾರೆ. ಬೇರೆ ಬೇರೆ ಪ್ರಿಸರ್ವೇಟಿವ್ಸ್ ಬಳಸಿರುತ್ತಾರೆ. ಇವುಗಳೆಲ್ಲವೂ ಕ್ಯಾನ್ಸರ್ಕಾರಕವಾಗಿರುತ್ತದೆ. ಇಂಥ ಆಹಾರಗಳನ್ನು ಅತೀಯಾಗಿ ಸೇವಿಸುವುದರಿಂದ ಲಿವರ್ ಡ್ಯಾಮೇಜ್ ಆಗುತ್ತದೆ. ಹಾಗಾಗಿ ಬೀದಿಬದಿ ತಿಂಡಿ ತಿನ್ನುವುದನ್ನು ನಿಲ್ಲಿಸಿ, ಮನೆಯಲ್ಲಿಯೇ ಆರೋಗ್ಯಕರ ತಿಂಡಿ ತಯಾರಿಸಿ ತಿನ್ನುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನಮ ಮಾಹಿತಿ ತಿಳಿಯಲು ವೀಡಿಯೋ ನೋಡಿ..




