ಹಿರಿಯ ನಟಿ ಎಂ ಎನ್ ಲಕ್ಷ್ಮೀದೇವಿಯವರು, ತಮ್ಮ ಸಿನಿ ಪಯಣದ ಬಗ್ಗೆ ಕರ್ನಾಟಕ ಟಿವಿಯೊಂದಿಗೆ ಮಾತನಾಡಿದ್ದಾರೆ. ಲಕ್ಷ್ಮೀದೇವಿಯವರು ಆ ಕಾಲದಲ್ಲಿ ನಟನೆ ಮಾಡೋಕ್ಕೆ ಎಷ್ಟು ಸಂಬಳ ತೆಗೆದುಕೊಳ್ಳುತ್ತಿದ್ದರು. ಅವರ ಮೊದಲ ಸಂಭಾವನೆ ಎಷ್ಟಿತ್ತು ಅನ್ನೋ ಬಗ್ಗೆ ಮಾತನಾಡಿದ್ದಾರೆ.
ಲಕ್ಷ್ಮಮ್ಮರಿಗೆ ನಟಿಸೋದಕ್ಕಿಂತ, ಹಾಡಬೇಕು ಅನ್ನೋ ಆಸೆ ಹೆಚ್ಚಿತ್ತಂತೆ. ಹಾಗಾಗಿ ಲಕ್ಷ್ಮಮ್ಮ ಹಾಡು ಹಾಡಿ ಸಂದರ್ಶನ ನೀಡಿದ್ದರು. ಆದ್ರೆ ಆ ಕಂಪನಿನೇ ಸ್ಟಾಪ್ ಆಗಿಹೋಯ್ತು. ಹಾಗಾಗಿ ಲಕ್ಷ್ಮಮ್ಮ ಸಿಂಗರ್ ಆಗುವ ಚಾನ್ಸ್ ಕಳೆದುಕೊಂಡ್ರು. ನಂತರ ಡಾನ್ಸ್ ಮಾಡಲು ಅವಕಾಶ ಗಿಟ್ಟಿಸಿಕೊಂಡು, ಧರ್ಮಸ್ಥಳದಲ್ಲಿ ಕಾರ್ಯಕ್ರಮ ನೀಡಿದರು. ಇಲ್ಲಿ ಹಲವು ಗಣ್ಯರು ಲಕ್ಷ್ಮೀದೇವಿಯವರಿಗೆ ಪರಿಚಯವಾದರು. ರಂಗಭೂಮಿಯ ನಂಟಿರುವ ಕಾರಣ, ಲಕ್ಷ್ಮಮ್ಮರನ್ನ ಹಲವರು ಕಂಡು ಹಿಡಿಯಲು ಶುರು ಮಾಡಿದರು.
ಗುಬ್ಬಿ ಕಂಪೆನಿಯವರು ನಮ್ಮ ಕಂಪೆನಿಯಲ್ಲಿ ಕೆಲಸ ಮಾಡಲು ಇಷ್ಟಪಡ್ತೀರಾ ಅಂತಾ ಕೇಳಿದಾಗ, ಲಕ್ಷ್ಮಮ್ಮ ಆಯಿತೆಂದು ಒಪ್ಪಿಕೊಂಡರು. ನಂತರ ಅವರಿಗೆ ಸಿನಿಮಾದಲ್ಲೂ ನಟಿಸಲು ಅವಕಾಶ ಸಿಕ್ಕಿತು. ಇವರಿಗೆ ನಟನೆ, ನೃತ್ಯದ ಜೊತೆ ಹಾಡಿನ ಟ್ಯಾಲೆಂಟ್ ಕೂಡ ಇದ್ದ ಕಾರಣ, ಕೆಲವು ಸಿನಿಮಾಗಳಲ್ಲಿ ಹಾಡಲು ಕೂಡ ಅವಕಾಶ ಮಾಡಿಕೊಡಲಾಯಿತು. ಇನ್ನು ಇವರ ಮೊದಲ ಸಂಬಳ ಎರಡುವರೆ ಸಾವಿರವಂತೆ.
ಆ ಕಾಲದಲ್ಲಿ ಈ ಸಂಬಳ ದೊಡ್ಡದು ಅಂತಾರೆ ಲಕ್ಷ್ಮಮ್ಮ. ಇನ್ನು ಇದಾದ ಬಳಿಕ ಕನ್ನಡದಲ್ಲಷ್ಟೇ ಅಲ್ಲದೇ, ಪಕ್ಕದ ರಾಜ್ಯದ ಭಾಷೆಗಳಲ್ಲೂ ನಟಿಸಲು ಲಕ್ಷ್ಮಮ್ಮಗೆ ಅವಕಾಶ ಸಿಕ್ಕಿತು. ಇನ್ನುಳಿದ ಲಕ್ಷ್ಮೀದೇವಿಯವರ ಸಿನಿಜರ್ನಿ ಮಾತು ಅವರಿಂದಲೇ ಕೇಳಿ.