Monday, December 23, 2024

Latest Posts

ಲೋಕದ ಒಳಿತಿಗಾಗಿ ಶ್ರೀವಿಷ್ಣು ಈ ಮೋಸ ಮಾಡಬೇಕಾಯಿತು.. ಭಾಗ 1

- Advertisement -

ರಾಕ್ಷಸರೆಲ್ಲ ದೇವತೆಗಳಿಗೆ ತೊಂದರೆ ಕೊಡಲು ಬಂದಾಗ, ಲೋಕದ ನಾಶವಾಗುವಾಗ, ಶ್ರೀ ವಿಷ್ಣು ಎಲ್ಲರ ಒಳಿತಿಗಾಗಿ ರಾಕ್ಷಸರ ವಿರುದ್ಧ ಸಂಚು ರೂಪಿಸುತ್ತಿದ್ದ. ಹಾಗಾದ್ರೆ ಪುರಾತನ, ಪುರಾಣ ಕಥೆಗಳ ಪ್ರಕಾರ, ವಿಷ್ಣು ಲೋಕ ಕಲ್ಯಾಣಕ್ಕಾಗಿ ರೂಪಿಸಿದ ಸಂಚು ಎಂಥದ್ದು ಅಂತಾ ತಿಳಿಯೋಣ ಬನ್ನಿ..

ಮತ್ತೆ ಅಬ್ಬರಿಸಲಿದೆ ‘ಕಾಂತಾರ’ ಚಿತ್ರದ ‘ವರಾಹ ರೂಪಂ’ ಹಾಡು ; ಇಂದಿನಿಂದ ಚಿತ್ರಮಂದಿರ, ಓಟಿಟಿ ಸೇರಿದಂತೆ ಎಲ್ಲೆಡೆ ಲಭ್ಯ

ಮೊದಲನೇಯ ಸಂಚು, ಮೋಹಿನಿ ವೇಷ ಧರಿಸಿದ್ದು. ಸಮುದ್ರ ಮಂಥನದ ವೇಳೆ ಬಂದ ಅಮೃತ ತಮಗೂ ನೀಡಬೇಕೆಂದು ರಾಕ್ಷಸರು ಕಾದು ಕುಳಿತಾಗ, ರಾಕ್ಷಸರಿಗೆ ಅಮೃತವನ್ನು ನೀಡದೇ, ದೇವತೆಗಳಿಗಷ್ಟೇ ಅಮೃತ ನೀಡಿದ್ದು ಮೋಹಿನಿ. ಈ ಮೋಹಿನಿ ರೂಪದಲ್ಲಿದ್ದದ್ದು ಶ್ರೀ ವಿಷ್ಣು. ರಾಕ್ಷಸರು ಅಮೃತ ಕುಡಿದು ಅಮರರಾದರೆ, ಲೋಕ ನಾಶವಾಗುತ್ತದೆ ಎನ್ನುವ ಕಾರಣಕ್ಕೆ ವಿಷ್ಣು ಹೀಗೆ ಮಾಡಿದ್ದ.

ಎರಡನೇಯ ಸಂಚು, ಭಸ್ಮಾಸುರನ ವಿರುದ್ಧ ಮಾಡಿದ ಸಂಚು. ಶಿವನನ್ನು ಕುರಿತು ತಪಸ್ಸು ಮಾಡಿದ ಭಸ್ಮಾಸುರ, ತಾನು ಯಾರ ತಲೆಯ ಮೇಲೆ ಕೈ ಇಡುತ್ತೇನೋ, ಅವರು ಭಸ್ಮವಾಗಲಿ ಎಂದು ವರ ಕೇಳಿದ. ಈ ಬಗ್ಗೆ ಯೋಚನೆ ಮಾಡದ ಶಿವ, ಭಕ್ತನಿಗೆ ತಥಾಸ್ತು ಎಂದು ಬಿಟ್ಟ. ವರ ಪಡೆದ ಭಕ್ತ, ಸ್ವತಃ ವರ ನೀಡಿದ ಶಿವನ ತಲೆಯ ಮೇಲೆ ಕೈಯಿಡಲು ಬಂದ. ಇದಕ್ಕಾಗಿ ಶ್ರೀವಿಷ್ಣುವಿನ ಸಹಾಯ ಕೇಳಿದ ಶಿವ.

ಚಳಿಗಾಲದಲ್ಲಿ ಹೆರಿಗೆಯಾದರೆ ಈ 6ಪದಾರ್ಥಗಳನ್ನು ತೆಗೆದುಕೊಳ್ಳಲೇಬೇಕು…!

ಆಗ ವಿಷ್ಣು ಸುಂದರ ನಾರಿಯ ವೇಷ ಧರಿಸಿ, ಭಸ್ಮಾಸುರನ ಬಳಿ ತೆರಳುತ್ತಾರೆ. ನನಗೆ ನೃತ್ಯವೆಂದರೆ ಬಲು ಇಷ್ಟ, ನೀನು ನನ್ನ ಹಾಗೆ ನೃತ್ಯ ಮಾಡಿ, ನನ್ನ ಮನಸ್ಸು ಗೆದ್ದರೆ, ನಾನು ನಿನ್ನನ್ನು ವಿವಾಹವಾಗುತ್ತೇನೆಂದು ಹೇಳುತ್ತಾರೆ. ಆಗ ಭಸ್ಮಾಸುರ ಹೋ ಖಂಡಿತ ನಾನೂ ನೃತ್ಯ ಮಾಡುತ್ತೇನೆ. ಆದರೆ ನೀನು ನನಗೆ ನೃತ್ಯ ಮಾಡುವುದನ್ನು ಹೇಳಿಕೊಡಬೇಕು ಎನ್ನುತ್ತಾನೆ. ಆಗ ನಾರಿ ರೂಪದಲ್ಲಿದ್ದ ವಿಷ್ಣು ನೃತ್ಯ ಮಾಡುತ್ತ ಮಾಡುತ್ತ ತನ್ನ ತಲೆಯ ಮೇಲೆ ತಾನು ಕೈಯನ್ನಿಡುತ್ತಾನೆ. ಕ್ಷಣದಲ್ಲಿ ಭಸ್ಮವಾಗುತ್ತಾನೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ.

- Advertisement -

Latest Posts

Don't Miss