ಮೊದಲ ಭಾಗದಲ್ಲಿ ನಾವು ಶ್ರೀವಿಷ್ಣು ಲೋಕ ಕಲ್ಯಾಣಕ್ಕಾಗಿ ಮಾಡಿದ ಕಪಟದಲ್ಲಿ ಎರಡು ಕಪಟಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಮತ್ತಷ್ಟು ಮಾಹಿತಿಯನ್ನ ನೀಡಲಿದ್ದೇವೆ.
ಮೂರನೇಯ ಕಪಟ, ತುಳಸಿಯ ವಿರುದ್ಧ ಕಪಟ. ತುಳಸಿಯ ಮೊದಲ ಹೆಸರು ವೃಂದಾ ಆಗಿತ್ತು. ಆಕೆ ಶ್ರೀವಿಷ್ಣುವಿನ ಪರಮ ಭಕ್ತೆಯಾಗಿದ್ದಳು. ಆಕೆ ಗಣೇಶನನ್ನು ಇಷ್ಟ ಪಟ್ಟಿದ್ದು, ಉದ್ಧಟತನ ತೋರಿದ್ದಳು. ಹಾಗಾಗಿ ಗಣೇಶ ನೀಡಿದ ಶಾಪದಿಂದಾಗಿ, ರಾಕ್ಷಸನನ್ನು ವಿವಾಹವಾಗಬೇಕಾಯಿತು. ಜಲಂಧರ ಎಂಬ ರಾಕ್ಷಸ, ಈಕೆಯ ಪತಿಯಾಗಿದ್ದ.
ಜಲಂಧರನಿಂದ ದೇವತೆಗಳಿಗೆ ತೊಂದರೆ ಎಂಬ ಕಾರಣಕ್ಕೆ, ಶಿವ ಜಲಂಧರನನ್ನು ಸಂಹರಿಸಬೇಕಾಗಿತ್ತು. ಆದ್ರೆ ತುಳಸಿ ಪತಿವೃತೆಯಾಗಿದ್ದ ಕಾರಣ, ಜಲಂಧರನನ್ನು ಸಂಹರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿ ಆಕೆಯ ಪಾತಿವೃತ್ಯ ಹಾಳು ಮಾಡಬೇಕಾಗಿತ್ತು. ಆ ಕಾರಣಕ್ಕೆ ವಿಷ್ಣು, ಜಸಂಧರನ ವೇಷ ಧರಿಸಿ, ತುಳಸಿಯೊಂದಿಗೆ ಸರಸವಾಡಿ, ಆಕೆಯ ಪಾತಿವೃತ್ಯ ಹಾಳು ಮಾಡಿದ. ಇದರಿಂದ ಆಕೆಯ ಶಾಪಕ್ಕೂ ಒಳಗಾದ.
ನಾಲ್ಕನೇಯ ಕಪಟ, ಬಲೀಂದ್ರನ ಜೊತೆ ಕಪಟ. ಶಂಕರಾಚಾರ್ಯರ ಸಮ್ಮುಖದಲ್ಲಿ ಬಲೀಂದ್ರ ಯಜ್ಞ ಮಾಡುತ್ತಿರುತ್ತಾನೆ. ಆ ಯಜ್ಞ ಮುಗಿದ ಮೇಲೆ ದಾನ ಮಾಡಬೇಕಾಗಿರುತ್ತದೆ. ಆಗ ವಾಮನವತಾರದಲ್ಲಿ ಬಂದ ಶ್ರೀವಿಷ್ಣು, ನನ್ನ ಪಾದದಿಂದ 3 ನಡಿಗೆಯಷ್ಟು ಉದ್ದದ ಭೂಮಿ ಬೇಕೆಂದು ಕೇಳುತ್ತಾನೆ. ಬಲೀಂದ್ರನ ಎತ್ತರ ನೋಡಿ, ನಕ್ಕ ಬಲೀಂದ್ರ ಸರಿ ಎನ್ನುತ್ತಾನೆ.
ಆಗ ವಾಮನ ರೂಪಿ ಶ್ರೀವಿಷ್ಣು ದೈತ್ಯನಾಗಿ ಬೆಳೆದು, ಮೂರು ಲೋಕದಲ್ಲಿ ತನ್ನ ಪಾದ ಪಸರಿಸಿ, ಬಲೀಂದ್ರನ ಅಷ್ಟು ಭೂಮಿಯನ್ನು ದಾನ ಪಡೆದು, ಯಜ್ಞ ನಿಲ್ಲಿಸುತ್ತಾನೆ. ಮತ್ತು ಈ ದಾನ ಮಾಡಿದ್ದಕ್ಕೆ, ಬಲೀಂದ್ರ ಪಾತಾಲ ಲೋಕದಲ್ಲಿ ಅಮರನಾಗಿರಲಿ ಎಂದು ವರ ನೀಡುತ್ತಾನೆ.
ಚಳಿಗಾಲದಲ್ಲಿ ಹೆರಿಗೆಯಾದರೆ ಈ 6ಪದಾರ್ಥಗಳನ್ನು ತೆಗೆದುಕೊಳ್ಳಲೇಬೇಕು…!
ಐದನೇಯ ಕಪಟ ನಾರದರೊಂದಿಗಿನ ಕಪಟ. ನಾರದರಿಗೆ ತಮ್ಮ ಬ್ರಹ್ಮಚರ್ಯವನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂಬ ಅಹಂಕಾರ ಉಂಟಾಯಿತು. ಹಾಗಾಗಿ ವಿಷ್ಣು ಮಾಯಾನಗರವನ್ನು ಸೃಷ್ಟಿಸಿ, ಅಲ್ಲಿ ಲಕ್ಷ್ಮೀ ದೇವಿಯ ರೂಪ ಬದಲಿಸಿ, ಆಕೆಯ ಸ್ವಯಂವರ ರಚಿಸಿದ. ಆಕೆಯನ್ನು ನೋಡಿ, ನಾರದರಿಗೂ ಆಕೆಯನ್ನು ವಿವಾಹವಾಗಲು ಮನಸ್ಸಾಯಿತು. ಅದಕ್ಕೆ ಅವರು ವಿಷ್ಣುವಿನ ಬಳಿ ಸಹಾಯ ಕೇಳಿದರು.
ಸಹಾಯ ಮಾಡಲು ಒಪ್ಪಿದ ಶ್ರೀವಿಷ್ಣು, ನಾರದರ ಮುಖವನ್ನು ವಾನರನಂತೆ ಮಾಡಿದ. ವಾನರನ ಮುಖವಿಟ್ಟುಕೊಂಡು ಹೋದ, ನಾರದರಿಗೆ ಅವಮಾನವಾಯಿತು. ಇದರಿಂದ ಶ್ರೀವಿಷ್ಣುವಿಗೆ ನಾರದರು ಶಾಪ ನೀಡಿದರು.