Saturday, May 10, 2025

Latest Posts

ಈ 3 ಜನರ ಬಗ್ಗೆ ಎಂದಿಗೂ ಕೆಟ್ಟದಾಗಿ ಮಾತನಾಡಬೇಡಿ ಎನ್ನುತ್ತಾನೆ ಶ್ರೀಕೃಷ್ಣ..

- Advertisement -

Spiritual: ಭಗವದ್ಗೀತೆಯ ಮೂಲಕ, ಜೀವನದ ಪರಿಯನ್ನು ವಿವರಿಸಿದ ಶ್ರೀಕೃಷ್ಣ, ಯಾವುದು ಧರ್ಮ..? ಯಾವುದು ಅಧರ್ಮವೆಂದು ಹೇಳಿದ್ದಾನೆ. ಅದೇ ರೀತಿ ಜೀವನಕ್ಕೆ ಸಂಬಂಧಪಟ್ಟ ಹಲವು ವಿಷಯಗಳನ್ನೂ ಹೇಳಿದ್ದಾನೆ. ನಾವು ಎಂದಿಗೂ 3 ಜನರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದಂತೆ. ಹಾಗಾದ್ರೆ ಆ 3 ಜನರು ಯಾರು..? ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ, ಏನಾಗುತ್ತದೆ ಅಂತಾ ತಿಳಿಯೋಣ ಬನ್ನಿ..

ಮೊದಲನೇಯವರು, ದೇವರು. ದೇವರು ಎಲ್ಲಿದ್ದಾನೆ..? ಎಂದು ಪ್ರಶ್ನಿಸುವವರಿಗೆ, ದೇವರ ಮೇಲೆ ನಂಬಿಕೆ ಇಲ್ಲವೆಂದೇ ಅರ್ಥ. ಆದರೆ ದೇವರು ಇಲ್ಲದೇ, ಅವನ ಅಪ್ಪಣೆ ಇಲ್ಲದೇ, ಒಂದು ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲವೆಂಬ ಮಾತಿದೆ. ದೇವರೆಂಬ ಶಕ್ತಿಯೇ ನಮ್ಮನ್ನು ಕಾಯುತ್ತಿರುವುದು. ಆ ನಂಬಿಕೆಯಿಂದಲೇ, ಕೆಲ ಮನುಷ್ಯರು ಕೆಟ್ಟ ಕೆಲಸಗಳನ್ನು ಮಾಡದೇ, ನಿಯತ್ತಾಗಿರುವುದು. ಮತ್ತೆ ಕೆಲವರು ಕೆಟ್ಟ ಕೆಲಸಕ್ಕೆ ಕೈ ಹಾಕಿ, ಬುದ್ಧಿ ಕಲಿತು ಉತ್ತಮರಾಗಿರುವುದು. ದೇವರೆಂಬ ಶಕ್ತಿ ಇಲ್ಲದೇ, ಮಾಡಿದ ಉತ್ತಮ ಕರ್ಮಗಳು ನಮ್ಮನ್ನು ಕಾಯುವುದಿಲ್ಲ. ಹಾಗಾಗಿ ದೇವರ ಬಗ್ಗೆ ಎಂದಿಗೂ ಕೆಟ್ಟದ್ದು ಮಾತನಾಡಬಾರದು ಅಂತಾ ಹೇಳಿದ್ದಾನೆ ಶ್ರೀಕೃಷ್ಣ.

ಎರಡನೇಯವರು, ಗೋಮಾತೆ. ಗೋವೆಂದರೆ ಹಿಂದೂಗಳಿಗೆ ತಾಯಿ ಇದ್ದಂತೆ. ಹಾಗಾಗಿ ಆಕೆಯನ್ನು ನಾವು ಪೂಜಿಸುತ್ತೇವೆ. ಆಕೆಗೆ ಎಂಜಿಲು ತಿನ್ನಲು ಕೊಡುವುದಿಲ್ಲ. ಕೆಲವರು ಗಂಡು ಕರು ಹುಟ್ಟಿತೆಂದು, ಅದಕ್ಕೆ ಹಿಂಸೆ ಕೊಡುತ್ತಾರೆ.  ಎಷ್ಟೋ ಕಡೆ ಸರಿಯಾಗಿ ದನಗಳನ್ನು ಸಾಕದೇ, ಅದರ ಹಾಲನ್ನಷ್ಟೇ ಉಪಯೋಗಿಸಿ, ದುಡ್ಡು ಮಾಡಿಕೊಂಡವರು, ಮುಂದೊಂದು ದಿನ, ತಮ್ಮ ಮಕ್ಕಳಿಂದಲೇ, ಹೊರದೂಡಲ್ಪಟ್ಟ, ದೂರವಾದ ಘಟನೆಗಳು ನಡೆದಿದೆ. ಹಾಗಾಗಿ ಗೋವನ್ನು ಸಾಕುವವರು ಆಕೆಯನ್ನು ಪ್ರೀತಿಯಿಂದ ಕಾಣಬೇಕು. ಆಕೆಗೆ ನೋವು ಮಾಡಿದರೆ, ಆಕೆಗೆ ಬೈದರೆ, ಆ ಪಾಪ ನಮ್ಮನ್ನು ತಾಕದೇ ಬಿಡುವುದಿಲ್ಲ.

ಮೂರನೇಯವರು, ವೇದಗ್ರಂಥ. ವೇದಗ್ರಂಥಗಳನ್ನು ಸುಮ್ಮನೆ ರಚಿಸಿಲ್ಲ. ಅದರ ಪಠಣಯಿಂದಲೇ, ಎಷ್ಟೋ ಪಾಪ ನಾಶವಾಗುತ್ತದೆ. ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ನಕಾರಾತ್ಮಕ ಶಕ್ತಿಗಳ ನಾಶ ಮಾಡಲೆಂದೇ, ಸಕಾರಾತ್ಮಕ ಶಕ್ತಿ ಪ್ರವೇಶವಾಗಿ, ಮನುಷ್ಯ ಉದ್ಧಾರವಾಗಲೆಂದೇ, ವೇದಗಳನ್ನು ರಚಿಸಲಾಗಿದೆ. ಹಾಗಾಗಿ ವೇದಗಳನ್ನು ಎಂದಿಗೂ ಯಾರೂ ಬೈಯ್ಯಬಾರದು.

- Advertisement -

Latest Posts

Don't Miss