Thursday, June 1, 2023

Latest Posts

‘ಅಮಿತ್ ಶಾ, ಮೋದಿ ಸೇರಿ ಷಡ್ಯಂತ್ರ ಮಾಡ್ತಿದ್ದಾರೆ’- ಸಿದ್ದು ಆರೋಪ

- Advertisement -

ಬೆಂಗಳೂರು: ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಕೈವಾಡವಿದೆ. ರಾಜ್ಯ ಸರ್ಕಾರದ ವಿರುದ್ಧ ಅಮಿತ್ ಶಾ ಮತ್ತು ನರೇಂದ್ರ ಮೋದಿ ಸೇರಿ ಷಡ್ಯಂತ್ರ ನಡೆಸ್ತಿದ್ದಾರೆ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಆನಂದ್ ಸಿಂಗ್ ರಾಜೀನಾಮೆ ನೀಡಿರೋ ಹಿಂದೆ ಬಿಜೆಪಿಯ ಕೈವಾಡ ಇದೆ. ಮೈತ್ರಿ ಸರ್ಕಾರದ ವಿರುದ್ಧ ಆಪರೇಷನ್ ನಡೆಸ್ತಿರೋ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೊತೆ ಪ್ರಧಾನಿ ಮೋದಿ ಕೂಡ ಸೇರಿಕೊಂಡಿದ್ದಾರೆ ಅಂತ ಸಿದ್ದರಾಮಯ್ಯ ಆರೋಪಿಸಿದ್ರು.

ಇನ್ನ ಬಿಜೆಪಿಯ ಆಪರೇಷನ್ ಕಮಲಕ್ಕೆ ಪ್ರತಿಯಾಗಿ ನೀವು ರಿವರ್ಸ್ ಆಪರೇಷನ್ ಮಾಡ್ತೀರಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾವು ಯಾವುದೇ ರೀತಿ ರಿವರ್ಸ್ ಆಪರೇಷನ್ ಮಾಡೋದಿಲ್ಲ. ಅಗತ್ಯ ಬಿದ್ರೆ ನೋಡೋಣ, ಆದ್ರೂ ನಮಗೆ ಆಸಕ್ತಿಯಿಲ್ಲ ಅಂತ ಸಿದ್ದರಾಮಯ್ಯ ದ್ವಂದ್ವ ನುಡಿದ್ರು.

ರಾಜ್ಯ ರಾಜಕಾರಣದ ಬಗ್ಗೆ ಕೋಡಿ ಮಠದ ಶ್ರೀಗಳು ನುಡಿದ ಭವಿಷ್ಯವೇನು..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=knQ5ET_3P2c
- Advertisement -

Latest Posts

Don't Miss