Thursday, December 26, 2024

Latest Posts

ಬೀಟ್ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ನಷ್ಟವೇನು..?

- Advertisement -

ನಾವು ನಿಮಗೆ ಬೀಟ್‌ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳ ಬಗ್ಗೆ ಹೇಳಿದ್ದೇವೆ. ಆದ್ರೆ ನೀವು ಸರಿಯಾದ ರೀತಿಯಲ್ಲಿ, ಸರಿಯಾದ ಪ್ರಮಾಣದಲ್ಲಿ ಬೀಟ್‌ರೂಟ್ ಸೇವಿಸದೇ, ನಿಮಗೆ ಬೇಕಾದಂತೆ ತಿಂದರೆ, ಅದರಿಂದ ನಷ್ಟವೂ ಆಗಲಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಬೀಟ್ರೂಟ್ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

ಅಮೃತ ಅತಿಯಾದರೂ ವಿಷವೇ ಎಂದು ಹೇಳಿದ ಹಾಗೆ, ಆರೋಗ್ಯಕರವೆಂದು ನಾವು ಯಾವುದೇ ಆಹಾರವನ್ನೂ ಅಗತ್ಯಕ್ಕಿಂತ ಹೆಚ್ಚು ಸೇವಿಸಿದರೆ, ಅದು ನಮ್ಮ ಪ್ರಾಣಕ್ಕೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಎಲ್ಲ ರೀತಿಯ ಆಹಾರವನ್ನು ಲಿಮಿಟ್‌ನಲ್ಲೇ ಸೇವಿಸಬೇಕು. ಅದೇ ರೀತಿ ನೀವು ಅಗತ್ಯಕ್ಕಿಂತ ಹೆಚ್ಚು ಬೀಟ್‌ರೂಟನ್ನ ಸೇವಿಸಿದ್ದಲ್ಲಿ, ಅನಾರೋಗ್ಯ ಸಂಭವಿಸುತ್ತದೆ.

ಚಳಿಗಾಲದಲ್ಲಿ ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ತ್ವಚೆಯು ಮೃದುವಾಗಿರುತ್ತದೆ..!

ಅದು ಹೇಗೆ ಅಂದ್ರೆ, ನೀವು ಶುಗರ್ ಪೇಶಂಟ್ ಆಗಿದ್ದಲ್ಲಿ, ನೀವು ವಾರಕ್ಕೆ ಎರಡು ಬಾರಿಯಷ್ಟೇ, ಅದೂ ಮಿತಿಯಾಗಿ ಬೀಟ್‌ರೂಟ್ ಸೇವನೆ ಮಾಡಬೇಕು. ಇಲ್ಲವೆಂದಲ್ಲಿ ಇದರಲ್ಲಿರುವ ಸಕ್ಕರೆ ಅಂಶದಿಂದ ನಿಮ್ಮ ಶುಗರ್ ಕಡಿಮೆಯಾಗುವುದರ ಬದಲು ಹೆಚ್ಚಾಗುತ್ತದೆ. ಹಾಗಾಗಿ ನೀವು ಬೀಟ್‌ರೂಟ್ ಲಿಮಿಟ್‌ನಲ್ಲಿ ತಿಂದರೆ, ನಿಮ್ಮ ಶುಗರ್ ನಾರ್ಮಲ್ ಆಗಿರುತ್ತದೆ. ಅದೇ ನೀವು ಅತಿಯಾಗಿ ತಿಂದರೆ, ಬೀಟ್‌ರೂಟ್ ನಿಮಗೆ ಜೀವಹಾನಿ ಮಾಡಬಹುದು.

- Advertisement -

Latest Posts

Don't Miss