ತುಂಬಾ ಜನರಿಗೆ ಟೀ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಾಗಿರತ್ತೆ. ಬೆಳಿಗ್ಗೆ ಎದ್ದ ಬಳಿಕ, ತಿಂಡಿ ಜೊತೆ, ಮತ್ತೊಮ್ಮೆ ಊಟದ ಬಳಿಕ, ಸಂಜೆ, ಹೀಗೆ ದಿನಕ್ಕೆ 10 ಸಲವಾದ್ರೂ ಅವರು ಟೀ ಕುಡಿತಾರೆ. ಇದೇ ರೀತಿ ಕಾಫಿ ಪ್ರಿಯರು ಕೂಡ. ಆದ್ರೆ ಅಗತ್ಯಕ್ಕಿಂತ ಹೆಚ್ಚು ಕಾಫಿ ಸೇವನೆ ನಿಮ್ಮ ಆರೋಗ್ಯ ಮತ್ತು ಸೌಂದರ್ಯಕ್ಕೆ ಕುತ್ತು ತರೋದು ಖಚಿತ. ಹಾಗಾದ್ರೆ ಕಾಫಿ ಕುಡಿಯುವಾಗ ಯಾವ ವಿಷಯವನ್ನು ನಾವು ತಿಳಿದುಕೊಳ್ಳಬೇಕು ಅಂತಾ ಹೇಳ್ತೀವಿ ಕೇಳಿ..
ಮನೆಯಲ್ಲೇ ಸಿಂಪಲ್ ಮತ್ತು ರುಚಿಯಾಗಿ ತಯಾರಿಸಬಹುದು ಮೊಸರೊಡೆ (ದಹಿ ವಡಾ)..
ನಿಮ್ಮ ಮುಖ ಮೊಡವೆಗಳಿಲ್ಲದೇ, ಲಕ ಲಕ ಅಂತಾ ಹೊಳೆಯಬೇಕು ಅಂದ್ರೆ, ನೀವು ಲಿಮಿಟ್‌ನಲ್ಲಿ ಕಾಫಿ ಕುಡಿಯಬೇಕು. ಯಾಕಂದ್ರೆ ಇದು ಉಷ್ಣ ಪೇಯವಾಗಿರುವುದರಿಂದ, ಇದರ ಸೇವನೆಯಿಂದ ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಆಗ ಮುಖದ ಮೇಲೆ ಮೊಡವೆಯಾಗೋದು, ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ.
ಕೆಲವರು ನೈಟ್ ಶಿಫ್ಟ್ ಇರುವಾಗ, ಕಾಫಿ ಕುಡಿಯುತ್ತಾರೆ. ಯಾಕಂದ್ರೆ ನಿದ್ರೆ ಬಾರದಿರಲಿ ಅಂತಾ. ಹಾಗಾಗಿ ಹೆಚ್ಚು ಕಾಫಿ ಕುಡಿದ್ರೆ, ನಿದ್ರಾ ಹೀನತೆ ಸಮಸ್ಯೆಯಿಂದ ಬಳಲುತ್ತೀರಿ. ನಿದ್ರೆ ಸರಿಯಾಗದಿದ್ದರೆ, ಕಿರಿಕಿರಿಯಾಗುತ್ತದೆ. ನೀವು ಚೈತನ್ಯದಾಯಕವಾಗಿ ಇರಲು ಸಾಧ್ಯವಾಗೋದಿಲ್ಲಾ. ಇದರಿಂದ ಯಾವ ಕೆಲಸ ಮಾಡಲೂ ನಿಮಗೆ ಇಷ್ಟವಾಗೋದಿಲ್ಲಾ.
ಬೆಟ್ಟದ ನೆಲ್ಲಿಕಾಯಿ ತಿನ್ನುವುದರಿಂದ ಆಗುವ ಆರೋಗ್ಯ ಲಾಭ ಕೇಳಿದ್ರೆ ನೀವೂ ಇದನ್ನ ತಿಂತೀರಾ..
ನೀವು ಕೆಲ ವಿಷಯಗಳಿಗಾಗಿ ಟೆನ್ಶನ್‌ನಲ್ಲಿದ್ದರೆ, ಕಾಫಿ ಮಾತ್ರ ಕುಡಿಯಬೇಡಿ. ಕೆಲವರು ಕಾಫಿ ಕುಡಿದರೆ, ಮೈಂಡ್ ರಿಲ್ಯಾಕ್ಸ್ ಆಗುತ್ತದೆ ಅಂತಾ ಹೇಳ್ತಾರೆ. ಆದ್ರೆ ಆ ವೇಳೆಗೆ ನಿಮ್ಮ ಮೈಂಡ್ ರಿಲ್ಯಾಕ್ಸ್ ಆಗಬಹುದು. ಆದ್ರೆ ನಂತರ ಅದು ನಿಮ್ಮ ಮಾನಸಿಕ ಒತ್ತಡವನ್ನ ಹೆಚ್ಚಿಸುತ್ತದೆ. ಹಾಗಾಗಿ ಕಾಫಿ ಕುಡಿಯುವುದಿದ್ದರೆ, ದಿನಕ್ಕೆ ಒಮ್ಮೆ, ಚಿಕ್ಕ ಲೋಟದಲ್ಲಿ ಕಾಫಿ ಸೇವನೆ ಮಾಡಿ.