Monday, December 23, 2024

Latest Posts

ಯಾಕೆ ನಾವು ಬ್ರೆಡ್ ತಿನ್ನಬಾರದು ಗೊತ್ತಾ..?

- Advertisement -

ಬ್ರೆಡ್ ಅಂದ್ರೆ ಕೆಲವರಿಗೆ ಇಷ್ಟದ ತಿನಿಸು. ಬೇಕಾದ್ರೆ ಪ್ರತಿದಿನ ಬ್ರೆಡ್ ಕೊಟ್ಟರೂ ಅದನ್ನ ತಿಂತಾರೆ. ಆದ್ರೆ ಇನ್ನು ಕೆಲವರು ಪ್ರತಿದಿನ ಬೆಳಿಗ್ಗೆ ಅದನ್ನೇ ತಿಂದು ಆಫೀಸಿಗೆ ಓಡುತ್ತಾರೆ. ಯಾಕಂದ್ರೆ ಅವರಿಗೆ ಬ್ರೆಡ್ ಅೞದ್ರೆ ಆರೋಗ್ಯಕರ ತಿನಿಸು, ಲೈಟ್ ಆಗಿರತ್ತೆ. ಹೊಟ್ಟೆನೂ ತುಂಬತ್ತೆ ಅನ್ನೋ ಭ್ರಮೆ ಇರತ್ತೆ. ಆದ್ರೆ ನಾವು ಬ್ರೆಡ್ ತಿನ್ನಲೇಬಾರದು ಅನ್ನೋ ಸತ್ಯ ಹಲವರಿಗೆ ಗೊತ್ತಿಲ್ಲ. ಹಾಗಾದ್ರೆ ಯಾಕೆ ಬ್ರೆಡ್ ತಿನ್ನಬಾರದು ಅೞತಾ ತಿಳಿಯೋಣ ಬನ್ನಿ..

ಅಂಜೂರದ ಹಣ್ಣುಗಳನ್ನು ಹೀಗೆ ತಿಂದರೆ 10 ದಿನದಲ್ಲಿ ಮಧುಮೇಹ ಸಮಸ್ಯೆ ನಿವಾರಣೆ..!

ಮೊದಲನೇಯ ಕಾರಣ: ಬ್ರೆಡ್ ತಿನ್ನಬಾರದು ಅನ್ನೋದಕ್ಕೆ ಮೊದಲ ಕಾರಣ, ಇದರಲ್ಲಿ ಮೈದಾ ಬಳಸಿರ್ತಾರೆ. ಪ್ರಿಸರ್ವೇಟಿವ್ಸ್ ಬಳಸಿರ್ತಾರೆ. ಕೆಲವರು ಬ್ರೌನ್ ಬ್ರೆಡ್ ಅಂತಾ ಹೇಳಿ, ಅದರಲ್ಲಿ ಮೈದಾವನ್ನೇ ಬಳಸಿ, ಬ್ರೌನ್ ಕಲರ್ ಹಾಕಿ ಮಾರ್ತಾರೆ. ಯಾಕಂದ್ರೆ ಹೆಚ್ಚಿನವರು ಬ್ರೌನ್ ಬ್ರೆಡ್ ಅಂದ್ರೆ ಗೋಧಿಯಿಂದ ಮಾಡಿದ ಬ್ರೆಡ್ ತಿನ್ನೋದು. ಹಾಗಾಗಿ ಬ್ರೌನ್ ಬ್ರೆಡ್ ಬೇಗ ಮಾರಾಟವಾಗತ್ತೆ ಅಂತಾ, ಈ ರೀತಿ ಮಾಡಲಾಗತ್ತೆ. ಮೈದಾ ಮತ್ತು ಪ್ರಿಸರ್ವೇಟಿವ್ಸ್ ಬಳಸಿ ಮಾಡಿದ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುತ್ತದೆ . ಅಲ್ಲದೇ, ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ.

ಎರಡನೇಯ ಕಾರಣ: ಇದು ಫರ್ಮೆಂಟ್ ಮಾಡಿದ ಆಹಾರವಾಗಿದೆ. ಇದನ್ನ ಮಾಡಿದ ತಕ್ಷಣವೇ ಇದು ನಿಮಗೆ ತಿನ್ನಲು ಸಿಗಲ್ಲ. ಸಿಕ್ಕರೂ, ನೀವು ಇದನ್ನ ಬೂಸ್ಟ್ ಬರುವವರೆಗೂ ತಿನ್ನುತ್ತೀರಿ. ಹಾಗಾಗಿ ಇದು ಆರೋಗ್ಯಕ್ಕೆ ಹಾನಿಕಾರಕ. ಇದರಲ್ಲಿ ಈಸ್ಟ್ ಹಾಕಲಾಗುತ್ತದೆ. ಹಾಗಾಗಿ ಈಸ್ಟ್ ಹಾಕಿ ಕೆಲ ಸಮಯ ಇದನ್ನ ಫರ್ಮೆಂಟ್ ಮಾಡಲಾಗತ್ತೆ. ಹಾಗಾಗಿ ಇದು ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ.

ಗರ್ಭಿಣಿಯರು ಈ ಹಣ್ಣು ಮತ್ತು ತರಕಾರಿಯನ್ನು ಸೇವಿಸಬಾರದು..

ಮೂರನೇಯ ಕಾರಣ: ಬ್ರೆಡ್ ಸೇವನೆಯಿಂದ ಶುಗರ್ ಬರುವ ಸಾಧ್ಯತೆ ಇರುತ್ತದೆ. ಇದರಲ್ಲಿ ಮೈದಾ ಮತ್ತು ಸಕ್ಕರೆ ಅಂಶವಿರುವುದರಿಂದ, ಸರಾಗವಾಗಿ ಇದನ್ನು ನೀವು ತಿಂದರೆ, ಸಕ್ಕರೆ ಖಾಯಿಲೆ ಬರುವ ಮತ್ತು ಈಗಾಗಲೇ ಶುಗರ್ ಇದ್ದರೆ, ಅದರ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬ್ರೆಡ್‌ನ್ನ ಅತೀಯಾಗಿ ಸೇವಿಸಬೇಡಿ.

ನಾಲ್ಕನೇಯ ಕಾರಣ: ಇನ್ನು ಮೈದಾ ಸೇವನೆಯಿಂದ ಬೊಜ್ಜು ಹೆಚ್ಚಾಗುತ್ತದೆ. ಬೊಜ್ಜ ಹೆಚ್ಚಾದಾಗಲೇ, ಹಲವರು ರೋಗಗಳು ಬರೋದು. ಶುಗರ್, ಜೀರ್ಣಕ್ರಿಯೆ ಸಮಸ್ಯೆ, ಹೃದಯದ ಸಮಸ್ಯೆ, ಇತ್ಯಾದಿ ಆರೋಗ್ಯ ಸಮಸ್ಯೆಗಳು ಬರುತ್ತದೆ.

ಐದನೇಯ ಕಾರಣ: ಹೊಟ್ಟೆ ಬೇನೆ ಬರುತ್ತದೆ. ನೀವು ಪ್ರತಿದಿನ ಬ್ರೆಡ್ ತಿನ್ನುವವರಾಗಿದ್ದಲ್ಲಿ ಇಂದೇ ಇದನ್ನ ಬಿಟ್ಟುಬಿಡಿ. ಇಲ್ಲದಿದ್ದಲ್ಲಿ, ಗ್ಯಾಸ್ಟಿಕ್ ಸಮಸ್ಯೆ, ಮಲಬದ್ಧತೆ, ಬ್ಲೋಟಿಂಗ್ ಸಮಸ್ಯೆ ಸೇರಿ ಇತರ ಹೊಟ್ಟೆ ನೋವಿನ ಸಮಸ್ಯೆ ಬರುತ್ತದೆ. ಹಾಗಾಗಿ ಬ್ರೆಡ್ ಸೇವನೆ ಮಾಡುವುದನ್ನ ನಿಲ್ಲಿಸಿಬಿಡಿ.

- Advertisement -

Latest Posts

Don't Miss