ನಮ್ಮಲ್ಲಿ ಹಲವರಿಗೆ ಕರಿದ ತಿಂಡಿ ಅಂದ್ರೆ ಸಖತ್ ಇಷ್ಟಾ ಆಗತ್ತೆ. ಅದರಲ್ಲೂ ವಡಾ ಅಂದ್ರೆ ಹೆಚ್ಚಿನವರಿಗೆ ಪ್ರಿಯವಾದದು. ಇನ್ನು ಸೌತ್ ಮತ್ತು ನಾರ್ತ್ ಎರಡೂ ಕಡೆ ಫೇಮಸ್ ಅಂದ್ರೆ ದಹಿ ವಡಾ. ಗರಿ ಗರಿಯಾದ ವಡೆಯೊಂದಿಗೆ, ತಂಪಾದ ಸಿಹಿ ಮೊಸರನ್ನ ಹಾಕಿ, ಖಾರಾ ಬೂಂದಿ ಜೊತೆ ತಿಂದ್ರೆ, ಸಖತ್ ಟೇಸ್ಟಿಯಾಗಿರತ್ತೆ. ಆದ್ರೆ ಇದು ಆರೋಗ್ಯಕ್ಕೆ ಸಿಕ್ಕಾಪಟ್ಟೆ ಕೆಟ್ಟದ್ದಂತೆ. ಹಾಗಾದ್ರೆ ಯಾಕೆ ದಹಿ ವಡಾ ತಿನ್ನಬಾರದು..? ಇದರಿಂದಾಗುವ ಸೈಡ್ ಎಫೆಕ್ಟ್ ಆದ್ರೂ ಏನು ಅಂತಾ ತಿಳಿಯೋಣ ಬನ್ನಿ..
ದಹಿ ವಡಾ ಯಾಕೆ ತಿನ್ನಬಾರದು ಅಂತಾ ಹೇಳಿದ್ರೆ, ವಡಾ ಮಾಡೋದು ಉದ್ದಿನ ಬೇಳೆಯಿಂದ. ಮತ್ತು ಅದಕ್ಕೆ ಮೊಸರು ಸೇರಿಸಿ ತಿನ್ನಲಾಗುತ್ತದೆ. ಆದ್ರೆ ಉದ್ದು ಮತ್ತು ಮೊಸರು ವಿರುದ್ಧ ಆಹಾರಗಳಾಗಿದೆ. ಈ ಮೊದಲು ನಾವು ನಿಮಗೆ ಆಹಾರಗಳ ಬಗ್ಗೆ ಹೇಳಿದ್ದೆವು. ಹಾಲಿನ ಜೊತೆ ಸಿಟ್ರಿಕ್ ಆ್ಯಸಿಡ್ ಇರುವ ಹಣ್ಣು, ತುಪ್ಪದ ಜೊತೆ ಜೇನುತುಪ್ಪ ಹೀಗೆ ಇಂಥ ಆಹಾರಗಳನ್ನ ತಿನ್ನಬಾರದು ಅಂತಾ ನಾವು ನಿಮಗೆ ಹೇಳಿದ್ದೆವು.
ಅದೇ ರೀತಿ, ಉದ್ದಿನ ಬೇಳೆ ಮತ್ತು ಮೊಸರು ಕೂಡ ವಿರುದ್ಧ ಆಹಾರವಾಗಿದೆ. ಉದ್ದಿನ ಬೇಳೆಯ ಪದಾರ್ಥ ಮತ್ತು ಮೊಸರು ಸೇವಿಸಿದರೆ, ದೇಹದಲ್ಲಿ ಬಿಪಿ ಲೆವಲ್ ಸಡನ್ನಾಗಿ ಹೆಚ್ಚಾಗತ್ತೆ. ಹಾಗಾಗಿ ಉದ್ದಿನ ಬೇಳೆ ವಡೆ ಮತ್ತು ಮೊಸರನ್ನ ಸೇವಿಸಬಾರದು. ನಿಮಗೆ ದಹಿ ವಡಾನೇ ತಿನ್ನಬೇಕು ಅಂತಿದ್ರೆ, ಹೆಸರು ಬೇಳೆಯ ಬಜ್ಜಿ ಅಥವಾ ವಡಾ ಮಾಡಿ, ಅದಕ್ಕೆ ಮೊಸರು ಸೇವಿಸಿ ತಿನ್ನಬಹುದು.
ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು..?