Wednesday, September 17, 2025

Latest Posts

ನಿಮ್ಮ ಸ್ಕಿನ್ ಗ್ಲೋ ಆಗಲು ಮಲಗುವ ಮುನ್ನ ಈ ಟಿಪ್ಸ್ ಫಾಲೋ ಮಾಡಿ..

- Advertisement -

ತಿಳಿಯಾದ, ಸ್ವಚ್ಛವಾದ ಕಲೆ ಇಲ್ಲದ ತ್ವಚೆಯನ್ನೇ ಎಲ್ಲರೂ ಬಯಸೋದು. ನಿಮ್ಮ ತ್ವಚೆಯೂ ಹೀಗೆ ಕ್ಲೀನ್ ಆಗಿರಬೇಕು ಅಂದ್ರೆ ನೀವು ಕೆಲವು ಟಿಪ್ಸ್ ಫಾಲೋ ಮಾಡಬೇಕಾಗತ್ತೆ. ಹಾಗಾಗಿ ನಾವಿಂದು ಮಲಗುವ ಮುನ್ನ ಯಾವ ಟಿಪ್ಸ್ ಫಾಲೋ ಮಾಡಿದ್ರೆ ಉತ್ತಮ ಅನ್ನೋ ಬಗ್ಗೆ ಟಿಪ್ಸ್ ನೀಡಲಿದ್ದೇವೆ..

ಒಂದು ಸ್ಪೂನ್ ಅಕ್ಕಿ ಮತ್ತು ಒಂದು ಸ್ಪೂನ್ ಬಿಳಿ ಎಳ್ಳನ್ನು ರಾತ್ರಿ ನೀರಿನಲ್ಲಿ ನೆನೆಸಿಡಿ. ಮರುದಿನ ನೀರಿನಿಂದ ಇವೆರಡನ್ನೂ ಬೇರ್ಪಡಿಸಿ, ಚೆನ್ನಾಗಿ ರುಬ್ಬಿ ತರಿ ತರಿಯಾದ ಪೇಸ್ಟ್ ತಯಾರಿಸಿ. ಇದರಿಂದ ಮುಖವನ್ನು 2ರಿಂದ 3 ನಿಮಿಷ ಸ್ಕ್ರಬ್ ಮಾಡಿ, 10 ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖ ತೊಳೆಯಿರಿ.

ಮಾರ್ವಾಡಿ ಉದ್ಯಮಿಗಳ ಶ್ರೀಮಂತಿಕೆಗೆ ಕಾರಣ ಈ 7 ರೂಲ್ಸ್- ಭಾಗ 1

ನಿಮ್ಮ ಮುಖಕ್ಕೆ ಸ್ಯೂಟ್ ಆಗುವ ಸ್ಲೀಪಿಂಗ್ ಮಾಸ್ಕ್ ಬಳಸಿ. ಕೆಲವು ರಾತ್ರಿ ಮಲಗುವಾಗ ಮಾಯ್ಶರೈಸಿಂಗ್ ಕ್ರೀಮ್ ಬಳಸುತ್ತಾರೆ. ಇದು ಕೂಡ ಉತ್ತಮ. ಆದ್ರೆ ಸ್ಲೀಪಿಂಗ್ ಮಾಸ್ಕ್ ಇನ್ನೂ ಉತ್ತಮ. ಮಾರುಕಟ್ಟೆಯಲ್ಲಿ ತರಹೇವಾರಿ ಕಂಪೆನಿಯ ಸ್ಲೀಪಿಂಗ್ ಮಾಸ್ಕ್ ಸಿಗುತ್ತದೆ. ನಿಮ್ಮ ಮುಖಕ್ಕೆ ಸ್ಯೂಟ್ ಆಗುವ ಸ್ಲೀಪಿಂಗ್ ಮಾಸ್ಕ್ ಬಳಸಿ. ವಾರದಲ್ಲಿ ಎರಡು ಬಾರಿ ಈ ಮಾಸ್ಕ್ ಬಳಸಿದರೆ ಸಾಕು.

ರಾತ್ರಿ ಮಲಗುವಾಗ 4 ಸ್ಪೂನ್ ಹಾಲಿಗೆ 2 ಸ್ಪೂನ್ ಜೇನುತುಪ್ಪ ಸೇರಿಸಿ, ತೆಳ್ಳಗಿನ ಫೇಸ್‌ಪ್ಯಾಕ್‌ ರೆಡಿ ಮಾಡಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಮಸಾಜ್ ಮಾಡಿ, ಮುಖ ತೊಳೆಯಿರಿ. ಇದರಿಂದ ನಿಮ್ಮ ಮುಖ ಕಾಂತಿಯುತವಾಗಿರುತ್ತದೆ. ಇದು ಕೂಡ ವಾರದಲ್ಲಿ 2 ಬಾರಿ ಮಾಡಿದ್ರೆ ಸಾಕು.

ಮಾರ್ವಾಡಿ ಉದ್ಯಮಿಗಳ ಶ್ರೀಮಂತಿಕೆಗೆ ಕಾರಣ ಈ 7 ರೂಲ್ಸ್- ಭಾಗ 2

ಇನ್ನು ರಾತ್ರಿ ಮಲಗುವಾಗ ನಿಮ್ಮ ಮುಖವನ್ನು ಕ್ಲೀನಾಗಿ ತೊಳೆದು ಮಲಗಿ. ನೀವು ಮಲಗುವ ದಿಂಬು, ಬೆಡ್, ಹೊದಿಕೆ ಸ್ವಚ್ಛವಾಗಿರಲಿ. 7ರಿಂದ 8 ಗಂಟೆ ಯಾವುದೇ ತೊಂದರೆ ಇಲ್ಲದೇ ನೆಮ್ಮದಿಯಾಗಿ ನಿದ್ದೆ ಮಾಡಿ. ವಾರದಲ್ಲಿ 3 ಬಾರಿಯಾದ್ರೂ ಗೋಲ್ಡನ್ ಮಿಲ್ಕ್ ಕುಡಿದು ಮಲಗಿ. ಇದು ನಿಮ್ಮ ತ್ವಚೆ ಕಾಂತಿಯುತವಾಗಿರಲು ಸಹಾಯ ಮಾಡುತ್ತದೆ.

- Advertisement -

Latest Posts

Don't Miss