Health Tips: ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಎಷ್ಟು ಕೆಟ್ಟದ್ದು ಅಂತಾ ಎಲ್ಲರಿಗೂ ಗೊತ್ತು. ಆದರೂ ಕೂಡ ಕೆಲವರು ಮದ್ಯಪಾನ, ಧೂಮಪಾನ ಮಾಡುವುದನ್ನು ಬಿಡುವುದಿಲ್ಲ. ಆದರೆ ಈ ಚಟಗಳಿಂದ ಮುಂದೆ ಕ್ಯಾನ್ಸರ್‌ನಂಥ ಮಾರಕ ಖಾಯಿಲೆ ಬರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ವಿವರಿಸಿದ್ದಾರೆ.
ನೀವು ಧೂಮಪಾನ, ಮದ್ಯಪಾನ ಮಾಡದಿದ್ದರೂ, ನಿಮ್ಮ ಜೀವನ ಶೈಲಿ ಸರಿಯಾಗಿ ಇಲ್ಲದಿದ್ದಲ್ಲಿ, ನಿಮಗೆ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಎಂದಿಗೂ ನಾನ್‌ವೆಜ್ ತಿನ್ನದವರು, ಧೂಮಪಾನ, ಮದ್ಯಪಾನ ಮಾಡದವರಿಗೂ ಕೂಡ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಆದರೆ ಅದು ಕಡಿಮೆ ಪ್ರಮಾಣದಲ್ಲಿರುತ್ತದೆ. ಧೂಮಪಾನ ಮಾಡುವವರಿಗೆ ಲಂಗ್ ಕ್ಯಾನ್ಸರ್ ಬರುವುದು ಹೆಚ್ಚು. ಹಾಗಾಗಿ ವೈದ್ಯರು ಧೂಮಪಾನದ ಚಟವಿದ್ದರೆ, ಅದನ್ನು ಬಿಡುವುದು ಉತ್ತಮ ಎನ್ನುತ್ತಾರೆ.
ಧೂಮಪಾನ ಮಾಡದವರಲ್ಲಿ ಇಬ್ಬರಿಗೆ ಕ್ಯಾನ್ಸರ್ ಬಂದರೆ, ಧೂಮಪಾನ ಮಾಡಿದವರಲ್ಲಿ ಅರ್ಧದಷ್ಟು ಜನರಿಗೆ ಕ್ಯಾನ್ಸರ್ ಬಂದಿದೆ. ಅದರಲ್ಲೂ ಹೆಚ್ಚಾಗಿ ಲಂಗ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಧೂಮಪಾನದಿಂದ ಬರುವ ಹೊಗೆ, ಶ್ವಾಸಕೋಶಕ್ಕೆ ಸೇರಿ, ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ. ವೈದ್ಯರು ಈ ಬಗ್ಗೆ ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..